
ಉಡುಪಿ : ಉಡುಪಿ ಜಿಲ್ಲಾಧ್ಯಂತ ಕಳೆದ ಒಂದು ವರಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ, ಅಧಿಕವಾಗಿ ಮಳೆ ಆಗುತ್ತಿರುವ ಕಾರಣದಿಂದ ಜುಲೈ 06 ರಂದು , ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಪ್ರಕಾರ ಕಲಂ 26,30,34 ರಡಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.!
ಆದರೆ ಜುಲೈ 8ರಂದು ಜಿಲ್ಲಾಡಳಿತ ಯಾವುದೇ ರಜೆ ಘೋಷಿಸಿರುವುದಿಲ್ಲ , ಸಾಮಾಜಿಕ ಜಾಲತಾಣದಲ್ಲಿ,ಕುಂದಾಪುರ ಬ್ರಹ್ಮವಾರ ತಾಲೂಕಿನ ಶಾಲಾ ಮತ್ತು ಪಿಯು ಕಾಲೇಜುಗಳಿಗೆ
ರಜೆ ನೀಡಲಾಗಿದೆ ಎಂದು ನಕಲಿ ಪೋಸ್ಟ್ ಒಂದು ಭಾನುವಾರ ಹರಿದಾಡುತ್ತಿದೆ..!
ಇದುವರೆಗೆ ಜಿಲ್ಲಾಡಳಿತ ಯಾವುದೇ ರಜೆ ಘೋಷಣೆ ಮಾಡಿಲ್ಲ.
ಯಾರೋ ದುಷ್ಕರ್ಮಿಗಳು ನಕಲಿ ಪೋಸ್ಟ್ ರಚಿಸಿ ಈ ಕೃತ್ಯವನ್ನು ಮಾಡಿದ್ದಾರೆ , ಸಾರ್ವಜನಿಕರು ಗೊಂದಲಕ್ಕೀಡಾಗುವುದು ಬೇಡ.!
ಜುಲೈ 08 ರಂದು ಜಿಲ್ಲೆಯ ಯಾವುದೇ ತಾಲೂಕಿಗೆ ಯಾವುದೇ ರಜೆ ಘೋಷಿಸಿ ಆದೇಶ ಮಾಡಿರುವುದಿಲ್ಲ ಎಂದು ಉಡುಪಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.!
ನಕಲಿ ಸುತ್ತ ಒಲೆಯನ್ನು ಗಮನಿಸಿದ ಉಡುಪಿ ಜಿಲ್ಲಾಡಳಿತ, ಕುಂದಾಪುರದ ಸಹಾಯಕ ಆಯುಕ್ತರು ಜುಲೈ 8ರಂದು ಯಾವುದೇ ರಜೆ ಘೋಷಿಸಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಸಾರ್ವಜನಿಕರು ಗೊಂದಲಕ್ಕೀಡಾಗುವುದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.!
ಅಕಸ್ಮಾತ್ ಜಿಲ್ಲಾಡಳಿತ ರಜೆ ಘೋಷಿಸುವುದಾದರೆ ಅಧಿಕೃತ ಆದೇಶವನ್ನು ಹೊರಡಿಸುತ್ತದೆ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ ನಕಲಿ ಸುದ್ದಿಗಳಿಗೆ ಕಿವಿಗೊಡಬೇಡಿ..!