
ಬೀದರ್ – ಕಾಲೇಜು ಒಂದರಲ್ಲಿ ಜೈ ಶ್ರೀರಾಮ್ ಡಿಜೆ ಹಾಡು ಹಾಕಿದ್ದಕ್ಕೆ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ…!
ಬೀದರ್ ನಗರದ ಜಿ ಎನ್ ಡಿ ಕಾಲೇಜಿನಲ್ಲಿ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ತಕರಾರು ತೆಗೆದಿದ್ದಾರೆ…!!
ಕಾಲೇಜಿನಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯೂಟ್ಯೂಬ್ನಲ್ಲಿ ಹಾಡನ್ನು ಹಾಕುವಾಗ ನೃತ್ಯಕ್ಕೆ ಅನುಕೂಲ ಆಗಲೆಂದು ಜೈ ಶ್ರೀರಾಮ್ ಡಿಜೆ ಹಾಡನ್ನು ಹಾಕಲಾಗಿದೆ…!
ಈ ವೇಳೆ ಬಹುತೇಕ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದಾರೆ…!!
ಆದರೆ, ಅನ್ಯಕೋಮಿನ ವಿದ್ಯಾರ್ಥಿಗಳು ಜೈ ಶ್ರೀರಾಮ್ ಹಾಡು ಹಾಕಿದ ಕಾರಣಕ್ಕೆ ಗಲಾಟೆ ಆರಂಭಿಸಿದ್ದಾರೆ…!
ಇದರಿಂದಾಗಿ ಕಾಲೇಜು ಸಭಾಂಗಣದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ…!!
ಹಾಡನ್ನು ಹಾಕುತ್ತಿದ್ದ ವಿರೇಂದ್ರ ಪಾಟೀಲ್ ಎಂಬ ವಿದ್ಯಾರ್ಥಿ ಮೇಲೆ ಅನ್ಯ ಕೋಮಿನ ಕೆಲ ವಿದ್ಯಾರ್ಥಿಗಳಿಂದ ಹಲ್ಲೆ ಮಾಡಲಾಗಿದೆ…!
ಆಗಿದ್ದೇನು…?
ಕಾಲೇಜು ಫೆಸ್ಟ್ ಅಂಗವಾಗಿ ಕಾಲೇಜಿನಲ್ಲಿ ಬುಧವಾರ ಡಿ ಜೆ ಹಾಡಿಗೆ ವಿದ್ಯಾರ್ಥಿಗಳು ಡಾನ್ಸ್ ಮಾಡುತ್ತಿದ್ದರು…!
ಕೊನೆಯಲ್ಲಿ ಡಿ ಜೆ ‘ಜೈಶ್ರೀರಾಮ್’ ಹಾಡು ಹಾಕಿದ್ದಾರೆ…!!
ಅದಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ…!
ಕಾಲೇಜಿನಲ್ಲಿ ಈ ರೀತಿಯ ಹಾಡುಗಳನ್ನು ಹಾಕಬಾರದು, ಬೇರೆ ಹಾಡು ಹಾಕಬೇಕು ಎಂದು ಒತ್ತಾಯಿಸಿದ್ದಾರೆ…!!
ಹಿಂದೂ ವಿದ್ಯಾರ್ಥಿಗಳು ಡಿ ಜೆ ಬೆಂಬಲಕ್ಕೆ ಹೋಗಿ, ಅದೇ ಹಾಡು ಹಾಕಿ ಎಂದಿದ್ದಾರೆ…!
ಈ ವೇಳೆ ಎರಡೂ ಕಡೆಯ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ…!!
ವಿಷಯ ತಿಳಿದು ಪೊಲೀಸರು ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ’ ಎಂದು ಎಸ್ಪಿ ಚನ್ನಬಸವಣ್ಣ ಮಾಹಿತಿ ನೀಡಿದ್ದಾರೆ…!