ಲೋನ್ ಮಾಡಿದವರಿಗೆ ಬಿಗ್ ರಿಲೀಫ್ ನೀಡಿದ RBI,EMI ಪಾವತಿದಾರರಿಗೆ ಹೊಸ ನಿಯಮ ಜಾರಿಗೆ ತಂದ ಆರ್ಬಿಐ .

ಲೋನ್ ಮಾಡಿದವರಿಗೆ ಬಿಗ್ ರಿಲೀಫ್ ನೀಡಿದ RBI,EMI ಪಾವತಿದಾರರಿಗೆ ಹೊಸ ನಿಯಮ ಜಾರಿಗೆ ತಂದ ಆರ್‌ಬಿಐ .
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1935 ರಲ್ಲಿ ಭಾರತದ ಕೇಂದ್ರೀಯ ಬ್ಯಾಂಕ್ ಆಗಿ ಇದನ್ನು ಸ್ಥಾಪಿಸಲಾಗಿದೆ.
ಭಾರತದ ಕೇಂದ್ರ ಬ್ಯಾಂಕ್ ಆಗಿದೆ ದೇಶದ ಹಣಕಾಸಿನ ವ್ಯವಸ್ಥೆಗೆ ಸಂಬಂಧಪಟ್ಟ ಎಲ್ಲಾ ನಿಯಂತ್ರಣವನ್ನು ಆರ್ ಬಿ ಐ ಹೊಂದಿದೆ ಆರ್ ಬಿ ಐ ನ ನಿರ್ದೇಶನದಂತೆ ದೇಶದ ಪ್ರತಿಯೊಂದು ಹಣಕಾಸು ಸಂಸ್ಥೆ ಹಾಗೂ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತದೆ ಯಾವುದೇ ಸಂಸ್ಥೆ ಸಾಲವನ್ನು ನೀಡುವುದು ಅಥವಾ ಸಾಲವನ್ನು ಮರು ಪಡೆಯುವುದು ಈ ಎಲ್ಲಾ ನಿಯಮಗಳನ್ನು ಆರ್ ಬಿ ಐ ನಿಯಂತ್ರಣದಲ್ಲಿ ಇರುತ್ತದೆ,
RBI ಈಗ ಈ ಎಂ ಐ ಪಾವತಿದಾರರಿಗೆ ಹಾಗೂ ಲೋನ್ ಪಡೆದು ಮರುಪಾವತಿ ಮಾಡಲು ಕೆಲವು ಸಮಸ್ಯೆಗಳಾದಾಗ ಅದನ್ನ ಹೇಗೆ ಸರಿ ಮಾಡುವುದು ಎಂದು ಗೊಂದಲದಲ್ಲಿ ಇರುವ ಸಾಲ ಮರುಪಾವತಿಧಾರರಿಗೆ RBI ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ ಆರ್ ಬಿ ಐ ತಂದ ಈ ಹೊಸ ನಿಯಮದಿಂದ ಜನರಿಗೆ ಸಾಕಷ್ಟು ಉಪಯೋಗವಾಗಲಿದೆ.
ಸ್ನೇಹಿತರೆ ನಿತ್ಯದ್ವನಿ ಒದಗಿಸುವ ಗೆಲ್ಲ ಮಾಹಿತಿಗಳು ನಿಮಗೆ ಇಷ್ಟವಾದರೆ ಹಾಗೂ ನಿಮಗೆ ಅದು ಸಹಾಯಕವಾಗಿದ್ದರೆ ನೀವು ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ ನಿತ್ಯ ಧ್ವನಿ ನೈರ್ಜಿ ಹಾಗೂ ಸತ್ಯ ವಿಚಾರಗಳನ್ನು ಬಿತ್ತರಿಸುತ್ತದೆ.
ಹಾಗೆ ಈ ಲೇಖನದಲ್ಲಿ ಆರ್ ಬಿ ಐ ತಂದ ಹೊಸ ನಿಯಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದ ಹೊಸ ನಿಯಮಗಳೇನು? ಹಾಗೂ ಅದರ ಉದ್ದೇಶ ಏನು ಅನ್ನೋದನ್ನ ನೋಡೋಣ.
