
ಉಡುಪಿ – ಜಿಲ್ಲೆಯ ಹೆಸರಾಂತ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ, ನರರೋಗ ತಜ್ಞರಾದ ಡಾಕ್ಟರ್ ರಾಜಾ ಇಂದು ಬೆಳಿಗ್ಗೆ ಹ್ರದಯಾಘಾತದಿಂದ ನಿಧನ ಹೊಂದಿದರು…!
ಅವರಿಗೆ 73 ವರ್ಷ ವಯಸ್ಸಾಗಿತ್ತು…!!
ಇಂದು ಬೆಳಿಗ್ಗೆ ಅವರು ಮಣಿಪಾಲದ ರಾಜೀವ್ ನಗರದ ಅವರ ಮನೆಯಲ್ಲಿ ಹ್ರದಯಾಘಾತಕ್ಕೆ ಒಳಗಾಗಿದ್ದರು…!!
ತಕ್ಷಣವೇ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು…!
ಮ್ರತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ…!!
ದೇಶದ ಖ್ಯಾತ ಹಿರಿಯ ನರರೋಗ ತಜ್ಞ ಡಾಕ್ಟರ್ ಎ ರಾಜ ಅವರ ಆಕಸ್ಮಿಕ ಅಗಲುವಿಕೆ ವೈದ್ಯಕೀಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ನಿಧನಕ್ಕೆ ಶಾಸಕ ಗುರ್ಮೇ ಸುರೇಶ್ ಶೆಟ್ಟಿ, ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮಿಜಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ…!