ಶ್ರೀಮನ್ಮಹಾಗಣಾಧಿಪತಯೇ : ಸನಾತನ ಹಿಂದು ಧರ್ಮದಲ್ಲಿ 33 ಕೋಟಿ ದೇವತೆಗಳನ್ನು ಹಾಗೂ ದೇವರುಗಳನ್ನು ಪೂಜಿಸಲಾಗುತ್ತದೆ ದೇವಾದಿ ದೇವರುಗಳಲ್ಲಿ ತುಂಬಾ ವಿಶೇಷವಾದ ದೇವರೆಂದು ಕರೆಯುವ ಒಂದು ದೇವರು ಅದೇ ಶ್ರೀ ಮಹಾಗಣಪತಿ ಗಣಪತಿಯನ್ನ (ಮಹಾ ಎಂದು ಯಾಕೆ ಕರೆಯುತ್ತಾರೆ ಮಹಾ ಎಂದರೆ ಅರ್ಥ ದೊಡ್ಡದು ಉದಾಹರಣೆ ಅದಕ್ಕಿಂತ ಇನ್ನೊಂದು ದೊಡ್ಡದು ಇಲ್ಲ ಅಂತ ಹಾಗೆ ಮಹಾಗಣಪತಿ ಗಿಂತ ದೊಡ್ಡ ಇನ್ನೊಂದು ಗಣಪತಿ ಇಲ್ಲ ಎಂದು ಅರ್ಥ )
ಗಣಪತಿಯನ್ನು ವಿಘ್ನೇಶ್ವರ, ಏಕದಂತ, ಲಂಬೋದರ , ಮೂಷಿಕ ವಾಹನ, ಗಜಮುಖ, ಗಣೇಶ, ಇನ್ನು ಅನೇಕ ನಾಮಗಳಿಂದ ಗಣಪತಿಯನ್ನು ಪೂಜಿಸುತ್ತಾರೆ ಹಾಗೂ ಕರೆಯುತ್ತಾರೆ ವಿಘ್ನೇಶ್ವರನಿಗೆ ಪೂಜಿ ಸಲ್ಲಿಸದೆ ಯಾವ ಶುಭಕಾರ್ಯವು ಕೂಡ ಪ್ರಾರಂಭ ಮಾಡುವುದಿಲ್ಲ ಹಾಗಾಗಿ ಮೊದಲ ಪೂಜೆ ವರ ಪಡೆದ ಮೊದಲ ದೇವ ಎಂದು ಹೆಸರು,
ವಿಶ್ವದಲ್ಲಿ ಅನೇಕ ಭಾಗಗಳಲ್ಲಿ ಅನೇಕ ಮಹಾಗಣಪತಿ ದೇವಾಲಯಗಳಿವೆ ಇತಿಹಾಸ ಪ್ರಸಿದ್ಧ ಪುರಾಣ ಪ್ರಸಿದ್ಧ ಹಾಗೂ ತನ್ನದೇ ಆದಂತಹ ಮಹತ್ವಗಳನ್ನು ಹೊಂದಿರುವ ಹಾಗೂ ತನ್ನದೇ ಆದಂತಹ ಸ್ಥಳ ಪುರಾಣಗಳನ್ನು ಹೊಂದಿರುವ ಇನ್ನು ಅನೇಕ ಶ್ರೀ ಮಹಾಗಣಪತಿ ದೇವಾಲಯಗಳಿವೆ ಈ ಲೇಖನದಲ್ಲಿ ನಾವು ಇತಿಹಾಸ ಪ್ರಸಿದ್ಧ ಹಾಗೂ ತನ್ನದೇ ಆದಂತಹ ಮಹತ್ವವನ್ನು ಹೊಂದಿರುವ ಒಂದು ಸ್ಥಳ ಶ್ರೀ ಮಹಾಗಣಪತಿ ದೇವಾಲಯವನ್ನು ನೋಡೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಬಹಳ ವಿಶೇಷವಾದಂತಹ ಈ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಗ್ರಾಮದಲ್ಲಿದೆ ಈ ದೇವಾಲಯದ ವಿಶೇಷವೇನೆಂದರೆ ಇಲ್ಲಿನ ಮಹಾಗಣಪತಿಗೆ ಯಾವುದೇ ರೀತಿಯ ಗರ್ಭಗುಡಿ ಅಥವಾ ಗೋಪುರಗಳಿಲ್ಲ ತೆರೆದ ದೇವಾಲಯದಲ್ಲಿಯೇ ಶ್ರೀ ಮಹಾಗಣಪತಿಗೆ ತ್ರಿಕಾಲ ಪೂಜೆ ಹಾಗೂ ಎಲ್ಲ ಸೇವೆಗಳನ್ನ ನೆರ್ವಹಿಸಲಾಗುತ್ತದೆ.
