
ಹೈದರಾಬಾದ್ – ತೆಲಂಗಾಣ ಸರ್ಕಾರ ಜುಲೈ ಎರಡನೇ ವಾರದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮುನ್ನವೇ 12 ಬಿಆರ್ಎಸ್ ಶಾಸಕರು ಕಾಂಗ್ರೆಸ್ಗೆ ಪಕ್ಷಾಂತರ ಮಾಡುವ ಸಾಧ್ಯತೆ ಇದೆ…!
ಲೋಕಸಭೆ ಚುನಾವಣೆಗೂ ಮುನ್ನ ಮೂವರು ಬಿಆರ್ಎಸ್ ಶಾಸಕರನ್ನು ಸೇರಿಸಿಕೊಂಡ ಆಡಳಿತಾರೂಢ ಕಾಂಗ್ರೆಸ್, ಗುಲಾಬಿ ಪಕ್ಷದ ಇನ್ನೂ ಕೆಲವು ಶಾಸಕರ ಜತೆ ಚರ್ಚೆ ನಡೆಸಿದೆ…!!
ಏತನ್ಮಧ್ಯೆ, ಪಕ್ಷದ ವರಿಷ್ಠ ಕೆ ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಪ್ರಮುಖ ಬಿಆರ್ಎಸ್ ನಾಯಕರು ತಮ್ಮ ಶಾಸಕರ ನಿವಾಸಗಳಿಗೆ ಭೇಟಿ ನೀಡಿ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ…!
ನಾಲ್ವರು ಶಾಸಕರೊಂದಿಗೆ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಬಿಆರ್ಎಸ್ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ…!!
ಆದರೆ ಇದ್ಯಾವುದಕ್ಕೂ ಬಿ ಆರ್ ಎಸ್ ಶಾಸಕರು ಕ್ಯಾರೇ ಎನ್ನುತ್ತಿಲ್ಲ ಎನ್ನಲಾಗಿದೆ…!