
ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾಶಿ ಅಲ್ಲಿ ನಿನ್ನೆ 6 ಕಿಮೀ ಉದ್ದ ಮೆಗಾ ರೋಡ್ ಶೋ ನಡೆಸಿದ್ದರು .
ಇಂದು ಬೆಳಿಗ್ಗೆ ದಶಾಶ್ವಮೇಧ ಘಾಟ್ನಲ್ಲಿ ಗಂಗಾ ಸ್ನಾನ ಮಾಡಿ ಇಂದು ಗಂಗಾ ಸಪ್ತಮಿಯ ಶುಭ ಇರುವುದರಿಂದ ಗಂಗಾ ಆರತಿ ನೆರವೇರಿಸಿದರು ನಂತರ ಕಾಶಿಯ ಕಾಲಭೈರವನ ಆಶೀರ್ವಾದ ಪಡೆದು 11.40ರ ಅಭಿಜಿನ್ ಮುಹೂರ್ತದಲ್ಲಿ ಮೋದಿ ನಾಮಪತ್ರ ಸಲ್ಲಿಸಿದ್ದಾರೆ.
ಈ ದಿನ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥಸಿದ್ಧಿ ಯೋಗದ ಜೊತೆಗೆ ಭೌಮ ಪುಷ್ಯ ನಕ್ಷತ್ರದ ಕಾಕತಾಳೀಯ ಸಂಗಮವಾಗಿದೆ. ಇದು ಉತ್ತಮ ಮುಹೂರ್ತದ ದಿನ ಎಂದು ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸುವ ವೇಳೆ 12 ರಾಜ್ಯಗಳ ಸಿಎಂಗಳು ಸೇರಿದ್ದರು. ಇವರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜಸ್ಥಾನ, ಅಸ್ಸೋಂ, ಹರಿಯಾಣ, ಗೋವಾ, ಸಿಕ್ಕೀಂ, ತ್ರಿಪುರಾ ಮುಖ್ಯಮಂತ್ರಿಗಳು ಸಹ ಭಾಗಿಯಾಗಿದ್ದರು ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿಯವರ ಜೊತೆ ಇದ್ದಿದ್ದರೂ.
ನರೇಂದ್ರ ಮೋದಿಯವರು ಸ್ಪರ್ಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ 7ನೇ ಹಂತ ಜೂನ್ 1 ರಂದು ಮತದಾನ ನಡೆಯಲಿದೆ. ಈ ಬಾರಿಯೂ ವಾರಾಣಸಿಯಿಂದ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಭರವಸೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.
ಮೋದಿಯವರ ಹ್ಯಾಟ್ರಿಕ್ ಗೆಲುವಿಗಾಗಿ ಬಿಜೆಪಿಯ ಘಟಾನುಘಟಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿರುವ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಹೇಗಾದರೂ ಮಾಡಿ ವಾರಾಣಸಿಯಲ್ಲಿ ತನ್ನ ಶಕ್ತಿ ತೋರಿಸಲು ಕೈ ಪಕ್ಷ ತೀವ್ರ ಪ್ರಯತ್ನ ನಡೆಸುತ್ತಿದೆ.
ಆದರೆ ವಾರಣಾಸಿಯ ಮತದಾರರು ಹೇಳುತ್ತಾರೆ ದೊಡ್ಡ ಗೆಲುವಿನೊಂದಿಗೆ ಪ್ರಧಾನಿ ಮೋದಿಯವರು ಮೂರನೇ ಬಾರಿ ವಾರಣಾಸಿಯ ಸಂಸದರಾಗಿ ಆಯ್ಕೆಯಾಗುತ್ತಾರೆ ಎಂದು.
