
ಲಕ್ನೋ : ಉತ್ತರ ಪ್ರದೇಶ ಕೆಲವು ವರ್ಷಗಳ ಹಿಂದೆ ಗುಂಡರಾಜ್ಯ ಎಂದು ಕರೆಯಲಾಗುತ್ತಿತ್ತು ಇಂದು ಯೋಗಿ ರಾಜ್ಯವೆಂದು ಕರೆಯುತ್ತಾರೆ, ಮಾಫಿಯಾ ಡಾನ್ಗಳಿಗೆ ಮಣ್ಣುಮುಕ್ಕಿಸಿ ಪಾತಕಿಗಳಿಗೆ ಗುಂಡಿನ ರುಚಿ ತೋರಿಸಿದ ಯೋಗಿ ಮತ್ತೊಂದು ಮಹತ್ವದ ಕಾರ್ಯವನ್ನು ಕೂಡ ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಅದು ಏನೆಂದರೆ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನ ನೆಲಸಮ ಮಾಡೋದು ಅದಕ್ಕಾಗಿ ಯೋಗಿಯನ್ನು ಬುಲ್ಡೋಜರ್ ಬಾಬಾ ಅಂತ ಕರೆಯುತ್ತಾರೆ.
ಆದರೆ ಇದೀಗ ಉತ್ತರಪ್ರದೇಶದ ರಾಜಧಾನಿ ಲಕ್ನೋದ ಅಕ್ಬರ್ ನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿ, ಮದರಸಾ ಮತ್ತು ದೇವಸ್ಥಾನವನ್ನು ತಡರಾತ್ರಿ ನೆಲಕ್ ಉರುಳಿಸಿದ್ದಾರೆ. ಅಂದ ಹಾಗೆ ಈ ಅಕ್ರಮ ಕಟ್ಟಡಗಳು ಎರಡು ಮಸೀದಿಗಳು ಮತ್ತು ಮದ್ರಸಾವನ್ನು ಒಳಗೊಂಡಿತ್ತು. ಇದಕ್ಕೂ ಮೊದಲು ದೇವಸ್ಥಾನವನ್ನೂ ನೆಲಸಮಗೊಳಿಸಲಾಗಿತ್ತು. ಆಡಳಿತ ಮಂಡಳಿಯು ತಡರಾತ್ರಿಯಲ್ಲಿ ಬುಲ್ಡೋಜರ್ಗಳಿಂದ ಮಸೀದಿ ಮತ್ತು ಮದರಸಾವನ್ನು ನೆಲಸಮಗೊಳಿಸಿದೆ. ಕಾರ್ಯಾಚರಣೆ ನಡೆಸುವುದಕ್ಕೂ ಮೊದಲು ಮುನ್ನೆಚ್ಚರಿಕಾ ಕ್ರಮವಾಗಿ ಮಹಾನಗರದ ಮೂಲೆ ಮೂಲೆಯಲ್ಲಿ ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದ್ದು, ಅಕ್ಬರ್ ನಗರಕ್ಕೆ ಯಾರೂ ಬರದಂತೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.
ಯಾವುದೇ ಅವಘಡಗಳು ನಡೆಯದಂತೆ ಕಟ್ಟೆಚ್ಚರ ವನವಹಿಸಿ ಈ ಕಾರ್ಯಾಚರಣೆ ವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಕುಕ್ರೈಲ್ ನದಿ ಪಾತ್ರದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್ಗಳನ್ನು ಬಳಸಲಾಗಿದೆ ಎಂದು ಸ್ಥಳೀಯಾಡಳಿತ ಹೇಳಿದೆ.
ಕುಕ್ರೈಲ್ ನದಿಯಲ್ಲಿ ನಿರ್ಮಾಣವಾಗಲಿರುವ ಯೋಜನೆ
ಸಿಎಂ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾಗಿದೆ. , ಕುಕ್ರೈಲ್ ನದಿಯ ಪಕ್ಕದಲ್ಲಿರುವ ಸರ್ಕಾರಿ ಭೂಮಿಯಲ್ಲಿ ಅಕ್ಬರ್ನಗರವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ, ಇದರಿಂದಾಗಿ ನದಿಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಅಕ್ರಮ ನಿರ್ಮಾಣವನ್ನು ತೆಗೆದುಹಾಕಲು ಸರ್ಕಾರ ಅಭಿಯಾನವನ್ನು ಪ್ರಾರಂಭಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲಖನೌ ಅಭಿವೃದ್ಧಿ ಪ್ರಾಧಿಕಾರದ ವಿಸಿ ಇಂದ್ರಮಣಿ ತ್ರಿಪಾಠಿ ಹೇಳಿದ್ದರು. 10 ಕಿಲೋಮೀಟರ್ ದೂರದ ಬಸಂತ್ ಕುಂಜ್ ನ ಅಕ್ಬರ್ ನಗರದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಯೋಗಿ ಸರ್ಕಾರ ಮನೆಗಳನ್ನು ನೀಡಿದೆ, ಆದರೆ ಇಲ್ಲಿ ವಾಸಿಸಲು ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲ, ಶಾಲೆ ಸೇರಿದಂತೆ ತಿನ್ನಲು ಏನೂ ಇಲ್ಲ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.