PM-USP: ಪ್ರಧಾನಮಂತ್ರಿ ಉಚ್ಚತಾರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ 2024, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಈಗಲೇ ಅರ್ಜಿ ಸಲ್ಲಿಸಿ.

(PM-USP) ಪ್ರಧಾನಮಂತ್ರಿ ಉಚ್ಚತಾರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ 2024 : ನಮಸ್ತೆ ಸ್ನೇಹಿತರೆ, ದೇಶದ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಕೇಂದ್ರೀಯ ವಲಯದ ಈ ಯೋಜನೆ (CSS) ಅಡಿಯಲ್ಲಿ ಒಂದು ಉಪಕ್ರಮವಾಗಿದ್ದು MHRD, ಭಾರತ ಸರಕಾರದ ಅಧಿನಿಯಮದಲ್ಲಿ ಬರುವ ಇಲಾಖೆಯು ಮುನ್ನಡೆಸುತ್ತಿದೆ,

ಆರ್ಥಿಕವಾಗಿ ಹಿಂದುಳಿದು ಶಿಕ್ಷಣದಲ್ಲಿ ಮುಂದುವರೆಯಲು ತೊಂದರೆಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗಾಗಿ ಹಾಗೂ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸಲು ಹಾಗೂ ಅವರ ಉನ್ನತ ಶಿಕ್ಷಣ ಸುಗಮವಾಗಿ ಸಾಗಲು ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ ಈ ಯೋಜನೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುತ್ತದೆ.

ಹೌದು ಸ್ನೇಹಿತರೆ, ಭಾರತದಲ್ಲಿ ಿಕ್ಷಣದಲ್ಲಿ ಯಾರು ಕೂಡ ವಂಚಿತರಾಗಬಾರದು ಹಾಗೂ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಇಟ್ಟ ಕನಸು ನನಸಾಗಬೇಕೆಂದು ಸರಕಾರ ಎನ್‌ಜಿಯೋ ಹಾಗೂ ಕೆಲವು ಸಂಘ-ಸಂಸ್ಥೆಗಳು ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಶಿಕ್ಷಣ ಸಾಮಗ್ರಿವನ್ನು ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಅದೇ ರೀತಿ ಕೇಂದ್ರ ಸರ್ಕಾರ ಕೂಡ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತನಾಗಬಾರದು ಹಾಗೂ ವಿದ್ಯಾರ್ಥಿಗೆ ಬೇಕಾದ ಎಲ್ಲ ಸಹಕಾರವನ್ನು ನೀಡುವ ಗುರಿಯನ್ನು ಇಟ್ಟುಕೊಂಡಿದೆ ಹಾಗಾಗಿ ಈ ಒಂದು ಯೋಜನೆ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುತ್ತದೆ ಎನ್ನುವುದು ಸತ್ಯ.

ಈಗ ಪ್ರಧಾನಮಂತ್ರಿ ಉಚ್ಚತಾರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ 2024, ಸಂಪೂರ್ಣ ವಿವರಣೆಯನ್ನು ನೋಡೋಣ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಇದರಿಂದ ಸಹಾಯವನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಪ್ರಧಾನಮಂತ್ರಿ ಉಚ್ಚತಾರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ ಕೇಂದ್ರ ಸರಕಾರದ ಯೋಜನೆಯ ಮೂಲಕ ಹೈಯರ್ ಸೆಕೆಂಡರಿ 12ನೇ ತರಗತಿಯ ಬೋರ್ಡ್ ನಲ್ಲಿ ಪರೀಕ್ಷೆ ಫಲಿತಾಂಶ ಅಂತ್ಯಗಳನ್ನು ಗಮನಿಸಿ ಉತ್ತಮ ಅಂಕೆಯನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷವೂ ಸುಮಾರು 82,000 ಹೊಸ ವಿದ್ಯಾರ್ಥಿ ವೇತನಗಳನ್ನು ಕೇಂದ್ರ ಸರಕಾರ ಈ ಯೋಜನೆಯಲ್ಲಿ ನೀಡುತ್ತಿದೆ.

