ಆಹಾರ ಸೇವನೆ ಅದು ಅವರವರ ವೈಯಕ್ತಿಕ ಆಯ್ಕೆಗಳು ತನಗೆ ಹಾಗೂ ತನ್ನ ಶರೀರಕ್ಕೆ ಯಾವ ರೀತಿಯ ಆಹಾರಗಳು ಬೇಕು ಅನ್ನೋದನ್ನ ಅವರವರೆ ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಸನಾತನ ಹಿಂದೂ ಧರ್ಮದಲ್ಲಿ ಆಹಾರ ಪದ್ಧತಿ ಹಾಗೂ ಆಹಾರ ಸೇವನೆಗೆ ತನ್ನದೇ ಆದಂತಹ ಕೆಲವೊಂದಿಷ್ಟು ನಿಯಮಗಳಿದೆ.
ಒಂದು ವರ್ಷಕ್ಕೆ 12 ಭಾಷೆಗಳು 12 ಮಾರ್ಷಗಳಲ್ಲಿಯೂ ಒಂದೊಂದು ಮಾಸಕ್ಕೆ ಒಂದೊಂದು ರೀತಿಯ ಮಹತ್ವವನ್ನು ನೀಡಲಾಗಿದೆ ಹಾಗೆ ಶ್ರಾವಣ ಮಾಸದಲ್ಲಿ ಆಹಾರ ಸೇವನೆಯ ಪದ್ಧತಿಯ ಮೇಲೆ ಒಂದು ರೀತಿಯ ನಿಯಮವನ್ನ ಸನಾತನ ಹಿಂದೂ ಧರ್ಮದಲ್ಲಿ ನೀಡಲಾಗಿದೆ.
ಶ್ರಾವಣ ಮಾಸದಲ್ಲಿ ಮಾಂಸಹಾರಗಳನ್ನು ಸೇವನೆ ಮಾಡಬಾರದು ಹಾಗೆ ಸೇವನೆ ಮಾಡಿದರೆ ಏನು ಪ್ರಯೋಜನ ಸೇವನೆ ಮಾಡದೆ ಇದ್ದರೆ ಏನು ಪ್ರಯೋಜನ ಅನ್ನುವಂಥದ್ದು ಕೂಡ ಹೇಳಲಾಗಿದೆ
ಶ್ರಾವಣ ಮಾಸ ಎಂದರೆ ಹಿಂದೂ ಧರ್ಮದಲ್ಲಿ ಒಂದು ರೀತಿಯ ಹಬ್ಬದ ಮಾಶವಿಂದೇ ಹೇಳಬಹುದು ಪ್ರಸಿದ್ಧ ಹಬ್ಬಗಳು ಬರುವಂತದ್ದು ಶ್ರಾವಣ ಮಾಸದಲ್ಲಿ ಹಾಗೆ ಶ್ರಾವಣ ಮಾಸದಲ್ಲಿ ಶಿವಭಕ್ತರು ಶಿವನ ಆರಾಧನೆಯನ್ನು ಅತಿ ಹೆಚ್ಚಾಗಿ ಮಾಡುತ್ತಾರೆ ಶ್ರಾವಣ ಮಾಸದಲ್ಲಿ ಅನೇಕ ರೀತಿಯ ಧಾರ್ಮಿಕ ಚಟುವಟಿಕೆಗಳು ಪ್ರಾರಂಭವಾಗುತ್ತದೆ ಆದರೆ ಇಂತಹ ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ಹೆಚ್ಚಿನವರು ಸೇವಿಸುವುದಿಲ್ಲ ಯಾಕೆ ಮಾಂಸಹಾರವನ್ನು ಸೇವನೆ ಮಾಡುವುದಿಲ್ಲ ಇದಕ್ಕೆ ವೈಜ್ಞಾನಿಕ ಹಾಗೂ ಧಾರ್ಮಿಕ ಮಹತ್ವವೇನು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.
ಸನಾತನ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದಂತಹ ಮಹತ್ವವಿದೆ ಶ್ರಾವಣ ಅಷ್ಟೇ ಅಲ್ಲದೆ ಇನ್ನು ಅನೇಕ ಮಾಸಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ ಹಾಗೆ ಪ್ರತಿಯೊಂದು ಮಾಸಗಳಿಗೂ ಒಂದೊಂದು ರೀತಿಯ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವವನ್ನು ಪಂಚಾಂಗಗಳಲ್ಲಿ ನೀಡಿದ್ದಾರೆ.
