ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆ: ಭಾರತೀಯ ರೈಲ್ವೆ ಏಷ್ಯಾದಲ್ಲಿಯೇ ಅತಿ ಉದ್ದದ ರೈಲ್ವೆ ಟ್ರ್ಯಾಕ್ ಗಳನ್ನು ಭಾರತೀಯ ರೈಲ್ವೆ ಹೊಂದಿದೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಿಲೋಮೀಟರ್ ರೈಲ್ವೆ ಟ್ರ್ಯಾಕ್ ಗಳನ್ನು ಭಾರತೀಯ ರೈಲ್ವೆ ಹೊಂದಿದೆ ಹಾಗೂ 171 ವರ್ಷ ಇತಿಹಾಸ ಭಾರತೀಯ ರೈಲ್ವೆಗೆ ಇದೆ.
ದೇಶದ ಪ್ರತಿ ಮೂಲೆಗೂ ಪ್ರತಿ ರಾಜ್ಯ ಹಾಗೂ ಪ್ರತಿ ಜಿಲ್ಲೆಗೂ ಭಾರತೀಯ ರೈಲ್ವೆ ಸಂಪರ್ಕವನ್ನು ಹೊಂದಿದೆ ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ಹೊಸ ಇತಿಹಾಸವನ್ನೇ ಬರೆಯುತ್ತಿದೆ ಿಶೇಷವಾದಂತಹ ರೈಲ್ವೆ ಕೋಚಿಂಗ್‌ಗಳು ಹಾಗೂ ವಿಶೇಷವಾದ ರೈಲುಗಳನ್ನು ಕೂಡ ಭಾರತೀಯ ರೈಲ್ವೆ ಪರಿಚಯಿಸಿದೆ ಇದೀಗ ಭಾರತೀಯ ರೈಲ್ವೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಹಾಗೂ ಉದ್ಯೋಗ ಮಾಡಬೇಕೆಂದು ಬಯಸುವ ಅಭ್ಯರ್ಥಿಗಳಿಗೆ ಆಕಾಂಕ್ಷಿಗಳಿಗೆ ಭಾರತೀಯ ರೈಲ್ವೆ ಭರ್ಜರಿ ಅವಕಾಶವನ್ನು ನೀಡುತ್ತಿದೆ.
ಹೌದು ಸ್ನೇಹಿತರೆ, ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಬೇಕು ಹಾಗೂ ಉದ್ಯೋಗವನ್ನು ನಡೆಸಬೇಕೆಂದು ಅನೇಕರಿಗೆ ಆಸೆಗಳು ಇರುತ್ತದೆ ಆದರೆ ಅಂಥವರ ಆಸೆಗೆ ಭಾರತೀಯ ರೈಲ್ವೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಸುಮಾರು 14,298 ಟೆಕ್ನಿಷಿಯನ್ ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ರೈಲ್ವೆ ಆಹ್ವಾನಿಸಿದ ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಭಾರತೀಯ ರೈಲ್ವೆ ಈ ಮೊದಲು 9,144 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು ಈ ಹುದ್ದೆ ಬಗ್ಗೆ ಅಧಿ ಸೂಚನೆಯನ್ನು ಕೂಡ ಪ್ರಕಟಿಸಿತ್ತು . ಇದಾದ ನಂತರ ಇನ್ನೂ 5154 ಟೆಕ್ನಿಷಿಯನ್ ಗ್ರೇಟ್ ತ್ರಿ ಹುದ್ದೆಗಳು ಹಾಗೂ ಕ್ಲರ್ಕ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ ಭಾರತೀಯ ರೈಲ್ವೆ ಅಧಿಸೂಚನೆ ಪ್ರಕಾರ ಎಲ್ಲಾ ಹುದ್ದೆಗಳು ಸೇರಿ ಸುಮಾರು 14,298 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಭಾರತೀಯ ರೈಲ್ವೆ ಈಗ ಭರ್ಜರಿ ಉದ್ಯೋಗಾವಕಾಶವನ್ನು ನೀಡಿದೆ ಆಕಾಂಕ್ಷಿ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿಯ ಪೂರ್ತಿ ವಿವರಣೆಯನ್ನು ನೋಡೋಣ.
ಮೊದಲ ಆದಿ ಸೂಚನೆಯಂತೆ 9,144 ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು ಆ ಅರ್ಜಿಯ ಪ್ರಕಾರ ಆದಿಸಲಿಸಿದ ಅಭ್ಯರ್ಥಿಗಳು ತಿದ್ದುಪಡಿ ಆದಿಶೂಚನೆಯಲ್ಲಿ ಒಳಗೊಂಡಿರುತ್ತದೆ.
ಹೊಸದಾಗಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ವರ್ಕ್ಶಾಪ್ ಹುದ್ದೆಗಳಿಗೆ ಹಾಗೂ ಇನ್ನುಳಿದ ಕೆಲವು ಹುದ್ದೆಗಳು ಸೇರಿವೆ.
ಅರ್ಜಿಯ ಮಾಹಿತಿ
ಭಾರತೀಯ ರೈಲ್ವೆ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 02/10/2024
ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16/10/2024
ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್ https://www.rrbapply.gov.in
ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹಾಗೂ ಈ ಮುಂಚೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹಿಂದೆ ಆದಿಸಲಿಸಿದ ಅಭ್ಯರ್ಥಿಗಳಿಗಾಗಿ ಸಹಿ ಹಾಗೂ ಭಾವಚಿತ್ರವನ್ನು ಅಪ್ಡೇಟ್ ಮಾಡಲು ಅವಕಾಶವನ್ನು ನೀಡಲಾಗಿದೆ ಹುದ್ದೆಯ ಕ್ಯಾಟಗರಿ ಬದಲಿಸಬಹುದು.
ಹುದ್ದೆಗಳ ಸಂಪೂರ್ಣ ವಿವರ
- ಟೆಕ್ನಿಷಿಯನ್ ಗ್ರೇಡ್ ಒನ್ ಸಿಗ್ನಲ್ 1092
- ಟೆಕ್ನಿಶಿಯನ್ ಗ್ರೇಡ್ 3 8052
- ಇನ್ನಿತರೆ ಹುದ್ದೆ. 5154
- ಒಟ್ಟು ಹುದ್ದೆಗಳ ಮಾಹಿತಿ. 14,298
ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ
ಟೆಕ್ನಿಶನ್ ಗ್ರೇಟ್ 1 ಸಿಗ್ನಲ್ ಹುದ್ದೆ : ಈ ಹುದ್ದಗೆ bsc, ಡಿಪ್ಲೋಮೋ, ಹಾಗೂ ಇಂಜಿನಿಯರಿಂಗ್ ಪದವಿ ಹೊಂದಿರಬೇಕು,
ಟೆಕ್ನಿಶಿಯನ್ ಗ್ರೇಟ್ 3 ಹುದ್ದೆಗೆ : ಐಟಿಐ ಪದವಿಯನ್ನು ಹೊಂದಿರಬೇಕು.
ಹಾಗೂ ಇನ್ನುಳಿದ ಹುದ್ದೆಗಳಿಗೆ 12ನೇ ತರಗತಿ ಪಾಸ್ ಆಗಿರಬೇಕು.
ಭಾರತೀಯ ರೈಲ್ವೆ ಟೆಕ್ನಿಶನ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ
- ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ https://www.rrbapply.gov.in ವೆಬ್ ಸೈಟ್ ಗೆ ಭೇಟಿ ನೀಡಿ.
- ವೆಬ್ಸೈಟ್ ಓಪನ್ ಆದ ನಂತರ ಟೆಕ್ನಿಷಿಯನ್ ಕ್ಯಾಟಗರಿ ಹುದ್ದೆಯ ಮೇಲೆ ಕ್ಲಿಕ್ ಮಾಡಿ ನಂತರ ಕನ್ನಡ ಹಾಗೂ ಹಿಂದಿ ಯಾವುದಾದರು ಒಂದು ಭಾಷೆಯ ಮೇಲೆ ಕ್ಲಿಕ್ ಮಾಡಿ ಹಾಗೂ ಸಂಪೂರ್ಣ ಮಾಹಿತಿಗಳನ್ನು ಸೂಕ್ಷ್ಮವಾಗಿ ಓದಿಕೊಳ್ಳಿ.
- ಇದಾದ ನಂತರ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಹಾಗೂ ಮುಂದಿನ ಪೇಜ್ ಓಪನ್ ಆಗುತ್ತದೆ.
- ಓಪನ್ ಆದ ಪೇಜ್ ನಲ್ಲಿ ಅಪ್ಲೈ ಮೇಲೆ ಕ್ಲಿಕ್ ಮಾಡಿ ಹಾಗೂ ಅರ್ಜಿ ಸಲ್ಲಿಸುವಲು ಮುಂದಾಗಿ.
- ತಾತ್ಕಾಲಿಕವಾದ ಅಂತಹ ಒಂದು ಖಾತೆಯನ್ನು ರಚಿಸಿಕೊಳ್ಳಿ.
- ನಂತರ ಶೈಕ್ಷಣಿಕ ಹಾಗೂ ಕೆಲವೊಂದಿಷ್ಟು ವಯಕ್ತಿಕ ಮಾಹಿತಿಗಳನ್ನು ಹಾಗೂ ಮೀಸಲಾತಿ ದಾಖಲೆಗಳನ್ನು ಸಂಪೂರ್ಣವಾಗಿ ಅಪ್ಲೋಡ್ ಮಾಡಿ.
