
ಉತ್ತರ ಪ್ರದೇಶ : ಜುಲೈ 31, ಬುಧವಾರದಂದು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು ಕೆಲವು ಭಾಗದಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ ಹಾಗೂ ಇನ್ನು ಅನೇಕ ಕಡೆಗಳಲ್ಲಿ ಮನೆಗಳಿಗೆ ಹಾಗೂ ಅಂಗಡಿ ಮಳಿಗೆ ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಆದರೆ ಇಂದು ಸುರಿದ ಭಾಮಳೆಯಿಂದ ಉತ್ತರ ಪ್ರದೇಶದ ಲಕ್ನೋದಲ್ಲಿ ಪ್ರವಾಹವನ್ನು ಉಂಟುಮಾಡಿತು. ಉತ್ತರಪ್ರದೇಶದ ವಿಧಾನಸಭೆಯ ಒಳಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ ,ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು ಮತ್ತು ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಂಚರಿಸಿದವು. ನೆಲ ಮಾಳಿಗೆ ಅಂತಸ್ತಿನ ಕೊಟ್ಟಡಿಗಳಿಗೆ ನೀರು ಮಳೆ ನೀರು ನುಗ್ಗಿ ಅಗತ್ಯ ವಸ್ತುಗಳನ್ನು ನಿರುಪಾಲಾಗಿದೆ,
ಮಳೆಯಿಂದ ನೀರು ನುಗ್ಗಿದ ಕಾರಣ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೆ ಬಾಗಿಲಿನ ಗೇಟಿನಿಂದ ಹೊರಗೆ ಬರಬೇಕಾಯಿತು .
ಉತ್ತರ ಪ್ರದೇಶದ ವಿಧಾನಸಭೆಯಗೆ ನುಗ್ಗಿದ ನೀರನ್ನು ಸಿಬ್ಬಂದಿಗಳು ಹೊರಹಾಕುತ್ತಿರುವ ವಿಡಿಯೋ ಈಗ ಬಾರಿ ವೈರಲ್ ಆಗುತ್ತಿದೆ ಇಂತಹ ಪ್ರವಾಹವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಸ್ಥಳದಲ್ಲಿದ್ದ ಸಿಬ್ಬಂದಿ ಟೀಕಿಸಿದರು. ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿರುವುದು ಕಂಡುಬಂದಿದ್ದು, ಮಹಾನಗರ ಪಾಲಿಕೆ ಸೇರಿದಂತೆ ಹಲವು ಕಚೇರಿಗಳು ಇದೇ ರೀತಿ ಜಲಾವೃತಗೊಂಡಿವೆ
ಬಜೆಟ್ ಹಂಚಿಕೆಯನ್ನು ಹೆಚ್ಚಿಸಲು ಕರೆ
ವಿಧಾನಸಭೆಯ ಪ್ರವಾಹವು ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಸಿಂಗ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶ ವಿಧಾನಸಭೆಗೆ ಹೆಚ್ಚಿನ ಬಜೆಟ್ ಹಂಚಿಕೆಯ ಅಗತ್ಯ ಇದೆಯೆಂದು ಹೇಳಿದರು.
ಒಂದೇ ಒಂದು ಭಾರಿ ಮಳೆಗೆ ಇಂತಹ ಹಾನಿ ಸಂಭವಿಸಿದರೆ, ರಾಜ್ಯದ ಉಳಿದ ಭಾಗಗಳು ಇದೇ ರೀತಿಯ ಘಟನೆಗಳಿಗೆ ಗುರಿಯಾಗುತ್ತವೆ ಎಂದು ಅವರು ಸಲಹೆ ನೀಡಿದರು.