ಶ್ರಾವಣ ಮಾಸ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಮಾಸಗಳಿಗೂ ಒಂದೊಂದು ಮಹತ್ವವನ್ನು ಪುರಾಣಗಳಲ್ಲಿ ನೀಡಲಾಗಿದೆ ಕಾರ್ತಿಕ ಮಾಸ ದೀಪಾರಾಧನೆ ಮಾಸ ಶ್ರಾವಣ ಮಾಸ ಭಕ್ತಿಯ ಮಾಸ ಹೀಗೆ ಪ್ರತಿಯೊಂದು ಮಾಸಗಳಿಗೂ ವಿಶಿಷ್ಟವಾದಂತಹ ಮಹತ್ವಗಳು ಮತ್ತೆ ಆರಾಧನ ಪದ್ಧತಿಗಳು ಇವೆ.
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತದೆ ಆಷಾಢ ಕಳೆದು ಶ್ರಾವಣ ಶುರುವಾಗುವಾಗ ಒಂದು ತಿಂಗಳು ನಿರಂತರವಾಗಿ ಹಬ್ಬಗಳು ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ.
ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು.
ನಾಗ ಚೌತಿ, ನಾಗ ಪಂಚಮಿ, ಪುತ್ರದಾ ಏಕಾದಶಿ,ರಕ್ಷಾಬಂಧನ ,ರಾಘವೇಂದ್ರ ಸ್ವಾಮಿಗಳ ಆರಾಧನೆ
,ಗೋಕುಲಾಷ್ಟಮಿ ,ಅಜ ಏಕಾದಶಿ ,ಕಲ್ಕಿ ಜಯಂತಿ ಶ್ರೀ ವರಮಹಾಕ್ಷ್ಮೀ ಪೂಜೆ ,ಮಂಗಳ ಗೌರಿ ವ್ರತ ,ಶ್ರಾವಣ ಶನಿವಾರ ,ಋಗುಪಾಕರ್ಮ ,ಯಜುರುಪಾಕರ್ಮ ,ಶಿರಿಯಾಳ ಷಷ್ಠೀ ,ಶ್ರೀ ಕೃಷ್ಣ ಜನ್ಮಾಷ್ಟಮಿ.
ಹೆಚ್ಚಾಗಿ ಶ್ರಾವಣ ಮಾಸ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ ಹಾಗೆ ಧಾರ್ಮಿಕ ಶುಭ ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಮಾಡುತ್ತಾರೆ.
ಇನ್ನು ಶ್ರಾವಣ ಮಾಸದಲ್ಲಿ ಜನರು ಶಿವನ ಆರಾಧನೆಯನ್ನು ಅತಿ ಹೆಚ್ಚಾಗಿ ಮಾಡುತ್ತಾರೆ ಹಾಗೆ ಶಿವಭಕ್ತರಿಗೆ ಶ್ರಾವಣ ಮಾಸ ಪವಿತ್ರ ಮಾಸ ಎಂದು ಹೇಳುತ್ತಾರೆ,ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಪತ್ರಂ ಪುಷ್ಪಂ ಮತ್ತು ಫಲಂ ತೋಯಂ ಅರ್ಪಿಸಿ ಭಕ್ತರು ಉಪವಾಸ ಹಾಗೂ ವೃತ ಆಚರಿಸುತ್ತಾರೆ.
ಹಾಗೆ ಶ್ರಾವಣ ಮಾಸದಲ್ಲಿ ಹೆಚ್ಚಿನವರು ಮಾಂಸಹಾರವನ್ನು ಸೇವನೆ ಮಾಡುವುದಿಲ್ಲ ಆದರೆ ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ಯಾಕೆ ಸೇವನೆ ಮಾಡಬಾರದು ಇದರ ವೈಜ್ಞಾನಿಕ ಮಹತ್ವವೇನು? ಹಾಗೂ ಧಾರ್ಮಿಕ ಮಹತ್ವಗಳೇನು ಅನ್ನೋದನ್ನ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.
ಶ್ರಾವಣ ಮಾಸದಲ್ಲಿ ಮಾಂಸಹಾರ ಯಾಕೆ ಸೇವನೆ ಮಾಡುವುದಿಲ್ಲ ಧಾರ್ಮಿಕ ಆದ್ಯಾತ್ಮ ಮಹತ್ವಗಳು.
