SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.ಪಿಯುಸಿ ಹಾಗೂ SSLC ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ .

SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಸಮಯ ಮೀರಿ ಹೋಗಿದ್ದು ಎಂದು ಟೆನ್ಶನ್ ಆಗಿದ್ದೀರಾ ಟೆನ್ಶನ್ ಆಗಬೇಡಿ
ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ ಹೌದು ಸ್ನೇಹಿತರೆ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಣೆ ಮಾಡಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ ಇದರಿಂದ ಇದುವರೆಗೆ ಅರ್ಜಿ ಸಲ್ಲಿಸಲು ವಿಳಂಬವಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿದಂತೆ ಆಗಿದೆ ಸರಕಾರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್.

ಪ್ರವರ್ಗ-1ರ ಮತ್ತು ಹಿಂದುಳಿದ ವರ್ಗಗಳ ಅರೆ ಅಲೆಮಾರಿ ಹಾಗೂ ಅಲೆಮಾರಿ ವಿದ್ಯಾರ್ಥಿಗಳಿಗಾಗಿ 2024-25 ನೇ ಸಾಲಿನ ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಸರಕಾರ ಅಕ್ಟೋಬರ್ 15 ರ ತನಕ ದಿನಾಂಕವನ್ನು ವಿಸ್ತರಿಸಿದೆ,

ಸರಕಾರದ ಈ ನಿರ್ಧಾರಗಳಿಂದ ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಸಾವಿರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದರು ಆದರೆ ಈಗ ಅವರ ಮುಖದಲ್ಲಿ ಸಂತೋಷ ಮೂಡಿದೆ ವಿದ್ಯಾರ್ಥಿಗಳಿಗೆ ಅದು ಸಲ್ಲಿಸಲು ಇನ್ನಷ್ಟು ಅವಕಾಶ ಕಲ್ಪಿಸಿ ಕೊಟ್ಟಂತೆ ಆಗಿದೆ ಹಾಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ಅವನ ಶಿಕ್ಷಣಕ್ಕಾಗಿ ಯಾವುದೇ ಕುಂದು ಕೊರತೆಗಳು ಬಾರದ ಹಾಗೆ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಹಾಗಾದರೆ ರಾಜ್ಯ ಸರಕಾರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

15-10-2024

ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಆಗಿದ್ದರಿಂದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಹಾಗೂ ಮಾಹಿತಿಗಳನ್ನು ಪರಿಶೀಲಿಸಿ ನಿಗದಿತ ಸಮಯದ ಒಳಗೆ ಅರ್ಜಿ ಸಲ್ಲಿಸಬಹುದು ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಅವರ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರ ಆಗಲಿದೆ.

ಅರ್ಜಿ ಸಲ್ಲಿಸುವ ವಿಧಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ಹೇಳಿರುವಂತೆ https://ssp.postmatric.karnataka.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಸ್ಕಾಲರ್ ಶಿಪ್ ಗೆ ಮೊದಲಿನ ರೀತಿ ಇಲಾಖೆಯ ಕಚೇರಿಗೆ ಹೋಗಿ ಸಲ್ಲಿಸಬೇಕಾಗಿಲ್ಲ ಆನ್ಲೈನ್ ಮುಖಾಂತರ ಆರಾಮಾಗಿ ಅರ್ಜಿಯನ್ನು ಸಲ್ಲಿಸಬಹುದು ಆದರೆ ಅರ್ಜಿಯ ಪ್ರತಿಯೊಂದು ಹಂತವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ.

ಮೊದಲು ಅರ್ಜಿ ಸಲ್ಲಿಸಲು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು ಆದರೆ ಈಗ ಸರಕಾರ ಸಾರ್ವಜನಿಕರಿಗೆ ಸುಲಭವಾಗಿ ಡಿಜಿಟಲ್ ಇಂಡಿಯಾ ಅಡಿಯಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ಮಾಹಿತಿ
ಆಧಾರ್ ಕಾರ್ಡ್
ಹಾಗೂ ವಿದ್ಯಾರ್ಥಿಯ ಮಾಹಿತಿ

ಈ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ತಪ್ಪುಗಳು ಆದಲ್ಲಿ ಸರಿಪಡಿಸಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ವಿದ್ಯಾರ್ಥಿ ವೇತನದ ಪ್ರಯೋಜನಗಳು

ವಿದ್ಯಾರ್ಥಿ ವೇತನ ಅನ್ನೋದು ಈಗಿನ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿದೆ ವಿದ್ಯಾರ್ಥಿಗಳು ಸರಕಾರದ ಈ ವಿದ್ಯಾರ್ಥಿ ವೇತನಗಳನ್ನು ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ಹಾಗೂ ವಿದ್ಯಾಭ್ಯಾಸದಲ್ಲಿ ಮುಂದಿನ ಸಾಧನ ಮಾರ್ಗವನ್ನು ರೂಪಿಸಿಕೊಳ್ಳಬಹುದಾಗಿದೆ.

ಅರ್ಲಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಯಾವುದೇ ತಾಂತ್ರಿಕ ಸಮಸ್ಯೆಗಳು ಇದ್ದರೆ ಸಹಾಯವಾಣಿ ಹಾಗೂ ಸಂಪರ್ಕ.

ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಹಾಗೂ ಮಾಹಿತಿಗಳಲ್ಲಿ ವ್ಯತ್ಯಾಸಗಳು ಆದರೆ ನೀವು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಗಳನ್ನು ಪಡೆಯಬಹುದಾಗಿದೆ.

ದೂರವಾಣಿ ಸಂಖ್ಯೆ : 8050770005

ಇದಿಷ್ಟು ಮಾಹಿತಿ ssp ವಿದ್ಯಾರ್ಥಿ ವೇತನದ ವಿಚಾರವಾಗಿ.

