
ಹೈಲೈಟ್ಸ್
ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲು ಹೊರಟ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ…!
ಇದನ್ನು ವಿರೋಧಿಸಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ…!!
ಡಿಕೆ ಶಿವಕುಮಾರ್ ಅವರು ತಮ್ಮ ಹೆಸರನ್ನು ಡಿಕೆಶಿ ಬದಲಿಗೆ ಡಿ ಕೆ ಶರೀಫ್ ಎಂದು ಬದಲಿಸಲಿ ಎಂದು ವ್ಯಂಗ್ಯ…!
ಬೇಂಗಳೂರಿನ ಸುಲ್ತಾನ್ ಪುರ, ಟಿಪ್ಪುನಗರ, ಚರ್ಚ್ ಸ್ಟ್ರೀಟ್ ಮುಂತಾದ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರಕ್ಕೆ ಧೈರ್ಯವಿದೆಯೇ ಎಂದು ಮುತಾಲಿಕ್ ಪ್ರಶ್ನೆ…!
ಗದಗ – ಬೆಂಗಳೂರಿನಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಬದಲಾಯಿಸಿದನ್ನು ಶ್ರೀರಾಮ ಸೇನೆ ಪ್ರಬಲವಾಗಿ ವಿರೋಧಿಸುತ್ತದೆ, ರಾಮನಗರ ಎಂದು ಹೆಸರು ಇದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ಏನು…? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು…!
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿರುವುದು ಹಿಂದೂ ಸಮಾಜಕ್ಕೆ ಮಾಡಿರುವ ದ್ರೋಹದ ಕೇಲಸವಾಗಿದೆ ಎಂದ ಅವರು ಈ ಬಗ್ಗೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಿದರು…!!
ಗದಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುತಾಲಿಕ್ ಮಾತನಾಡುತಿದ್ದರು…!
ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಹಿಂದೂ ವಿರೋಧಿ ಕೆಲಸವನ್ನು ಮಾಡುವಲ್ಲಿ ನಿಸ್ಸೀಮ, ಕಾಂಗ್ರೆಸ್ ಬಾಬರ್ ನನ್ನು ಬೆಂಬಲಿಸಿದೆ ಎಂದು ಕಿಡಿಕಾರಿದರು…!!
ಬೇಕಾದರೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಮ್ಮ ಹೆಸರನ್ನು ಡಿ ಕೆ ಶರೀಫ್ ಎಂದು ಬದಲಾಯಿಸಲಿ ಎಂದು ವ್ಯಂಗ್ಯವಾಡಿದರು…!
ತಾಕತ್ತಿದ್ದರೆ ಬ್ರಿಟಿಷರ ಕಾಲದ ಹೆಸರನ್ನು ಬದಲಾಯಿಸಿ
ಬೆಂಗಳೂರಿನ 32 ಕಡೆಗಳಲ್ಲಿ ಬ್ರಿಟಿಷರ ಕಾಲದ ಹೆಸರುಗಳು ಇನ್ನೂ ಇವೆ…!
ಮೊದಲು ಅವುಗಳನ್ನು ಬದಲಾವಣೆ ಮಾಡಿ, ನಿಮಗೆ ನಿಜವಾಗಲೂ ಸ್ವಾಭಿಮಾನ ಅನ್ನುವುದು ಇದ್ದರೆ ಬ್ರಿಟಿಷರ ಕಾಲದ ಹೆಸರುಗಳನ್ನು ಬದಲಾಯಿಸಿ, ಡಿಕೆ ಶಿವಕುಮಾರ್ ಬೇಕಾದರೆ ತಮ್ಮ ಹೆಸರನ್ನು ಡಿ ಕೆ ಶರೀಫ್ ಎಂದು ಬದಲಾಯಿಸಿಕೊಳ್ಳಲಿ, ರಾಮನಗರಕ್ಕೆ ತನ್ನದೇ ಆದ ಇತಿಹಾಸ ಇದೆ, ಭಾನುವಾರ ಕಲಬುರ್ಗಿಯಲ್ಲಿ ಸಭೆ ನಡೆಸಿ ಇಡೀ ರಾಜ್ಯಾದ್ಯಂತ ಹೋರಾಟದ ಕುರಿತು ಚರ್ಚಿಸಲಿದ್ದೇವೆ ಎಂದರು…!!