ಇನ್ನು ಧಾರ್ಮಿಕ ನಂಬಿಕೆಗಳ ಪ್ರಕಾರ ಪುರಾಣಗಳಲ್ಲಿ ಉಲ್ಲೇಖವಿರುವಂತೆ ಶ್ರಾವಣ ಮಾಸವು ಪವಿತ್ರ ಮಾಸ ಈ ಮಾಸದಲ್ಲಿ ಶುದ್ಧಾಚಾರವನ್ನು ಪಾಲಿಸುವುದರಿಂದ ಸುದ್ದಿ ಮಾನಸಿಕ ಸುದ್ದಿ ಹಾಗೂ ದೈಹಿಕ ಸುದ್ದಿಯು ಆಗುತ್ತದೆ ಹಾಗೂ ಇದು ಮನುಷ್ಯನನ್ನು ಮೂರು ರೀತಿಯಾಗಿ ಬಲಿಷ್ಠಗೊಳಿಸುತ್ತದೆ ಒಂದು ಅಧ್ಯಾತ್ಮಿಕ ಶಕ್ತಿಯನ್ನು ಜಾಗೃತಿಸುತ್ತದೆ ಎರಡು ಮನುಷ್ಯನ ದೈಹಿಕ ಬಲವನ್ನು ಹೆಚ್ಚಿಸುತ್ತದೆ ಮೂರು ಮಾನವನ ಮಾನಸಿಕ ಬಲವನ್ನ ವೃದ್ಧಿಸುತ್ತದೆ ಶ್ರಾವಣ ಮಾಸದಲ್ಲಿ ಒಂದು ರೀತಿಯ ಪ್ರಶಾಂತವಾದ ವಾತಾವರಣವಿರುತ್ತದೆ ಅತಿಯಾದ ಶಕೆಯು ಇರುವುದಿಲ್ಲ ಹಾಗೂ ಚಳಿಯೂ ಕೂಡ ಇರೋದಿಲ್ಲ ಇದು ಅಧ್ಯಾತ್ಮ ಸಾಧನೆಗೆ ಹಾಗೂ ಭಕ್ತಿಯ ಮಾರ್ಗಕ್ಕೆ ಉತ್ತಮ ಮಾಸ ಹಾಗಾಗಿ ಈ ಮಾಶದಲ್ಲಿ ಮಾಂಸಹಾರಗಳನ್ನು ಹೆಚ್ಚಿನವರು ಹಾಗೂ ಸಾಧಕರು ಸೇವನೆ ಮಾಡುವುದಿಲ್ಲ.
ಹಿಂದೂ ಧರ್ಮದ ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಪ್ರತಿದಿನವೂ ಒಂದೊಂದು ದೇವರ ರಥ ಹಾಗೂ ಆಚರಣೆಗಳನ್ನು ಮಾಡುತ್ತಾರೆ ಹಾಗಾಗಿ ಇಡೀ ತಿಂಗಳು ಪೂಜೆ ಪುನಸ್ಕಾರ ವ್ರತಗಳನ್ನ ಮಾಡುವುದರಿಂದ ಈ ಒಂದು ತಿಂಗಳ ಕಾಲ ಮಾಂಸಹಾರವನ್ನು ಸೇವನೆ ಮಾಡುವುದಿಲ್ಲ ಇದು ನೂರಾರು ವರ್ಷಗಳ ಹಿಂದಿನಿಂದಲೂ ಕೂಡ ನಡೆದು ಬಂದ ಪದ್ದತಿ.
ಕೆಲವು ಪ್ರಮುಖ ಹಬ್ಬಗಳು ಶ್ರಾವಣ ಮಾಸದಲ್ಲಿಯೇ ಬರುತ್ತದೆ ಉದಾಹರಣೆ, ಮಂಗಳ ಗೌರಿ ವೃತ, ರಕ್ಷಾ ಬಂಧನ, ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ಹಾಗೂ ಶನಿವಾರ, ಸೋಮವಾರ, ಹಾಗೂ ಮಂಗಳವಾರ ವಿಶೇಷವಾಗಿ ಪೂಜೆಗಳನ್ನು ನೆರವೇರಿಸುತ್ತಾರೆ ಇದು ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವನೆ ಯಾಕೆ ಮಾಡುವುದಿಲ್ಲ ಅನ್ನುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಹತ್ವಗಳು.
ಇನ್ನು ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ಯಾಕೆ ಸೇವನೆ ಮಾಡುವುದಿಲ್ಲ ವೈಜ್ಞಾನಿಕ ಮಹತ್ವವೇನು.
