
ಜೈಪುರ (ರಾಜಸ್ಥಾನ) – ಶಾಲೆ ಕಾಲೇಜುಗಳಲ್ಲಿ ಸುಮಾರು ವರ್ಷಗಳಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು ಆದರೆ ಈಗ ಈ ಆಚರಣೆಗೆ ರಾಜಸ್ಥಾನ ರಾಜ್ಯ ಸರಕಾರ ಬ್ರೇಕ್ ಹಾಕಿದೆ.!
ಇನ್ನು ಮುಂದೆ ರಾಜಸ್ಥಾನದ ಶಾಲಾ ಕಾಲೇಜುಗಳಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮ ಆಚರಣೆ ಮಾಡದೆ ಇರಲು ರಾಜಸ್ಥಾನ ರಾಜ್ಯ ಸರ್ಕಾರ ನಿರ್ಧರಿಸಿದೆ…!
ಈ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳ ಕಾರ್ಯಕ್ರಮ ಪಟ್ಟಿಯಿಂದ ಕೈಬಿಡುವಂತೆ ರಾಜಸ್ಥಾನ ಶಿಕ್ಷಣ ಇಲಾಖೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ…!!
ಆದ್ದರಿಂದ ಇನ್ನು ಮುಂದೆ ಪ್ರತೀ ವರ್ಷ ನವೆಂಬರ್ ತಿಂಗಳ 19ರಂದು ಇಂದಿರಾ ಗಾಂಧಿ ಜನ್ಮ ದಿನದ ಪ್ರಯುಕ್ತ ಆಚರಿಸಲಾಗುತ್ತಿದ್ದ ಕಾರ್ಯಕ್ರಮ ಇನ್ನುಮುಂದೆ ನಡೆಯುವುದಿಲ್ಲ…!
ಜನ್ಮದಿನಾಚರಣೆ ಕಾರ್ಯಕ್ರಮವನ್ನು ಕೈಬಿಟ್ಟಿರುವುದಕ್ಕೆ ರಾಜಸ್ಥಾನ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಟೀಕಿಸಿದ್ದು, ಇದು ಬಿಜೆಪಿಯ ಸಂಕುಚಿತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದೆ…!!
ರಾಜಸ್ಥಾನ ಸರಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಹಾಗೆ ಬಿಜೆಪಿ ರಾಜಕೀಯಕ್ಕೋಸ್ಕರ ಇದನ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.!