RBI ತನ್ನ ಗ್ರಾಹಕರ ಹಿತ ಶಕ್ತಿಯನ್ನು ರಕ್ಷಿಸಿಕೊಳ್ಳಲು ಈ ಒಂದು ಕ್ರಮವನ್ನು ಇತ್ತೀಚಿಗೆ ಜಾರಿಗೆ ತಂದಿದೆ ಸಾಲವನ್ನು ಮರುಪಾವತಿ ಮಾಡಲು ತಡವಾದಾಗ ಬ್ಯಾಂಕುಗಳು ಹಾಗೂ ಇನ್ನಿತರೆ ಹಣಕಾಸು ಸಂಸ್ಥೆಗಳು ಅನಗತ್ಯವಾಗಿ ತಮಗೆ ಇಷ್ಟ ಬಂದ ರೀತಿಯಲ್ಲಿ ದಂಡ ವಿಧಿಸುತ್ತದೆ ಸಾಲಗಾರರು ಅವರು ಪಡೆದ ಸಾಲವನ್ನು ತೀರಿಸಲು ಕಷ್ಟಪಡುತ್ತಿದ್ದಾರೆ ಅದರ ಜೊತೆಗೆ ಇವರು ಮೇಲಿಂದ ಮೇಲೆ ದಂಡಗಳನ್ನು ವಿಧಿಸುತ್ತಿದ್ದಾರೆ ಇದರಿಂದ ಜನರಿಗೆ ಸಹಜವಾಗಿ ಸಮಸ್ಯೆಗಳು ಉಂಟಾಗುತ್ತದೆ ಇದು ಆರ್ಥಿಕವಾಗಿ ಸಾಲಗಾರನ ಮೇಲೆ ಸಾಕಷ್ಟು ಒತ್ತಡ ಬೀಳುವ ಸಾಧ್ಯತೆಗಳಿರುವ ಕಾರಣದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಹೊಸತೊಂದು ನಿಯಮವನ್ನು ಜಾರಿಗೆ ತಂದಿದೆ ಈ ಬ್ಯಾಂಕುಗಳ ಅನಗತ್ಯ ದಂಡ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಲು ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಜಾರಿಗೆ ತಂದ ಮಾಹಿತಿ ಹೇಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರುಸಚಿಗಳು ಹೀಗಿದೆ ಈ ಮಾರು ಸೂಚಿಗಳು ಸಪ್ಟೆಂಬರ್ 1, 2024 ರಿಂದ ಜಾರಿಗೆ ಬಂದಿದೆ ಸಾಲ ಪಡೆದ ಸಾಲಗಾರರ ಖಾತೆಗಳ ಮೇಲೆ ವಿಧಿಸಿದ ಅಧಿಕ ದಂಡ ಹಾಗೂ ಬಡ್ಡಿಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಇದಾಗಿದೆ, ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ನಿಯಮಗಳು ಬ್ಯಾಂಕ್ ಹಾಗೂ NBFC ಸಂಸ್ಥೆಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಕಷ್ಟು ಪರಿಹಾರವನ್ನು ಈ ನಿಯಮಗಳು ನೀಡುತ್ತದೆ,
ಡೀಫಾಲ್ಟ್ ಸಮಾಜವಾದ ಶುಲ್ಕ ಹೀಗೆಂದರೇನು.?
ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಜಾರಿಗೆ ತಂದ ನಿಯಮಗಳ ಅನುಸಾರ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳು ಗ್ರಾಹಕರು ಸಾಲವನ್ನು ಮರುಪಾವತಿ ಮಾಡಲು ವಿಫಲರಾದರೆ ಅಥವಾ ಮರುಪಾವತಿಯ ದಿನಾಂಕ ತಪ್ಪಿದರೆ ಅದಕ್ಕೆ ಮಾತ್ರ ಶುಲ್ಕವನ್ನು ವಿಧಿಸಬಹುದಾಗಿದೆ ಅದನ್ನ ಬಿಟ್ಟು ಬೇರೆ ಯಾವ ಶುಲ್ಕವನ್ನು ವಿಧಿಸಲಾಗುವುದಿಲ್ಲ, .