ಈ ಮಹಾಗಣಪತಿ ದೇವಾಲಯವು ಆಕಾಶವೇ ಗೋಪುರ ಭೂಮಿಯೇ ಗರ್ಭಗುಡಿ ಅನ್ನುವ ರೀತಿ ಬಹಳ ವಿಶೇಷವಾಗಿ ಭಕ್ತರಿಗೆ ದರ್ಶನ ನೀಡುತ್ತಿದೆ ದಾಳಿ ಮಳೆ ಏನೇ ಬಂದರೂ ಕೂಡ ಹಚ್ಚಿದ ದೀಪ ಎಂದು ಕೂಡ ಆರೋದಿಲ್ಲ ಹಾಗೆ ಈ ಕ್ಷೇತ್ರದ ಗಣಪತಿಯು ಕೂಡ ಬಹಳ ಸತ್ಯವಂತ ಗಣಪತಿಯಾಗಿದೆ ಭಕ್ತರು ಮನದಲ್ಲಿ ನೆನೆಸಿಕೊಂಡು ಅದಕ್ಕೆ ಗಳನ್ನು ಸಲ್ಲಿಸಿದರೆ ಭಕ್ತರ ಮನಸ್ಸಿನ ಎಲ್ಲ ಕಾಮನೆಗಳನ್ನು ಶ್ರೀ ಮಹಾ ಗಣಪತಿ ಈಡೇರಿಸುತ್ತಾನೆ ಅನ್ನುವ ನಂಬಿಕೆ ಎಂದಿಗೂ ಕೂಡ ಇದೆ.
ಈ ದೇವಾಲಯದ ಕೆಲವೇ ದೂರದಲ್ಲಿ ಕಪಿಲಾ ನದಿ ಹರಿಯುತ್ತದೆ ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಈ ದೇವಾಲಯ ಇದೆ.
ಗಂಟೆಯ ಹರಿಕೆ
ಹೆಚ್ಚಿನ ದೇವಾಲಯಗಳಲ್ಲಿ ಚಿನ್ನ ಬೆಳ್ಳಿ ಹಾಗೂ ಇನ್ನಿತರೆ ಹರಕೆಗಳನ್ನು ಸಲ್ಲಿಸುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಭಕ್ತರು ಗಂಟೆಗಳನ್ನು ಹರಿಕೆಯನ್ನಾಗಿ ಸಲ್ಲಿಸುತ್ತಾರೆ ಪ್ರತಿ ವರ್ಷವೂ ಈ ಕ್ಷೇತ್ರಕ್ಕೆ ಸುಮಾರು ಒಂದು ಟನ್ಗು ಅಧಿಕ ಗಂಟೆಗಳು ದೇವಾಲಯಕ್ಕೆ ಬರುತ್ತದೆ, ಸಣ್ಣ ಸಣ್ಣ ಗಂಟೆಗಳಿಂದ ಹಿಡಿದು ದೊಡ್ಡ ದೊಡ್ಡ ಗಂಟೆಗಳ ತನಕವು, ಭಕ್ತರು ಹರಕೆಯನ್ನು ಸಲ್ಲಿಸುತ್ತಾರೆ.
ಭಕ್ತರಿಗೆ ಬಹು ಸುಲಭದಲ್ಲಿ ದರ್ಶನ ಕರುಣಿಸುತ್ತಾನೆ ಈ ಮಹಾಗಣಪತಿ.
ಹೌದು ಸ್ನೇಹಿತರೆ, ದೇವಸ್ಥಾನದ ಪ್ರಾರಂಭನ ಪ್ರವೇಶ ಮಾಡಿದ ಕ್ಷಣ ನಿಮ್ಮ ಕಣ್ಣಿಗೆ ಮೊದಲು ಕಾಣಿಸುವುದು ವಿರಾಜಮಾನನಾಗಿ ಕುಳಿತಿರುವ ಶ್ರೀ ಮಹಾಗಣಪತಿ.
