
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳು ತೆರೆಯ ಮೇಲೆ ಬರುತ್ತಿದೆ, ಜನರ ಮನಸ್ಸಿಗೆ ಇಷ್ಟ ಆಗುವ ಹಾಗೂ ಮನಸ್ಸಿಗೆ ಮುಟ್ಟುವ ಕಥೆಗಳನ್ನ ನಿರ್ದೇಶಕರು ಆರಿಸಿ, ಜನರ ಮುಂದಿಡುತ್ತಿದ್ದಾರೆ. ಈಗ ಜನರ ಮನಸ್ಸನ್ನ ಗೆದ್ದ ಒಂದು ಸಿನಿಮಾ OTT ಯಲ್ಲಿ ಸದ್ದು ಮಾಡುತ್ತಿದೆ ಆ ಸಿನಿಮಾ ಯಾವುದೆಂದರೆ ,ಶಾಖಾಹಾರಿ,
ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್ ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ..ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟ ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ.

ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ‘ಶಾಖಾಹಾರಿ’. ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಆ ಹೋಟೆಲ್ನಲ್ಲಿ ನಡೆಯುವ ಒಂದಷ್ಟು ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಚಿತ್ರಣವೇ ಹೇಗೆ ಬದಲಾಗಿಬಿಡುತ್ತದೆ ಎನ್ನುವುದು ಸಿನಿಮಾ ಒನ್ಲೈನ್ ಸ್ಟೋರಿ.
ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರಿ.ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ, ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಪ್ರತಿಭಾ ನಾಯಕ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಬಂಡವಾಳ ಹೂಡಿದ್ದಾರೆ.
ಈ ಸಿನಿಮಾ ಈಗ ಅಮೆಜಾನ್ ಪ್ರೈಮ್ ಅಲ್ಲಿ ಜನರ ಮೆಚ್ಚುಗೆ ಪಡೆದುಕೊಂಡಿದೆ,