
ಓರ್ವ ಪ್ರಸಿದ್ಧ ಭಾರತೀಯ ಲೇಖಕಿ ಆಕೆ, ಕೊಲ್ಕತ್ತಾದಲ್ಲಿ ಉದ್ಯಮಿಯಾಗಿದ್ದ, ಅಫ್ಘಾನಿಸ್ತಾನ ಮೂಲದ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ವಿವಾಹವಾಗಿದ್ದಳು, ಆದರೆ ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ಆಕೆ ನಿರಾಕರಿಸಿದಳು ಎಂಬ ಏಕೈಕ ಕಾರಣಕ್ಕೆ ಅವಳನ್ನು ಗುಂಡಿಕ್ಕಿ 2013 ನೇ ಇಸವಿಯಲ್ಲಿ ಹತ್ಯೆ ಮಾಡಲಾಯಿತು…!
ಆಕೆಯ ಹೆಸರು ಸುಸ್ಮಿತಾ ಬ್ಯಾನರ್ಜಿ, ಈಕೆಯ ಜೀವನಗಾಥೆ ಒಂದು ರೋಚಕ ಕಥೆ…!!
ಕೊಲ್ಕತ್ತಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಈಕೆಯ ಜನನ…!
ತಂದೆ ನಾಗರಿಕ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತಿದ್ದರೆ, ಆಕೆಯ ತಾಯಿ ಗೃಹಿಣಿಯಾಗಿದ್ದರು….!!
ಈ ದಂಪತಿಗಳಿಗೆ ನಾಲ್ವರು ಮಕ್ಕಳು, ಮೂವರು ಸಹೋದರರಿಗೆ ಈಕೆ ಒಬ್ಬಳೇ ಸಹೋದರಿ…!
ಕೊಲ್ಕತ್ತಾದಲ್ಲಿ ರಂಗಭೂಮಿಯ ರಿಹರ್ಸಲ್ ಸಮಯದಲ್ಲಿ ಅಫ್ಘಾನ್ ಉದ್ಯಮಿ ಜನಬಾಜ್ ಖಾನ್ ನನ್ನು ಭೇಟಿಯಾಗಿ ಪ್ರೀತಿಯ ಬಲೆಗೆ ಸಿಕ್ಕಿಬಿದ್ದಳು…!
ಕೋಲ್ಕತ್ತಾದಲ್ಲಿ ರಹಸ್ಯವಾಗಿ ಇವರಿಬ್ಬರ ಮದುವೆಯು ಸಹ ಆಯಿತು…!!
ಈಕೆಯ ಪೋಷಕರು ಇದನ್ನು ತೀವ್ರವಾಗಿ ವಿರೋಧಿಸುತ್ತಾರೆ, ವಿಚ್ಛೇದನ ನೀಡಲು ಹೇಳುತ್ತಾರೆ ಎಂಬ ಭಯದಿಂದ ಖಾನ್ ಜೊತೆ ಆಫ್ಘಾನಿಸ್ತಾನಕ್ಕೆ ಓಡಿಹೋದಳು…!
ಆದರೆ ಆಫ್ಘಾನ್ ಗೆ ಹೋದ ನಂತರ ಉದ್ಯಮಿ ಜನಬಾಜ್ ಖಾನ್ ಗೆ ಮೊದಲ ಪತ್ನಿ ಇರುವುದು ಬೆಳಕಿಗೆ ಬಂತು…!!
ಇದನ್ನು ಕಂಡು ಆಕೆ ಆಘಾತಕ್ಕೊಳಗಾದರೂ ಸಹ ಇಡೀ ಕುಟುಂಬದ ಜೊತೆಗೆ ಪತಿಯ ಪೂರ್ವಜರ ಮನೆಯಲ್ಲಿ ವಾಸಿಸಲು ಆರಂಭಿಸಿದಳು…!
ಪತಿ ಜನಬಾಜ್ ಖಾನ್ ತಮ್ಮ ವ್ಯವಹಾರವನ್ನು ಮುಂದುವರಿಸಲು ಕಲ್ಕತ್ತಾಗೆ ಮರಳಿದರು, ಆದರೆ ಬ್ಯಾನರ್ಜಿಗೆ ಭಾರತಕ್ಕೆ ಮರಳಲು ಸಾಧ್ಯವಾಗಲಿಲ್ಲ…!!
ಅಫ್ಘನ್ ದೇಶದಿಂದ ಪಲಾಯನ ಮಾಡಲು ಎರಡೆರಡು ಬಾರಿ ಆಕೆ ಪ್ರಯತ್ನಿಸಿದಳು…!
ಆದರೆ ಆಕೆಯ ಪಲಾಯನ ಮಾಡುವ ಪ್ರಯತ್ನ ಫಲ ನೀಡಲಿಲ್ಲ…!!
