
ಹೊಸ ದೆಹಲಿ – ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಜನರು ನೀಡಿದ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ…!
“ತನ್ನನ್ನು ತಾನು ದೈವಿಕ ಶಕ್ತಿ” “ದೇವಮಾನವ” ಘೋಷಿಸಿಕೊಂಡ ಮೋದಿ ಮತ್ತು ಅವರ ದ್ವೇಷದ ರಾಜಕಾರಣವನ್ನು ದೇಶದ ಜನ ತಿರಸ್ಕರಿಸಿದೆ ಎಂದು ಸೋನಿಯಾ ಗಾಂಧಿ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ…!!
ಪ್ರಧಾನಮಂತ್ರಿ ಅವರ ಪ್ರತಿನಿಧಿಗಳು ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಸರ್ವಾನುಮತದ ಬೆಂಬಲ ಕೋರಿದಾಗ, ಇಂಡಿಯಾ ಒಕ್ಕೂಟ ಸಮ್ಮತಿಸಿತ್ತು…!
ಆದರೆ ಸಂಪ್ರದಾಯದಂತೆ ವಿರೋಧ ಪಕ್ಷಗಳಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡುವಂತೆ ಕೋರಿದಾಗ ಸರ್ಕಾರ ನಮ್ಮ ಮನವಿಯನ್ನು ತಿರಸ್ಕರಿಸಿತು ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ…!!
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಕುರಿತು ಪ್ರಸ್ಥಾಪಿಸಿದ ಅವರು, ಪರೀಕ್ಷಾ ಪೇ ಚರ್ಚಾ ಮಾಡುವ ಮೋದಿ ನೀಟ್ ಅಕ್ರಮಗಳ ಕುರಿತು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ…!