- ಇದಾದ ನಂತರ ಅರ್ಜಿಯ ಶುಲ್ಕವನ್ನು ಆನ್ಲೈನ್ ಮುಖಾಂತರವೇ ಪಾವತಿಸಬೇಕಾಗುತ್ತದೆ.
- ಅರ್ಜಿ ಸಲ್ಲಿಸುವ ವಿಧಾನ ಪೂರ್ಣಗೊಂಡ ನಂತರ ಪ್ರಿಂಟ್ ತೆಗೆದುಕೊಳ್ಳಿ.
ಭಾರತೀಯ ರೈಲ್ವೆ ಟೆಕ್ನಿಶನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಂದು ತಾತ್ಕಾಲಿಕ ಖಾತೆಗಳನ್ನು ತೆರೆಯಬೇಕಾಗುತ್ತದೆ ತಾತ್ಕಾಲಿಕ ಖಾತೆಯನ್ನು ತೆರೆಯಲು ಬೇಕಾದ ದಾಖಲೆಗಳು.
ತಂದೆ ತಾಯಿ ಹೆಸರು ಹಾಗೂ ಜನ್ಮ ದಿನಾಂಕದ ದಾಖಲೆಗಳು ಆಧಾರ್ ಕಾರ್ಡ್ ಹಾಗೂ ಚಾಲ್ತಿಯಲ್ಲಿರುವ ಇಮೇಲ್ ವಿಳಾಸ ಮೊಬೈಲ್ ಸಂಖ್ಯೆ ಮೊಬೈಲ್ ಸಂಖ್ಯೆಗೆ ಓಟಿಪಿ ಬರಬಹುದು ಹಾಗಾಗಿ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇರಬೇಕಾಗುತ್ತದೆ.
ಅರ್ಜಿಯ ಶುಲ್ಕ
ಎಲ್ಲಾ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸುವಂತೆ ಈ ಉದ್ಯೋಗ ಕೂಡ ಅರ್ಜಿ ಸಲ್ಲಿಸುವಾಗ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಶುಲ್ಕವನ್ನು ಪಾವತಿಸಿದ ನಂತರವೇ ನಿಮ್ಮ ಅರ್ಜಿ ಸಲ್ಲಿಕೆ ಪೂರ್ಣವಾಗುತ್ತದೆ.
ಸಾಮಾನ್ಯ ಅಭ್ಯರ್ಥಿಗಳಿಗೆ : 500 ಇದರಲ್ಲಿ 400 ರೂಪಾಯಿ ವಾಪಸ್ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 250
ವೇತನ ಶ್ರೇಣಿ
ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆಗಳು ಹಾಗೂ ಇನ್ನಿತರ ಹುದ್ದೆಗಳಿಗೆ ವೇತನ ಮಾಹಿತಿ
ಟೆಕ್ನಿಷಿಯನ್ ಮುದ್ದೆ ಹಾಗೂ ಇನ್ನಿತರ ಹುದ್ದೆ 19,900-29,200 ಇರುತ್ತದೆ.
ಸ್ನೇಹಿತರೆ ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸನ್ನು ಕಟ್ಟಿಕೊಂಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹಾಗೂ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಪೂರ್ಣವಾಗಿ ಅರ್ಜಿಯ ಮಾಹಿತಿಯನ್ನು ಗಮನಿಸಿ ಹಾಗೂ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೂ ಸರಿಯಾದ ದಾಖಲೆಗಳು ಸಮೇತ ಅರ್ಜಿಯನ್ನು ಸಲ್ಲಿಸಿ.
ಇದಿಷ್ಟು ಭಾರತೀಯ ರೈಲ್ವೆ ಟೆಕ್ನಿಷಿಯನ್ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಅಜ್ಜಿಯ ವಿವರ ಇನ್ನಿಷ್ಟು ಸುದ್ದಿಗಳಿಗಾಗಿ ನಿತ್ಯದನಿ ಪೇಜ್ ಗೆ ಭೇಟಿ ನೀಡಿ ಹಾಗೂ ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ಸರಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಶೇರ್ ಮಾಡಿ.
ನಿತ್ಯ ಧ್ವನಿ ನೈಜ್ಯ ಹಾಗೂ ಸತ್ಯ ವಿಚಾರಗಳನ್ನು ಬಿತ್ತರಿಸುತ್ತದೆ ಸುಳ್ಳು ಅಥವಾ ಖಚಿತವಲ್ಲದ ಮಾಹಿತಿಗಳನ್ನು ಎಂದಿಗೂ ಬಿತ್ತರಿಸುವುದಿಲ್ಲ ತಮ್ಮ ಓದುಗರಿಗಾಗಿ ನಿತ್ಯ ದ್ವನಿ ನಿರಂತರವಾಗಿ ಕೆಲಸ ಮಾಡಲಿದೆ.