ಪಿಯುಸಿ ಮುಗಿಸಿ ನಂತರ, ಮೆಡಿಕಲ್ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಸ್ನಾತಕೋತರ ಪದವಿಗಳನ್ನು ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಹಂಚಲಾಗುತ್ತದೆ ಹಾಗೂ ಈ ಯೋಜನೆಗಳಿಗೆ ಕೆಲವೊಂದಿಷ್ಟು ನಿಯಮಗಳು ಕೂಡ ಇವೆ ಹಾಗೂ ವಯಸ್ಸಿನ ಮಿತಿ ಮೀಸಲಾತಿ ಮಾನದಂಡಗಳು ಕೂಡ ಈ ಯೋಜನೆಯಲ್ಲಿ ಸೇರಿದೆ.


PM-USP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಹನ್ನೆರಡನೆಯ ತರಗತಿಯಲ್ಲಿ 80ಕ್ಕಿಂತ ಹೆಚ್ಚಿನ ಅಂಕೆಗಳನ್ನು ಗಳಿಸಿರಬೇಕು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಡಿಪ್ಲೋಮೋ ಅಥವಾ ಪದವಿ ಸ್ನಾತಕೋತರ ಪೂರ್ಣ ಸಮಯದ ಪದವಿಗೆ ದಾಖಲಾಗಿರಬೇಕು.
  • ಹಾಗೂ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ದಾಖಲಾಗಿರಬೇಕು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಾಜ್ಯದ ಹಾಗೂ ರಾಜ್ಯ ಸರಕಾರ ನೀಡುವ ಯೋಜನೆಗಳನ್ನು ಸ್ವೀಕರಿಸಲಿರಬಾರದು ಹಾಗೂ ಯಾವುದೇ ರೀತಿಯ ರಿಯಾಯಿತಿ ಪಡೆದಿರಬಾರದು.
  • ಕುಟುಂಬದ ವಾರ್ಷಿಕ ಆದಾಯ 4,50,000 ಮೀರಬಾರದು
  • ಇನ್ನಿತರೆ ಸರಕಾರಿ ಸ್ಕಾಲರ್ಶಿಪ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
  • ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50ರಷ್ಟು ಅಥವಾ 75ರಷ್ಟು ಅಂಕೆಗಳನ್ನು ಗಳಿಸಿರಬೇಕು ಇಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮಾನ್ಯತೆ ಪಡೆಯಲಾಗುತ್ತದೆ.

PM-USP ವಿದ್ಯಾರ್ಥಿ ವೇತನವು ದೇಶದ ಪ್ರತಿ ರಾಜ್ಯ ಹಾಗೂ ಶಿಕ್ಷಣ ಮಂಡಳಿಗೆ ಹಾಗೂ ಜನಸಂಖ್ಯೆ ಆಧಾರದ ಮೇಲೆ ಪ್ರತಿ ರಾಜ್ಯಗಳಿಗೆ ಹಂಚಲಾಗುತ್ತದೆ ವಿದ್ಯಾರ್ಥಿಗಳ ಪದವಿ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರತಿಭೆಯನ್ನು ಆಧರಿಸಿ ಇದು ಹಂಚಿಕೆ ಮಾಡಲಾಗುತ್ತದೆ, ಪ್ರತಿ ರಾಜ್ಯಗಳಿಗೆ ಹಾಗೂ ರಾಜ್ಯಗಳ ಮಂಡಳಿಗೆ ಈ ವಿದ್ಯಾರ್ಥಿ ವೇತನವನ್ನು 3:3:1 ಅನುಪಾತದಲ್ಲಿ ಮಾನವಿಕ ವಿಜ್ಞಾನ ಮತ್ತು ವಾಣಿಜ್ಯ ಪದವಿದಾರರಲ್ಲಿ ಹಂಚಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಈ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಅವಕಾಶ ನೀಡಲಾಗಿದೆ ಅರ್ಜಿಯನ್ನು ಸಲ್ಲಿಸಲು.

ಹಂತ 1: ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) https://scholarships.gov.in/ ಪೇಜ್ ಗೆ ಭೇಟಿ ನೀಡಿ.

ಹಂತ 2: ನೊಂದಣಿಗಾಗಿ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಓದಿ ಓದಿದ ನಂತರ ಮುಂದುವರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಮುಂದಿನ ಪೇಜ್ ನಲ್ಲಿ ನೊಂದಾವಣಿಯ ಫಾರಂ ತೆರೆಯುತ್ತದೆ ಅಲ್ಲಿ ಕೇಳಿದ ಎಲ್ಲಾ ವಿವರಗಳನ್ನು ನಮೂದಿಸಿ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಐಡಿ ಹಾಗೂ ಪಾಸ್ವರ್ಡ್ ಅನ್ನು ಕಳಿಸಲಾಗುತ್ತದೆ.