ಇನ್ನು ಶ್ರಾವಣ ಮಾಸದಲ್ಲಿ ಮಾಂಸಹಾರ ಸೇವನೆ ಮಾಡದೆ ಇರುವುದಕ್ಕೆ ವೈಜ್ಞಾನಿಕ ಕಾರಣಗಳು ಹಾಗೂ ವೈಜ್ಞಾನಿಕ ಮಹತ್ವಗಳನ್ನು ಕೂಡ ನೀಡಲಾಗಿದೆ.
ಶ್ರಾವಣ ಮಾಸದಲ್ಲಿ ಶ್ರಾವಣ ಮಾಸ ಸಂದರ್ಭದಲ್ಲಿ ಮಳೆಗಾಲವೂ ಕೂಡ ಹೆಚ್ಚಿರುತ್ತದೆ ಇಂಥ ಸಂದರ್ಭದಲ್ಲಿ ಪ್ರಕಟಿಕವಾಗಿ ಸೂರ್ಯನ ಬಿಸಿಲು ಬೀಳುವುದಿಲ್ಲ ಮನುಷ್ಯನ ಶರೀರದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ಆಗಲು ಸೂರ್ಯನ ಕಿರಣಗಳು ಮಾನವನ ಶರೀರದ ಮೇಲೆ ಸ್ಪರ್ಶಿಸಿದರೆ ಮಾತ್ರ ಜೀರ್ಣಕ್ರಿಯೆ ಹಾಗೂ ಜೀರ್ಣ ಶಕ್ತಿ ಹೆಚ್ಚಿಸುತ್ತದೆ ಸೂರ್ಯನ ಶಕ್ತಿ ಮಾನವನ ಸರಿ ಇರದ ಮೇಲೆ ಬೀಳದೆ ಇದ್ದರೆ ಜೀರ್ಣಕ್ರಿಯೆ ಆಗುವುದಿಲ್ಲ ಅನ್ನುವಂತದ್ದು ನಂಬಿಕೆ
ಇನ್ನು ಶ್ರಾವಣ ಮಾಸದಲ್ಲಿ ವಾತಾವರಣದಲ್ಲಿ ಏರುಪೇರು ಆಗುವುದರಿಂದ ಹಾಗೂ ಸೂರ್ಯನ ಬಿಸಿಲು ಕಮ್ಮಿ ಆಗುವುದರಿಂದ ಮಳೆಗಳು ಬರುತ್ತಿರುತ್ತದೆ ಹಾಗೆ ಈ ಸಮಯದಲ್ಲಿ ಶರೀರದಲ್ಲಿ ಮಾಂಸಹಾರವನ್ನ ಸೇವನೆ ಮಾಡಿ ಜೀರ್ಣಿಸಿಕೊಳ್ಳುವ ಶಕ್ತಿ ಅಷ್ಟರಮಟ್ಟಿಗೆ ಇರೋದಿಲ್ಲ, ಇದೇ ಕಾರಣದಿಂದ ದೇಹವು ಜಡತ್ವವಾಗುತ್ತದೆ ಮನಸ್ಸಿನ ಉಲ್ಲಾಸಗಳು ಕಡಿಮೆಯಾಗುತ್ತದೆ.
ಹಾಗೆ ಈ ಮಾಸದಲ್ಲಿ ತಂಪಿನ ವಾತಾವರಣಗಳು ಹೆಚ್ಚು ಇರುವುದರಿಂದ ಮಾಂಸಹಾರ ಸೇವನೆ ಮಾಡಿದಾಗ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಜ್ವರ ಕೆಮ್ಮು ಹಾಗೂ ವಾಂತಿ ಅಂತಹ ಸಮಸ್ಯೆಗಳು ಶುರುವಾಗುವ ಸಾಧ್ಯತೆಗಳು ಇರುತ್ತದೆ ಎಂದು ಪೂರ್ವಜರು ಈ ಮಾಸದಲ್ಲಿ ಮಾಂಸಹಾರವನ್ನು ಸೇವನೆ ಮಾಡುವುದನ್ನು ನಿಲ್ಲಿಸುತ್ತಿದ್ದರು.
ಹಾಗೆ ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭ ಕೂಡಾ. ಈ ಸಂದರ್ಭದಲ್ಲಿ ಮನುಷ್ಯರು ತಿನ್ನಲು ಮೀನು ಹಿಡಿದರೆ ಆಗ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿ ಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ, ಮೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮೀನುಗಳನ್ನೂ ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.
ರಕ್ಷಿತಾ ಪಿ