
ಮಾರುಕಟ್ಟೆಯಲ್ಲಿ ಟೊಮೆಟೋ ದರ ಮತ್ತೆ ಹೆಚ್ಚಳ ಕಂಡಿದ್ದು, ಗುರುವಾರ ಕೆಜಿಗೆ ಗರಿಷ್ಠ ₹ 80 ನಂತೆ ಮಾರಾಟವಾಗಿದೆ…!
ಮಳೆ ಹಾಗೂ ರೋಗಬಾಧೆ ಕಾರಣದಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆ ಗಣನೀಯವಾಗಿ ಕುಸಿದಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ…!!
ಕಳೆದ ಒಂದು ವಾರದ ಹಿಂದೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಪ್ರತಿ ಕೆಜಿಗೆ 40 ರೂಪಾಯಿ ಇತ್ತು…!
ಆದರೆ ಈಗ ರೂಪಾಯಿ 80 ಕ್ಕೆ ಏರಿಕೆಯಾಗಿದೆ…!!
ಶೀಘ್ರದಲ್ಲೇ ಟೊಮೆಟೋ ದರ ಕೆಜಿಗೆ 100 – 120 ರೂಪಾಯಿ ಆದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ವರ್ತಕರು ಹೇಳಿದ್ದಾರೆ…!ದಿನಬಳಕೆಯ ಟೊಮೆಟೋ ಬೆಲೆಯೇರಿಕೆ ಗ್ರಾಹಕರ ಜೇಬನ್ನು ಸುಡುತ್ತಿದೆ…!!