
ಬೆಂಗಳೂರು: ಲೋಕಸಭಾ ಚುನಾವಣೆ ಆರು ಹಂತಗಳು ಮುಗಿದಿದ್ದು ನಾಳೆ ಕೊನೆಯ ಹಂತ ಅಂದರೆ 7ನೇ ಹಂತ ನಡೆಯುತ್ತಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುವ ವಾರಣಾಸಿ ಕ್ಷೇತ್ರ ಸೇರಿ ಇಂದು 7 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯುತ್ತಿದೆ, 904 ಒಟ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ಘೋಷಣೆಯಾಗಿ ಮತದಾನ ಶುರು ಆದಾಗಿನಿಂದ ಸಟ್ಕಾ ಬಜಾರ್ ದೇಶ ವ್ಯಾಪ್ತಿ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ, ಈ ಸೆಟ್ ಕಾ ಬಜಾರಿನ ಲೆಕ್ಕಾಚಾರಗಳು ರಾಜಕೀಯ ಪಕ್ಷಗಳಿಗೆ ಒಂದು ರೀತಿಯ ಗೊಂದಲ ಉಂಟು ಮಾಡಿದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಜೆಡಿಎಸ್ ಮೂರೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು 23 ,24 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇಟ್ಟಿದ್ದ ಬಿಜೆಪಿ ನಾಯಕರಿಗೆ ಸೆಟ್ಕ ಬಜಾರ್ ಶಾಕ್ ಕೊಟ್ಟಿದೆ.
ಸಟ್ಕಾ ಬಜಾರ್ ನ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ 18ರಿಂದ 20 ಸ್ಥಾನ ಗೆಲ್ಲಲಿದೆ ಎಂದು ಸಟ್ಕಾ ಬಜಾರ್ ಹೇಳುತ್ತಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸಟ್ಕಾ ಬಜಾರ್ನ ನಂಬರ್ ಹಾಗೂ ಲೆಕ್ಕಚಾರ ಕರ್ನಾಟಕದಲ್ಲಿ ನಿಜವಾಗಿತ್ತು ಸಟ್ಕಾ ಬಜಾರ್ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ 137 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು ಆದರೆ ಕಾಂಗ್ರೆಸ್ 135+1 ಸ್ಥಾನಗಳು ಪಡೆದಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಇಸ್ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆ ಸಂಚಲನ ಮೂಡಿಸಿದ್ದು, ಬೆಟ್ಟಿಂಗ್ ಬಜಾರ್ನಲ್ಲಿ ಕೂಡ ಇದುವೇ ಕೇಂದ್ರ ಬಿಂದುವಾಗಿರುವುದು ವಿಶೇಷ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಎನ್ ಡಿಎ ಮೈತ್ರಿಕೂಟ ನಾನೂರು ಸ್ಥಾನಗಳನ್ನು ಪಡೆಯಲಿದೆ ಎಂದು ಸಟ್ಟಾ ಬಜಾರ್ ಹೇಳಿದೆ.
ಸಟ್ಕ ಬಜಾರ್ ನ ಈ ಲೆಕ್ಕಚಾರವೇ ಈಗ ರಾಜಕೀಯ ನಾಯಕರಿಗೆ ಒಂದು ರೀತಿಯ ಗೊಂದಲ ಸೃಷ್ಟಿ ಮಾಡಿದೆ.
ಚುನಾವಣೆ ಪ್ರಾರಂಭ ಆದಾಗಿನಿಂದ ದಿನದಿಂದ ದಿನಕ್ಕೆ ಸಟ್ಕ ಬಜಾರ್ ನ ನಂಬರ್ಸ್ ಗಳು ಬದಲಾಗುತ್ತಾ ಇದೆ.
ಈ ಸಟ್ಕಾಬಜಾರ್ ಅಂದ್ರೆ ಏನು..?
ಸಟ್ಕಾ ಬಜಾರ್ ಅಂದರೆ ಮಟ್ಕಾ ದ ರೀತಿ ಇದು ಕೂಡ ಕಾನೂನು ಬಾಹಿರ ಚಟುವಟಿಕೆ ಇದರ ನಂಬರ್ಸ್ ಗಳ ಮೇಲೆ ಹಣವನ್ನು ಕಟ್ಟುತ್ತಾರೆ ಅದೇ ನಂಬರ್ ಬಂದರೆ ಒಂದು ಡಬಲ್ ರೀತಿ ಹಣವನ್ನು ವಾಪಸ್ ಕೊಡುತ್ತಾರೆ ಎಂದು ಹೇಳಲಾಗುತ್ತದೆ.
ಆದರೆ ಇದು ಕಾನೂನು ಬಾಹಿರ ಚಟುವಟಿಕೆ ಆದಷ್ಟು ಇಂಥ ಚಟುವಟಿಕೆಗಳ ಮೇಲೆ ಸರಕಾರ ಕಡಿವಾಣ ಹಾಕಬೇಕಾಗಿದೆ.
.