
ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಅನೇಕ ಕಡೆಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಇನ್ನು ಕರಾವಳಿ ಜಿಲ್ಲೆಯ ಕೆಲವು ಭಾಗದಲ್ಲಿ ಅನೇಕ ಘಟನೆಗಳು ಕೂಡ ನಡೆದಿದೆ. ಈಗಾಗಲೇ ಹಲವು ಕಡೆಗಳಲ್ಲಿ ಅನಾಹುತ ಸೃಷ್ಟಿಸಿರುವ ಮಳೆರಾಯ ಮತ್ತಷ್ಟು ಕಡೆಗಳಲ್ಲಿ ಭಾರಿ ಮಳೆ ಸುರಿಸುವ ಸಾಧ್ಯತೆ ಇದೆ. ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿರಲಿದೆ.
ಶಿರೂರು ಗುಡ್ಡ ಕುಸಿತ ಒಂದು 10ಕ್ಕೂ ಅಧಿಕ ಬಲಿಪಡಿದಿದೆ ಹಾಗೆ ಇನ್ನೂ ಕೂಡ 3 ಮೃತ ದೇಹಗಳು ಹತ್ತಿಯಾಗಲಿ ಇಲ್ಲ ಜಿಲ್ಲಾಡಳಿತ ಸರಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸಿದರು ಫಲ ಸಿಗಲಿಲ್ಲ ಈ ಘಟನೆಯ ನಂತರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಮಳೆ ಹಾಗೂ ಗಾಳಿಯ ಸಂದರ್ಭದಲ್ಲಿ ಅಪಾಯದ ಸ್ಥಳಗಳಲ್ಲಿ ವಾಸವಿರದಂತೆ ಸೂಚನೆ ರವಾನಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್, ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದರ ಜೊತೆಗೆ ಉತ್ತರ ಒಳನಾಡು ಭಾಗದಲ್ಲೂ 2 ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೂಡ ನೀಡಿದ್ದಾರೆ. ಹೀಗಾಗಿ, ಮುಂದಿನ 2 ದಿನ ಕರ್ನಾಟಕ ಕರಾವಳಿ ಭಾಗದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಇನ್ನು ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, N.R.ಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಜೊತೆಗೆ ಜುಲೈ 31 ರಿಂದ ಅಗಸ್ಟ್ 1 ರ ವರೆಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜಿಲ್ಲೆಯಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ ಹಾಗೆ ನದಿ ನೀರಿನ ಮಟ್ಟಗಳಲ್ಲಿಯೂ ಹೆಚ್ಚಳವಾಗಿದ್ದು ನದಿ ಪಾತ್ರದ ಜನರು ಆತಂಕದಲ್ಲಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ
ಭಾರಿ ಮಳೆ ಆಗುತ್ತಿರುವುದರಿಂದ ಮುಜ್ಜಾಗ್ರತೆ ಕ್ರಮವಾಗಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ಇನ್ನೂ ಕೊಡಗು ಹಾಗೂ ಶಿಮೊಗ್ಗ ಜಿಲ್ಲೆಗಳಲ್ಲಿಯೂ ಬಾರಿ ಮಳೆಯಾಗುತ್ತಿದ್ದು ಕೆಲವು ತಾಲೂಕುಗಳ ಶಾಲೆ ಕಾಲೇಜುಗಳಿಗೆ ರಜಾ ನೀಡಲಾಗಿದೆ.
ಕೇರಳದ ವಾಯುನಾಡ್ ಗುಡ್ಡ ಕುಸಿತ ಇಡೀ ದೇಶವೇ ಬೆಚ್ಚಿಬಿದ್ದಿದೆ 5 ಗ್ರಾಮಗಳು ಸಂಪೂರ್ಣವಾಗಿ ನಶಿಸಿಹೋಗಿದೆ 4 ಅಧಿಕ ಜನ ಕಣ್ಮರೆ 165ಕ್ಕೂ ಅಧಿಕ ಸಾವು ಕಾರ್ಯಾಚರಣೆ ಮಾಡಲು ಅಡ್ಡಿಯಾಗುತ್ತಿರುವ ಮಳೆ ಈ ಘಟನೆ ನಂತರ ದೇಶದಲ್ಲಿ ಒಂದು ರೀತಿಯ ಆತಂಕದ ನಿರ್ಮಾಣವಾಗಿದೆ.
ಹಾಗೆ ರಾಜ್ಯದಲ್ಲಿ ವರ್ಣಾರ್ಭಟ ಮುಂದುವರಿದಿದ್ದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನಿನ್ನೆ ನೀಡಿದ್ದರು ಯಾವುದೇ ಅವಘಡ ನಡೆಯದಿದ್ದಂತೆ ಹಾಗೂ ಮುಂಜಾಗ್ರತ ಕ್ರಮವಾಗಿ 24ಗಂಟೆ ಕಾರ್ಯ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.