ದೇವಾಲಯದ ಸ್ಥಳ ಪುರಾಣ
ಸುಮಾರು 800 ವರ್ಷಗಳ ಇತಿಹಾಸ ಶ್ರೀ ಮಹಾಗಣಪತಿ ದೇವಾಲಯಕ್ಕೆ ಇದೆ ಹಿಂದೆ ಈ ದೇವಾಲಯವನ್ನು ಸ್ಥಳೀಯ ರಾಜಮನೆತನವು ನೋಡಿಕೊಳ್ಳುತ್ತಿತ್ತು ಆದರೆ ಶತ್ರುಗಳು ದಾಳಿ ಮಾಡಿದಾಗ ಯುದ್ಧದ ಸಂದರ್ಭದಲ್ಲಿ ದೇವಾಲಯವನ್ನು ಧ್ವಂಸ ಮಾಡುತ್ತಾರೆ ನಂತರ ಇಲ್ಲಿರುವ ಮೂರ್ತಿಯನ್ನು ರಕ್ಷಣೆ ಮಾಡಬೇಕೆಂದು ಊರಿನ ಗೋಪಾಲಕರು ಯೋಚಿಸಿ ಶ್ರೀ ಮಹಾಗಣಪತಿ ಮೂರ್ತಿಯನ್ನು ಗೋಪಾಲಕರು ತೆಗೆದುಕೊಂಡು ಹೋಗುತ್ತಾರೆ ಅದಾದ ನಂತರ ಗೋಪಾಲಕರು ಆ ವಿಗ್ರಹವನ್ನು ತಂದು ಸೌತಡ್ಕ ಗ್ರಾಮದ ಒಂದು ಮರದ ಬುಡದಲ್ಲಿ ಪ್ರತಿಷ್ಠಾಪಿಸುತ್ತಾರೆ (ಸೌತಡ್ಕ ಎಂದರೆ ಸೌತ ಎನ್ನುವ ಪದದ ಅರ್ಥ ಸೋತೇಕಾಯಿ ಅಡ್ಕ ಎಂದರೆ ಪ್ರದೇಶ ಅಥವಾ ಬಯಲು ಹಾಗಾಗಿ ಈ ಊರಿಗೆ ಸೌತಡ್ಕ ಎಂದು ಹೆಸರು)
ಅದಾದ ನಂತರ ಗೋಪಾಲಕರು ವಿಗ್ರಹವನ್ನು ಪ್ರತಿಷ್ಠಾಪಿಸಿ ಇಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ ಅದಾದ ಕೆಲವು ವರ್ಷಗಳ ನಂತರ ಊರಿನ ಹಾಗೂ ಎಲ್ಲಾ ಭಕ್ತರು ಸೇರಿ ಇಲ್ಲಿ ಒಂದು ಗೋಪುರವನ್ನು ಕಟ್ಟಬೇಕು ಗೋಪುರವನ್ನು ಕಟ್ಟಿ ಅಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೊಜಿಸಬೇಕೆಂದು ತೀರ್ಮಾನಿಸುತ್ತಾರೆ .
ಆದರೆ ಒಂದು ದಿನ ರಾತ್ರಿ ಒಬ್ಬ ಗೋಪಾಲಕನ ಕನಸಲ್ಲಿ ದೇವರು ಪ್ರತ್ಯಕ್ಷರಾಗಿ ನನಗೆ ಯಾವುದೇ ಮಂದಿರಗಳನ್ನು ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ ಅದಾದ ನಂತರ ಭಕ್ತರು ದೇವಸ್ಥಾನ ಕಟ್ಟುವ ಕಾರ್ಯ ಅಲ್ಲಿಗೆ ನಿಲ್ಲಿಸಿ, ಅದಾದ ಕೆಲವು ವರ್ಷಗಳ ನಂತರ ಅಂದರೆ ಅನೇಕ ಬಾರಿಯೂ ಅಷ್ಟಮಂಗಳ ಹಾಗೂ ಇನ್ನಿತರ ಪ್ರಶ್ನ ಚಿಂತನೆಗಳಿಂದ ದೇವಸ್ಥಾನ ನಿರ್ಮಿಸಬೇಕೆಂದು ನೋಡಿದಾಗ ಅಲ್ಲಿಯೂ ಗಣಪತಿಗೆ ಯಾವುದೇ ರೀತಿಯ ಮಂದಿರ ಕಟ್ಟಬಾರದು ಹಾಗೂ ಗಣಪತಿ ಇಲ್ಲಿ ಇರುವ ರೀತಿಯಲ್ಲಿ ಇರಬೇಕೆಂದು ಇಚ್ಚಿಸಿದ್ದಾನೆ ಎಂದು ಹೇಳುತ್ತಾರೆ.