ದಂಡ ಶುಲ್ಕವನ್ನು ಬಾಕಿ ಇರುವ ಮೊತ್ತದೊಂದಿಗೆ ಮೊತ್ತವಾಗಿರುತ್ತದೆ ಇದು ಆರ್ಬಿಐ ಸ್ಪಷ್ಟಿ ಪಡಿಸಿದೆ ಸಾಲವನ್ನು ಮರುಪಾವತಿಯ ಮಾಡುವಾಗ ವಿಫಲವಾದರೆ ಅಥವಾ ತಡವಾದರೆ ಬ್ಯಾಂಕುಗಳು ಹಾಗೂ NBFC ಹಣಕಾಸು ಸಂಸ್ಥೆಗಳು ತಮ್ಮ ಇಚ್ಛೆಯಂತೆ ದಂಡವನ್ನು ವಿಧಿಸಲು ಸಾಧ್ಯವಾಗುವುದಿಲ್ಲ,
ಸಾಲವನ್ನು ಮರುಪಾವತಿಯ ಒಪ್ಪಂದ ನಿಯಮಗಳ ಪ್ರಕಾರ ಅದನ್ನು ಗ್ರಾಹಕರು ಉಲ್ಲಂಘಿಸಿದಾಗ ಅಂತಹ ಸಂದರ್ಭಗಳಲ್ಲಿ ಸುಲ್ಕವನ್ನು ವಿಧಿಸಲು ಸಾಧ್ಯವಾಗುತ್ತದೆ,
ತಮ್ಮ ಇಚ್ಛೆಗೆ ಬಂದಂತೆ ದಂಡವನ್ನು ವಿಧಿಸುವ ಹಣಕಾಸು ಸಂಸ್ಥೆಗಳ ವಿರುದ್ಧ ನೀವು RBI ನಲ್ಲಿ ದೂರನ್ನು ದಾಖಲಿಸಬಹುದಾಗಿದೆ.
ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಫೈನಾನ್ಸಲ್ ಸಂಸ್ಥೆಗಳು ಹಾಗೂ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಾರೆ ಆದರೆ ಆರ್ಥಿಕ ಸಮಸ್ಯೆಗಳಿದ್ದ ಕಂಗಲಾಗಿದ್ದ ಈಗಿನ ಸ್ಥಿತಿಯಲ್ಲಿ ಜನರು ಸಾಲವನ್ನು ಮರುಪಾವತಿಸಲು ಸ್ವಲ್ಪ ತಡವಾಗಬಹುದು ಇಲ್ಲ ಕೆಲವೊಂದು ವ್ಯತ್ಯಾಸಗಳು ಆಗಬಹುದು ಅಂತಹ ಸಂದರ್ಭಗಳಲ್ಲಿ ಸಾಲವನ್ನು ನೀಡಿದ ಸಂಸ್ಥೆಗಳು ಅನೇಕ ರೀತಿಯಾಗಿ ಕಾಡಲು ಶುರುಮಾಡುತ್ತವೆ ಉದಾಹರಣೆ ದಂಡವನ್ನು ವಿಧಿಸುವಂತದ್ದು ದಂಡವು ಕೂಡ ಅಧಿಕವಾಗಿ ಹಿಡಿಸುತ್ತದೆ ಆದರೆ ಮೊದಲೇ ಬಾಕಿ ಇರುವ ಕಂತುಗಳನ್ನ ಕಟ್ಟಲು ಆಗದೆ ಒದ್ದಾಡುತ್ತಿರುವ ಜನರಿಗೆ ಈ ದಂಡವೆನ್ನುವ ಬರೆ ಬಿದ್ದಾಗ ಅದು ಬಹಳ ಸಂಕಷ್ಟಕ್ಕೆ ನೂಕುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಜನರಿಗಾಗಿ ಅನೇಕ ರೀತಿಯ ನಿಯಮಗಳನ್ನು ಜಾರಿಗೆ ತರುತ್ತಿದೆ ಹಾಗೆ ಕೆಲವು ಫೈನಾನ್ಸ್ ಗಳ ಆರ್ಭಟಕ್ಕೆ ಬ್ರೇಕ್ ಹಾಕುತ್ತಿದೆ ಈ ಹೊಸ ರೂಲ್ಸ್ ಗಳಿಂದ ಜನರಿಗೆ ಅನೇಕ ರೀತಿಯಾಗಿ ಸಾಕಷ್ಟು ಸಹಾಯಗಳು ಆಗುತ್ತಿದೆ.
