
ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ…!
ಮೇ 7 ರಂದು ನಡೆಯಲಿರುವ ಮೂರನೇ ಹಂತದ ಲೋಕಸಭಾ ಚುನಾವಣೆಯ ನಾಮಪತ್ರ ಪರಿಶೀಲನೆ ನಿನ್ನೆ ನಡೆದಿದ್ದು ನಾಮಪತ್ರ ಕ್ರಮಬದ್ಧವಾಗಿ ಇರದ ಕಾರಣ ಸೂರತ್ ನ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕ್ರತಗೊಂಡಿತ್ತು…!
ಹಾಗಾಗಿ ಬಿಜೆಪಿ ಅಭ್ಯರ್ಥಿ
ಮುಕೇಶ್ ದಲಾಲ್ ಸೇರಿದಂತೆ ಕೆಲ ಪಕ್ಷೇತರ ಸದಸ್ಯರು ಚುನಾವಣಾ ಕಣದಲ್ಲಿದ್ದರು…!!
ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ…!
ಕಣದಲ್ಲಿರುವ ಎಲ್ಲಾ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಇಂದು ವಾಪಾಸ್ ಪಡೆದಿದ್ದಾರೆ…!!
ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಒಬ್ಬರೇ ಚುನಾವಣಾ ಕಣದಲ್ಲಿ ಉಳಿದಿರುವ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ…!