ಕೊನೆಗೆ ಬ್ಯಾನರ್ಜಿಯನ್ನು ಗೃಹಬಂಧನದಲ್ಲಿ ಇರಿಸಲಾಯಿತು, ಆಕೆಯ ವಿರುದ್ಧ ಫತ್ವಾ ಹೊರಡಿಸಲಾಯಿತು, ಮತ್ತು 22 ಜುಲೈ 1995 ರಂದು ಆಕೆಯನ್ನು ಕೊಲ್ಲಲು ನಿರ್ಧಾರ ಮಾಡಲಾಯಿತು, ಆದರೆ ಆಕೆ ಹೇಗೋ ಗ್ರಾಮದ ಮುಖ್ಯಸ್ಥನ ಸಹಾಯದಿಂದ ತಪ್ಪಿಸಿಕೊಂಡು ಕಾಬೂಲ್ ಅನ್ನು ತಲುಪಿದರಳು, ಹಾಗೂ 12 ಆಗಸ್ಟ್ 1995 ರಂದು ಕೋಲ್ಕತ್ತಾಗೆ ವಿಮಾನ ಏರಿದಳು…!
ಅಫ್ಘನ್ ನಿಂದ ಹೇಗೋ ತಪ್ಪಿಸಿಕೊಂಡು, 1995 ರಲ್ಲಿ ಹೇಗೋ ಭಾರತಕ್ಕೆ ಮರಳಿದ ಈಕೆ 2013 ರವರೆಗೆ ಭಾರತದಲ್ಲೇ ಇದ್ದಳು…!!
ಈ ಸಮಯದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು…!
ಅಂತಿಮವಾಗಿ ಪತಿಯ ಜೊತೆಗೆ ರಾಜಿ ಸಂಧಾನ ಮಾಡಿಕೊಂಡು ಭಾರತದಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದರು…!!
ಇದಾದ ನಂತರ ಮತ್ತೆ ಪತಿಯ ಜೊತೆ ಅಫ್ಘಾನ್ ತೆರಳಿದ ಈಕೆ ಆಗ್ನೇಯ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ವೃತ್ತಿ ಜೀವನ ಆರಂಭಿಸಿದರು ಜೊತೆಗೆ ಸ್ಥಳೀಯ ಮಹಿಳೆಯರ ಜೀವನವನ್ನು ಚಿತ್ರೀಕರಿಸಲು ಪ್ರಾರಂಭಿಸಿದರು…!
4 ಸೆಪ್ಟೆಂಬರ್ 2013 ರ ರಾತ್ರಿ ಪಕ್ಟಿಕಾದಲ್ಲಿರುವ ಆಕೆಯ ಮನೆಗೆ ತಾಲಿಬಾನ್ ಉಗ್ರರು ಬಲವಂತವಾಗಿ ಪ್ರವೇಶಿಸಿ ಗಂಡ ಮತ್ತು ಆಕೆಯನ್ನು ಅಪಹರಿಸಿದರು…!
ಮರುದಿನ ಆಕೆಯ ಶವ ಪತ್ತೆಯಾಯ್ತು, ಆಕೆಯ ದೇಹದಲ್ಲಿ 20 ಗುಂಡು ತಾಗಿದ ಗಾಯವಿತ್ತು, ವಿವಿಧ ಕಾರಣಗಳಿಗಾಗಿ ಆಕೆಯನ್ನು ತಾಲಿಬಾನಿಗಳು ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸರು ಊಹಿಸಿದರು, ಆದರೆ ತಾಲಿಬಾನ್ ಈ ಕೃತ್ಯವನ್ನು ನಿರಾಕರಿಸಿತು, ಕೊನೆಗೆ ತಾಲಿಬಾನ್ ಗುಂಪಿನ ವಕ್ತಾರರು ಬ್ಯಾನರ್ಜಿಯನ್ನು ಕೊಂದಿರುವುದಾಗಿಎಂದು ಘೋಷಿಸಿದರು, ಏಕೆಂದರೆ ಆಕೆ ಭಾರತೀಯ ಗೂಢಚಾರಿಣಿ ಯಾಗಿರಬಹುದೆಂದು ಅನುಮಾನ ಬಂತು ಎನ್ನುವ ಕಾರಣ ನೀಡಲಾಯ್ತು, ಆದರೆ ಆಕೆ ತಾಲಿಬಾನಿಗಳ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದಳೆಂಬ ಕಾರಣಕ್ಕಾಗಿ ಕೊಲ್ಲಲಾಯಿತು ಎಂಬುದನ್ನು ಬಹುತೇಕ ಉಲ್ಲೇಖಗಳು ಹೇಳುತ್ತವೆ…!!
ತಾಲಿಬಾನಿ ಅತ್ಯಾಚಾರ್ – ದೇಶೇ ಒ ಬಿದೇಶೆ (ತಾಲಿಬಾನ್ ದೌರ್ಜನ್ಯಗಳು), ಮುಲ್ಲಾ ಒಮರ್, ತಾಲಿಬಾನ್ ಒ ಅಮಿ (ಮುಲ್ಲಾ ಒಮರ್, ತಾಲಿಬಾನ್ ಮತ್ತು ನಾನು) (2000), ಏಕ್ ಬೊರ್ನೊ ಮಿಥ್ಯಾ ನೋಯಿ ( ಒಂದು ಮಾತು ಸುಳ್ಳು ಅಲ್ಲ ) (2001) ಮತ್ತು ಸಭ್ಯತಾರ್ ಶೇಶ್ ಪುಣ್ಯಬಾನಿ (ನಾಗರಿಕತೆಯ ಸ್ವಾನ್ಸಾಂಗ್) ಪುಸ್ತಕಗಳನ್ನು ಇವರು ಬರೆದಿದ್ದಾರೆ…!