
ಬರೇಲಿ (ಉತ್ತರ ಪ್ರದೇಶ) – ವಿದ್ಯಾರ್ಥಿಯೋರ್ವ ಉದ್ದನೆಯ ಗಡ್ಡವನ್ನು ಬಿಟ್ಟುಕೊಂಡು ಕಾಲೇಜಿಗೆ ಬಂದಿದ್ದಕ್ಕೆ ಅವನನ್ನು ತರಗತಿಯಿಂದ ಕಾಲಜಿನ ಪ್ರಾಂಶುಪಾಲರು ಹೊರಹಾಕಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ…!
ಪ್ರಾಂಶುಪಾಲರ ಈ ನಡೆಯಿಂದ ಕೋಪಗೊಂಡ ವಿದ್ಯಾರ್ಥಿಯ ಹಿರಿಯ ಸಹೋದರ ಜಾತಿ ಆಧಾರದ ಮೇಲೆ ನನ್ನ ತಮ್ಮನನ್ನು ಪ್ರಾಂಶುಪಾಲರು ನಿಂದಿಸಿದ್ದಾರೆ ಎಂದು ಪ್ರಾಂಶುಪಾಲರ ವಿರುದ್ಧ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್ಗೆ ದೂರು ಸಲ್ಲಿಸಿದ್ದಾರೆ…!!
ಆಜಾದ್ ನೌರಂಗ್ ಇಂಟರ್ ಕಾಲೇಜ್ ಸೈಂಥಲ್ ನಲ್ಲಿ ವಿದ್ಯಾರ್ಥಿ ಫರ್ಮಾನ್ ಅಲಿ ಎಂಬಾತ ಓದುತ್ತಿದ್ದು, ಕೆಲ ದಿನಗಳ ಹಿಂದೆ ಫರ್ಮಾನ್ ಅಲಿಗೆ ಗಡ್ಡ ಬೋಳಿಸಿಕೊಂಡು ಬರುವಂತೆ ಪ್ರಾಂಶುಪಾಲರು ಹೇಳಿದ್ದರು…!
ಆದರೆ ಆತ ಗಡ್ಡ ಬೋಳಿಸಿಕೊಂಡು ಬಾರದ ಕಾರಣ ಎಂಬ ವಿದ್ಯಾರ್ಥಿ ಫರ್ಮಾನ್ ಅಲಿಗೆ ಕಾಲೇಜಿಗೆ ಬರದಂತೆ ಪ್ರಾಂಶುಪಾಲರು ಹೇಳಿದರು…!!
ಗಡ್ಡ ಬಿಟ್ಟು ಬರಲು ಇದು ಮದರಸಾ ಅಲ್ಲ,ಕಾಲೇಜು, ಯಾವುದೇ ಪಂಗಡದ ವಿದ್ಯಾರ್ಥಿಯಾಗಿದ್ದರೂ ಗಡ್ಡ ಬೆಳೆಸಿಕೊಂಡು ಕಾಲೇಜಿಗೆ ಬರಬಾರದು ಎಂದು ಸರ್ಕಾರಿ ಆದೇಶವಿದೆ” ಎಂದು ಪ್ರಾಂಶುಪಾಲರು ಹೇಳಿದ್ದರು…!!
ಇದರಿಂದ ಕೋಪಗೊಂಡ ವಿದ್ಯಾರ್ಥಿಯ ಸಹೋದರ “ಇಂಟರ್ ಕಾಲೇಜಿನ ಪ್ರಾಂಶುಪಾಲ ಹುದ್ದೆಯಲ್ಲಿರುವ ರಾಮ್ ಅಚಲ್ ಖಾರ್ವಾರ್ ಅವರ ಈ ನಡವಳಿಕೆ ತಾರತಮ್ಯ ಮತ್ತು ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುತ್ತದೆ” ಎಂದು ಇಡೀ ವಿಷಯದ ಬಗ್ಗೆ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್ನಲ್ಲಿ ದೂರು ಸಲ್ಲಿಸಿದ್ದಾರೆ…!