ಸ್ನೇಹಿತರೆ ನೀವು ಯಾವುದಾದರೂ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದರೆ ನಿಮಗೆ ಸಾಲ ಮರುಪಾವತಿ ಮಾಡಲು ಆಗದೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ನಿಮಗೇನಾದರೂ ಒತ್ತಡ ಹಾಗೂ ತೊಂದರೆಗಳಾಗುತ್ತಿದ್ದರೆ ನೀವು ಭಾರತೀಯ ರಿಸರ್ವ್ ಬ್ಯಾಂಕ್ಗೆ ದೂರನ್ನು ನೀಡಬೇಕಾಗುತ್ತದೆ.
ಸಾಲದ ಒಪ್ಪಂದವನ್ನು ಮೀರಿ ನಿಮಗೆ ಫೈನಾನ್ಸ್ ಹಾಗೂ ಇನ್ನಿತರೆ ಬ್ಯಾಂಕ್ ಹಣಕಾಸು ಸಂಸ್ಥೆಗಳಿಂದ ತೊಂದರೆಗಳು ಆದಾಗ ನೀವು ಈ ದೂರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ನೀಡಬೇಕಾಗುತ್ತದೆ.
ಯಾವುದೇ ಹಣಕಾಸು ಸಂಸ್ಥೆ ಅಥವಾ ಬ್ಯಾಂಕುಗಳ ದೂರುಗಳು ಅಥವಾ ಕುಂದುಕೋರತೆಗಳನ್ನು ಹೊಂದಿದ್ದರೆ ನೀವು crpc@rbi.org.in ಗೆ ಇ-ಮೇಲ್ ಮಾಡಬಹುದಾಗಿದೆ.
ಅಥವಾ ಇನ್ನು ಹೆಚ್ಚಿನ ಸಮಸ್ಯೆಗಳು ಇದ್ದರೆ ನೀವು ರಾಜ್ಯದ RBI ಕೇಂದ್ರ ಕಚೇರಿಗೆ ತಲುಪಿ ಅಲ್ಲಿ ದೂರು ದಾಖಲಿಸಬೇಕಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್
10/3/8,ನೃಪ್ತುಂಗ ರಸ್ತೆ ಬೆಂಗಳೂರು-560001
ದೂರವಾಣಿ ಸಂಖ್ಯೆ: 080-22180397
RBI ಟೋಲ್ ಫ್ರೀ ಸಂಖ್ಯೆ : 14448 ನೀವು ಈ ಸಂಖ್ಯೆಗೆ ಕರೆ ಮಾಡಲು ಬಯಸಿದ್ದರೆ ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 5:15 ರ ವರೆಗೆ ಕರೆ ಮಾಡಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಪರ್ಕ.
ಶ್ರೀ ಸತ್ಯಕಾಂತ್ ದಾಸ್ ಗವರ್ನರ್ ಭಾರತೀಯ ರಿಸರ್ವ್ ಬ್ಯಾಂಕ್ 18 ನೇ ಮಹಡಿ, ಕೇಂದ್ರ ಕಚೇರಿ ಕಟ್ಟಡ ಸಾಹಿದ್ ಭಗತ್ ಸಿಂಗ್ ರಸ್ತೆ ಮುಂಬೈ -400 001
ದೂರವಾಣಿ ಸಂಖ್ಯೆ : 22661872.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನೀವು ಶೇರ್ ಮಾಡಿ