
ಶನಿವಾರ ನಡೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತಂಡವು ತನ್ನ ಅದ್ಭುತ ಆಟದ ಮೂಲಕ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲುಣಿಸಿದೆ…!
ಇದರ ಬೆನ್ನಲ್ಲೇ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ…!!
ಏತನ್ಮಧ್ಯೆ, ಟೀಂ ಇಂಡಿಯಾದ ಇಬ್ಬರು ಸ್ಟಾರ್ ಆಟಗಾರರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ…!
ಮೊದಲು ವಿರಾಟ್ ಕೊಹ್ಲಿ ಇದು ತಮ್ಮ ಕೊನೆಯ ಟಿ20 ಕ್ರಿಕೆಟ್ ಪಂದ್ಯ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟರೆ, ಸ್ವಲ್ಪ ಸಮಯದ ನಂತರ ನಾಯಕ ರೋಹಿತ್ ಶರ್ಮಾ ಕೂಡ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು…!!
ಐಸಿಸಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿಯೂ ಈ ಮಾಹಿತಿಯನ್ನು ನೀಡಿದೆ…!
ವಿರಾಟ್ ಕೊಹ್ಲಿ ಬಳಿಕ ನಾಯಕ ರೋಹಿತ್ ಶರ್ಮಾ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ ಎಂದು ಐಸಿಸಿ ಬರೆದುಕೊಂಡಿದೆ…!!