
ದೆಹಲಿ – ದೇಶದಾದ್ಯಂತ ಲೋಕಸಭಾ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದ್ದು ಈಗಾಗಲೇ 5 ಹಂತಗಳ ಮತದಾನ ಮುಕ್ತಾಯಗೊಂಡಿದೆ…!
ಇನ್ನೂ 2 ಹಂತಗಳ ಮತದಾನ ಬಾಕಿ ಇದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ…!!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸಿವೆ…!
ಅಭ್ಯರ್ಥಿಗಳು ಎಷ್ಟೇ ಸರ್ಕಸ್ ಮಾಡಿದರೂ ಮತದಾರನ ನಿರ್ಧಾರದ ಮೇಲೆ ವಿಜಯದ ಭವಿಷ್ಯ ನಿಂತಿದೆ…!!
ಜೂನ್ 4 ರಂದು ಹೊರ ಬೀಳುವ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ…!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬ ಚರ್ಚೆ ಜೋರಾಗಿರುವ ಬೆನ್ನಲ್ಲೇ ಖ್ಯಾತ ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಿಗಲಿದ್ದು ಮತ್ತೊಮ್ಮೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ…!!
NDTV ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್
ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಈಗ ಎಲ್ಲರ ಚಿತ್ತ ಫಲಿತಾಂಶದ ಮೇಲೆ ಇದೆ…!
ಈ ವೇಳೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಂದ್ರ ಸರ್ಕಾರದ ಬಗ್ಗೆ ದೇಶದಲ್ಲಿ ಯಾವುದೇ ಅತೃಪ್ತಿ ಇಲ್ಲ ಎಂದು ವಿವರಿಸಿದ್ದಾರೆ…!!
ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್ 2024ರ ಲೋಕಸಭೆ ಎಲೆಕ್ಷನ್ ನಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರುವ ಸಾಧ್ಯತೆಗಳಿವೆ ಎಂದು ಹೇಳಿದ್ದಲ್ಲದೆ, 2019ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಾಳಯ ಗೆದ್ದಿದ್ದ ಸೀಟ್ ಗಳಿಗಿಂತಲೂ ಹೆಚ್ಚು ಸೀಟು ಗಳನ್ನು ಪಡೆದು ಜಯ ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ…!
ಮೋದಿ ವಿರುದ್ಧ ಜನಾಕ್ರೋಶವಿಲ್ಲ
ಇದುವರೆಗೂ ನಾವು ಮೋದಿ ವಿರುದ್ಧ ಸಾರ್ವಜನಿಕರ ಆಕ್ರೋಶದ ಕೂಗನ್ನು ಕೇಳೇ ಇಲ್ಲ…!
ಸ್ವಲ್ಪ ನಿರಾಶೆ, ಇರಬಹುದು ಆದರೆ ವ್ಯಾಪಕವಾದ ಜನಾಕ್ರೋಶವನ್ನು ಎಲ್ಲಿಯೂ ಕಂಡಿಲ್ಲ ಎಂದು ದೇಶದಲ್ಲಿ ಮೋದಿ ಪರ ಇರುವ ಅಲೆಯ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದರು…!!
ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತೆಲಂಗಾಣದಲ್ಲಿ ಬಿಜೆಪಿ ನಂಬರ್ ಒನ್ ಪಾರ್ಟಿಯಾಗಿ ಹೊರಹೊಮ್ಮುತ್ತೆ, ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುತ್ತೆ ಎಂದು ಪ್ರಶಾಂತ್ ಕಿಶೋರ್ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು…!