ನಿರಂತರ ಸುದ್ದಿಗಳಿಗಾಗಿ ನಿತ್ಯ ಧ್ವನಿ ವೆಬ್ಸೈಟ್ ಗೆ ಭೇಟಿ ನೀಡಿ

ಇನ್ನು ಕರ್ನಾಟಕ ರಾಜ್ಯ ಸರಕಾರದಿಂದ ಪರಿಶಿತ ಜಾತಿ ಮತ್ತು ಪರಿಷ್ಠಿತ ಪಂಗಡಗಳ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ,

ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆ ನೀಡುವ ಈ ವಿದ್ಯಾರ್ಥಿ ವೇತನ ಸಹಾಯವನ್ನು SSLC ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ನೀಡಲಾಗುತ್ತದೆ ಇದರ ಮೊತ್ತ 7,000 ರೂ ಹಾಗೂ 15 ಸಾವಿರ ತನಕ ನೀಡಲಾಗುತ್ತದೆ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಇದು ತುಂಬಾ ಸಹಾಯಕವಾಗಿದೆ.

ಬೇಕಾಗುವ ಸೂಕ್ತ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

SSLS ಓದುತ್ತಿರುವ ಅಥವಾ ಪೂರ್ಣಗೊಂಡಿರುವ SC/ST ವಿದ್ಯಾರ್ಥಿ ಆಗಿರಬೇಕು

ಅರ್ಜಿ ಸಲ್ಲಿಸುವ ವಿದ್ಯಾರ್ಥಿ SSLC ವಿದ್ಯಾಭ್ಯಾಸವನ್ನು ಕರ್ನಾಟಕದ ಖಾಸಗಿ ಅಥವಾ ಸರಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು.

ಅರ್ಧಿ ಸಲ್ಲಿಸುವ ವಿದ್ಯಾರ್ಥಿ SSLC ಪರೀಕ್ಷೆಯಲ್ಲಿ ಶೇಕಡ 60ರಷ್ಟು ಅಂಕಿ ಗಳಿಸಿರಬೇಕು.

ಹಾಗೂ ಬೇಕಾದ ಸೂಕ್ತ ದಾಖಲೆಗಳು ಹೊಂದಿರಬೇಕು.

75% ಗಿಂತ ಹೆಚ್ಚು ಅಂಕಿ ಪಡೆದ ವಿದ್ಯಾರ್ಥಿಗಳಿಗೆ 15,000 ಮತ್ತ ನೀಡಲಾಗುತ್ತದೆ.

60% ಗಿಂತ ಹೆಚ್ಚಿಗೆ ಪಡೆದ ವಿದ್ಯಾರ್ಥಿಗಳಿಗೆ 7,000 ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.

2023-2024ರ SSLC ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೆ ಅರ್ಲಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಿರುತ್ತದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ SSLC ಅಂಕಪಟ್ಟಿ

ವಿದ್ಯಾರ್ಥಿಯ ಆಧಾರ್ ಕಾರ್ಡ್

ವಿದ್ಯಾರ್ಥಿಯ ಪಾಸ್ ಬುಕ್

ವಿದ್ಯಾರ್ಥಿಯ ಪಾಸ್ಪೋರ್ಟ್ ಗಾತ್ರದ ಫೋಟೋ.

ಅರ್ಜಿ ಸಲ್ಲಿಸುವ ಲಿಂಕ್ https://sw.kar.nic.in

ಸ್ನೇಹಿತರೆ ಇದಿಷ್ಟು ಸ್ಕಾಲರ್ಶಿಪ್ ಗಳನ್ನ ನೀವು ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಹೇಳಿದ ಎಲ್ಲಾ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ.

ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ, ನಂತರವೇ ನೀವು ಅರ್ಜಿಯನ್ನು ಸಲ್ಲಿಸಿ ನಂತರ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಅರ್ಜಿಗಳು ವಜಾ ಆಗುವ ಸಾಧ್ಯತೆಗಳು ಕೂಡ ಇರುತ್ತದೆ.

ಹೇಳಿದ ಎಲ್ಲ ಮಾಹಿತಿಗಳನ್ನು ಸರಿಯಾಗಿ ಪಾಲಿಸಿ ಹಾಗೂ ವಿದ್ಯಾರ್ಥಿ ವೇತನ ಅನ್ನುವಂತದ್ದು ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕವಾಗಿರುವಂತಹ ಒಂದು ಯೋಜನೆಯಾಗಿದೆ ಹಾಗೂ ಸಹಾಯವು ಕೂಡ ಆಗಿದೆ ವಿದ್ಯಾರ್ಥಿಗಳು ಈ ಸರಕಾರದ ವಿದ್ಯಾರ್ಥಿ ವೇತನಗಳನ್ನು ಪಡೆದು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿಕೊಳ್ಳಬಹುದಾಗಿದೆ.

ಇನ್ನು ನಿರಂತರ ಸುದ್ದಿಗಳಿಗಾಗಿ ಓದಲು ನಿತ್ಯ ಧ್ವನಿ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಿರಂತರ ಸುದ್ದಿಗಳನ್ನು ಓದಿ.

ನಿತ್ಯ ಧ್ವನಿ ನೈಜ ಹಾಗೂ ಸತ್ಯವಾದ ಅಂತಹ ಸುದ್ದಿಗಳನ್ನು ನೀಡುತ್ತದೆ ಸುಳ್ಳು ಅಥವಾ ಆಧಾರವಿಲ್ಲದ ಮಾಹಿತಿಗಳನ್ನು ನೀಡುವುದಿಲ್ಲ

Leave a Comment

Your email address will not be published. Required fields are marked *

Scroll to Top