
ಬೆಂಗಳೂರು – ನಾಯಿ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಅಡಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರ ಬಂಧನವಾಗಿದೆ…!
ನಿನ್ನೆ ಸಂಜೆ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಪರ ವಕೀಲರಾದ ಉಮಾಶಂಕರ್ ಮಾಹಿತಿ ನೀಡಿದರು…!!
ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುನೀತ್ ಕೆರೆಹಳ್ಳಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಕೀಲ ಉಮಾಶಂಕರ್ ಮಾತನಾಡುತ್ತಿದ್ದರು…!
ಪುನೀತ್ ಕೆರೆಹಳ್ಳಿ ನಮಗೆ ತಿಳಿಸಿದ ಪ್ರಕಾರ ರಾತ್ರಿ ವಿಚಾರಣೆಗೆ ಕರೆದೊಯ್ದು ಎಡಗಾಲಿಗೆ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ, ಇದರಿಂದ ಪುನೀತ್ ಕೆರೆಹಳ್ಳಿ ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿಲ್ಲ…!!
ಪುನೀತ್ ಕೆರೆಹಳ್ಳಿ ಬಳಿ ಇದ್ದ ಪೆನ್ಡ್ರೈವ್, ಡಾಕ್ಯುಮೆಂಟ್ಸ್ ಕಸಿದುಕೊಂಡಿದ್ದಾರೆ, ಈ ವೇಳೆ ಪುನೀತ್ ಕೆರೆಹಳ್ಳಿ ಅವರನ್ನ ಪೂರ್ತಿ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿದ್ದು, ನೀನು ಪೆನ್ಡ್ರೈವ್ ಕೊಡ್ಲಿಲ್ಲಂದ್ರೆ ಬೆತ್ತಲೆ ವಿಡಿಯೋನಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಮಾನ ಮಾರ್ಯದೆ ಹರಾಜು ಹಾಕುತ್ತೇವೆ ಎಂದು ಹೆದರಿಸಿ ಕೆಲವು ಡಾಕ್ಯುಮೆಂಟ್ಗಳಿಗೆ ಹೆಬ್ಬೆಟ್ಟಿನ ಸಹಿ ಮಾಡಿಸಿಕೊಂಡಿದ್ದಾರೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ಅವರ ಹೇಳಿಕೆ ದಾಖಲಿಸಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ ಎಂದರು…!