ಹಂತ 4: ಪಾಸ್ವರ್ಡ್ ಮತ್ತು ಐಡಿ ರಚನೆಯಾದ ನಂತರ ನೀವು ಅರ್ಜಿ ಸಲ್ಲಿಸಲು ಲಾಗಿನ್ ಮಾಡಬೇಕಾಗುತ್ತದೆ.

ಹಂತ 5: ಪೇಜ್ ತೆರೆದ ನಂತರ ಎಡಪಲಕದ ಮೇಲೆ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ ಕೇಳಿದ ಹಾಗೂ ದಾಖಲಿಸಬೇಕಾದ ಮಾಹಿತಿಗಳನ್ನು ಸಲ್ಲಿಸಿ ನಂತರ ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ.

ಹಂತ 6: ಸೂಕ್ಷ್ಮವಾಗಿ ದಾಖಲೆಗಳನ್ನು ಗಮನಿಸಿ ಹಾಗೂ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಮುಂದುವರೆಯಿರಿ.

ನಂತರ ನಿಮ್ಮ ಆಧಾರ್ ಸಂಖ್ಯೆಗೆ ಅಟ್ಯಾಚ್ ಆಗಿರುವ ಬ್ಯಾಂಕ್ ಖಾತೆಗೆ ನಿಮ್ಮ ವಿದ್ಯಾರ್ಥಿ ವೇತನ ಹಣ ಜಮಾ ಆಗುತ್ತದೆ ನೀವು ಪರಿಶೀಲಿಸಬಹುದು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

  1. ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಪಾಸ್ ಬುಕ್
  2. ಆಧಾರ್ ಸಂಖ್ಯೆ
  3. ಕುಟುಂಬದ ಆದಾಯ ಪ್ರಮಾಣ ಪತ್ರ
  4. ಚಾಲ್ತಿಯಲ್ಲಿರುವ ಇಮೇಲ್ ಐಡಿ
  5. ಜಾತಿ ಪ್ರಮಾಣ ಪತ್ರ
  6. ಅಂಗವಿಕಲ ವಿದ್ಯಾರ್ಥಿಯಾಗಿದ್ದರೆ ಪ್ರಮಾಣ ಪತ್ರ
  7. ಅರ್ಜಿದಾರನ ಭಾವಚಿತ್ರ
  8. ಹಾಗೂ ಅರ್ಜಿದಾರನ ಪೋಷಕರ ಭಾವಚಿತ್ರ
  9. ಅರ್ಜಿದಾರರ ಡಿಜಿಟಲ್ ಸಹಿ.

ಕೇಳಿದ ಎಲ್ಲಾ ಮಾಹಿತಿಗಳನ್ನು ಪೂರ್ತಿಯಾಗಿ ನೀಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ದೂರುಗಳು ಇದ್ದಲ್ಲಿ https://pgportal.gov.in/ ಈ ಲಿಂಕ್ ಕ್ಲಿಕ್ ಮಾಡಿ ದೂರು ದಾಖಲಿಸಿ.

ಸಂಪರ್ಕ
ಸೆಕ್ಷನ್ ಆಫೀಸರ್ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿಭಾಗ ಉನ್ನತ ಶಿಕ್ಷಣ ಇಲಾಖೆ ಸಚಿವಾಲಯ ವೆಸ್ಟ್ ಬ್ಲಾಕ್ 1, 2ನೇ ಮಹಡಿ ವಿಂಗ್ 6 , ಕೊಟ್ಟಡಿ ಸಂಖ್ಯೆ ,6 RK ಪುರಂ ಸೆಕ್ಟರ್ 1 ನವದೆಹಲಿ 110066
ದೂರವಾಣಿ ಸಂಖ್ಯೆ: 011-20862360,
ಇಮೇಲ್ ವಿಳಾಸ: sonationalscholarship@gmail.com

ಸ್ನೇಹಿತರೆ ಇದಿಷ್ಟು ಪ್ರಧಾನಮಂತ್ರಿ ಉಚ್ಚತಾರ್ ಶಿಕ್ಷಾ ಪ್ರೋತ್ಸಾಹನ್ ಯೋಜನೆ 2024, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಬಗ್ಗೆ ಮಾಹಿತಿ.

Leave a Comment

Your email address will not be published. Required fields are marked *

Scroll to Top