
ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ದೇಶದ ಪ್ರತಿಯೊಬ್ಬ ಪ್ರಜೆಯು ಆಲಸ್ಯವನ್ನು ಬಿಟ್ಟು ಮತಗಟ್ಟೆಗೆ ಹೋಗಿ ಮತ ಚಲಾಯಿಸಲೇಬೇಕು ನಮ್ಮ ಹಕ್ಕು ನಮ್ಮ ಕರ್ತವ್ಯ.
ಮತದಾನದ ಬಗ್ಗೆ ಸಾಕಷ್ಟು ಸಂಘ-ಸಂಸ್ಥೆಗಳು ಹಾಗೂ ಚುನಾವಣಾ ಆಯೋಗ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಇದೇ ರೀತಿ ತುಮಕೂರಿನಲ್ಲಿ ಒಂದು ವಿಶೇಷವಾಗಿ ಜಾಗ್ರತೆ ಮಾಡಿಸುವ ಕೆಲಸ ನಡೆಯುತ್ತಿದೆ.
ಮತಚಲಾಯಿಸಿದವರಿಗೆ ಕಾಫಿ ಟೀ ಉಚಿತ ..!
ಮತ ಚಲಾಯಿಸಿದವರಿಗೆ ಯುವ ಮತದಾರರಿಗೆ ಒಂದು ರೂಗೆ ಕಾಫಿ ಟೀ ತುಮಕೂರಿನ ಶೆಟ್ಟಿ ಟೀ ಸ್ಟಾಲ್ ನಲ್ಲಿ ಮಾಡುತ್ತಿದ್ದಾರೆ.
ಮತದಾನ ಮಾಡಿದ ಪ್ರತಿಯೊಬ್ಬರಿಗೂ ಕಾಫಿ ಟೀ ಗಳನ್ನ ಉಚಿತವಾಗಿ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.