ಅದಾದ ನಂತರ ಸ್ಥಳೀಯರು ಊರಿನವರು ಹಾಗೂ ಭಕ್ತರು ಎಲ್ಲರೂ ಇಲ್ಲಿ ದೇವಾಲಯ ನಿರ್ಮಿಸುವ ಕಾರ್ಯವನ್ನು ಅಲ್ಲಿಗೆ ಕೈಬಿಡುತ್ತಾರೆ. ದೇವಾಲಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಭಕ್ತರು ಹಾಗೂ ಊರಿನವರು ಸೇರಿ ನಿರ್ಮಿಸುತ್ತಾರೆ.
ವಿಶೇಷ ದಿನಗಳು.
ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ವಿಶೇಷ ದಿನಗಳು ಪ್ರತಿ ವರ್ಷವೂ ಮಾದ ಶುದ್ಧ ಚೌತಿಯಂದು ಶ್ರೀ ಮಹಾಗಣಪತಿ ದೇವರಿಗೆ ಊರ ಹಾಗೂ ಎಲ್ಲ ಭಕ್ತರು ರಾತ್ರಿಯ ಸಮಯದಲ್ಲಿ ವಿಶೇಷ ಸೇವೆ ಮಹಾಗಣಪತಿಗೆ ಇಷ್ಟವಾದ ಎಲ್ಲಾ ವಸ್ತುಗಳನ್ನು ಅಲ್ಲಿ ಇಟ್ಟು ಫಲ ಪುಷ್ಪಗಳಿಂದ ದೇವರನ್ನು ಅಲಂಕರಿಸಿ ಪೂಜೆಯನ್ನು ಸಲ್ಲಿಸುತ್ತಾರೆ.
ಹಾಗೆ ವಾರದ ಪ್ರತಿ ದಿನವೂ ದೇವರ ದರ್ಶನ ಪಡೆಯಬಹುದು ಯಾವುದೇ ನಿಬಂಧನೆ ಹಾಗೂ ನಿರ್ಬಂಧಗಳು ಇರೋದಿಲ್ಲ.
ಅವಲಕ್ಕಿ ಪ್ರಸಾದ
ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಅವಲಕ್ಕಿ ಪ್ರಸಾದ ತುಂಬಾ ವಿಶೇಷ ಹಾಗೆ ಇಲ್ಲಿ ಸಿಗುವ ಅವಲಕ್ಕಿ ಪ್ರಸಾದದಷ್ಟು ರುಚಿ ಬೇರೆ ಇಲ್ಲೂ ಸಿಗೋದಿಲ್ಲ ಎಂದು ಭಕ್ತರು ಹೇಳುತ್ತಾರೆ.
ಬೆಲ್ಲ ತೆಂಗಿನಕಾಯಿ ಅವಲಕ್ಕಿ ಈ ಮೂರನ್ನು ಹಾಕಿ ಇಲ್ಲಿ ಅವಲಕ್ಕಿಯನ್ನು ಮಾಡುತ್ತಾರೆ ಅದು ವಿಶೇಷವಾದ ರುಚಿ ಹಾಗೂ ದೈವಿಕ ಚೈತನ್ಯದಂತೆ ಗೋಚರವಾಗುತ್ತದೆ ಈ ದೇವಾಲಯದಲ್ಲಿ ಅವಲಕ್ಕಿ ಪಂಚ ಕಜ್ಜಾಯವನ್ನು ಮಾಡಲು 12 ಜನರು ನಿತ್ಯ ಕೆಲಸ ಮಾಡುತ್ತಾರೆ.
ಇಲ್ಲಿಗೆ ತಲುಪುವುದು ಹೇಗೆ
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೇವಲ 14 ಕಿಲೋ ಮೀಟರ್ ದೂರವಾಗುತ್ತದೆ ಈ ದೇವಾಲಯಕ್ಕೆ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಈ ದೇವಾಲಯ ಸಿಗುತ್ತದೆ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದಿಂದ 41 ಕಿಲೋಮಿಟರ್ ದೂರದಲ್ಲಿದೆ.
ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳು ಈ ದೇವಾಲಯಕ್ಕೆ ಸುಲಭದಲ್ಲಿ ಹೋಗಿ ಬರಬಹುದು.
ನಮಸ್ತೆ ಸ್ನೇಹಿತರೆ ಇದಿಷ್ಟು ಮಾಹಿತಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಬಗ್ಗೆ ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಿತ್ಯ ಧ್ವನಿ ವೆಬ್ ಸೈಟ್ ಗೆ ಭೇಟಿ ನೀಡಿ.