
ಕೋಲ್ಕತಾ: ಕೆಲವು ದಿನಗಳ ಹಿಂದೆ ಅಷ್ಟೇ ಧಾರ್ಮಿಕ ಸಭೆಗಳಲ್ಲಿ ಮತಾಂತರಕ್ಕೆ ತಡೆ ಒಡ್ಡದಿದ್ದರೆ ಮುಂದೊಂದು ದಿನ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವ ಕಾಲ ದೂರವೇನಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ಪಡಿಸಿತ್ತು…!
ಅರ್ಜಿದಾರ ಕೈಲಾಶ್ ಮತ್ತು ಉತ್ತರ ಪ್ರದೇಶದ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಈ ರೀತಿ ಕಳವಳ ವ್ಯಕ್ತಪಡಿಸಿದರು…!!
ಆದರೆ ಈಗ ಕೋಲ್ಕತಾ ಮಹಾನಗರ ಪಾಲಿಕೆ ಮೇಯರ್ ಫಿರ್ಹಾದ್ ಹಕೀಂ, ಅನ್ಯಧರ್ಮೀಯರನ್ನೆಲ್ಲಾ ಇಸ್ಲಾಂಗೆ ಮತಾಂತರ ಮಾಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ..!
ಫಿರ್ಹಾದ್ ಹಕೀಮ್ ಅವರ ಹೇಳಿಕೆಗಳ ಕುರಿತು ಪಶ್ಚಿಮ ಬಂಗಾಳದಲ್ಲಿ ವಿವಾದ ಭುಗಿಲೆದ್ದಿದೆ.!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ಮತ್ತು ಟಿಎಂಸಿ ನಾಯಕ ಹಕೀಂ ಜುಲೈ 3 ರಂದು ನಡೆದ ‘ಅಖಿಲ ಭಾರತ ಕುರಾನ್ ಸ್ಪರ್ಧೆ’ ಕಾರ್ಯಕ್ರಮದ ವೇಳೆ ಮಾತನಾಡಿ ‘ಇಸ್ಲಾಂ ಧರ್ಮದಲ್ಲಿ ಜನಿಸದವರು ಅದೃಷ್ಟಹೀನರು. ಅವರನ್ನು ನಾವು ಇಸ್ಲಾಂಗೆ ಕರೆತರಬೇಕು’ ಎಂದು ಬಹಿರಂಗವಾಗಿ ಮತಾಂತರಕ್ಕೆ ಕರೆ ನೀಡಿದ್ದಾರೆ.
ಫಿರ್ಹಾದ್ ಹಕೀಂ ಹೇಳಿಕೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಿರ್ಹಾದ್ ಹಕೀಮ್ ವಿರುದ್ಧ ಸ್ವಯಂ ಪ್ರೇರಿತ ಕಾನೂನು ಕ್ರಮ ಜರುಗಿಸಬೇಕು . ಅವರ ಹೇಳಿಕೆಗಳು ಸಂವಿಧಾನದ ಬುನಾದಿ ಬುಡಮೇಲು ಮಾಡಿದೆ. ಈ ಹೇಳಿಕೆಗಳು ರಾಜ್ಯದಲ್ಲಿ ಅಡಗಿರುವ ಮೂಲಭೂತವಾದಿ ಶಕ್ತಿಗಳಿಗೆ ಧೈರ್ಯ ತುಂಬುತ್ತದೆ. ಬೇರೆ ಯಾವುದೇ ರಾಜ್ಯವಾಗಿದ್ದರೆ ಅವರನ್ನು ಬಂಧಿಸಲಾಗುತ್ತಿತ್ತು ಎಂದು ರಾಜ್ಯ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಶಮಿಕ್ ಭಟ್ಟಾಚಾರ್ಯ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಕೀಮ್ ಅವರು ಹಿಂದೆ ಕೋಲ್ಕತ್ತಾದ ಪ್ರದೇಶವನ್ನು “ಮಿನಿ ಪಾಕಿಸ್ತಾನ” ಎಂದು ಬಣ್ಣಿಸಿದ್ದಾರೆ ಎಂದು ಶ್ರೀ ಭಟ್ಟಾಚಾರ್ಯ ಹೇಳಿದರು.
ಫಿರ್ಹಾದ್ ಹಕೀಂ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟಿಎಂಸಿಯ ತುಷ್ಟೀಕರಣ ರಾಜಕೀಯವನ್ನು ಟೀಕಿಸಿದ್ದಾರೆ. ‘ಟಿಎಂಸಿ ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿದೆ ಎಂಬುದು ಜಗಜ್ಜಾಹಿರ. ಸತತ ಚುನಾವಣಾ ಜಯಗಳು ಪಕ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ಧೈರ್ಯಶಾಲಿ ಮತ್ತು ಅಹಂಕಾರಿಯನ್ನಾಗಿ ಮಾಡುತ್ತಿದೆ. ಷರಿಯಾ ಕಾನೂನಿನಂತೆ ಮಹಿಳೆಯೊಬ್ಬಳ ಥಳಿತಕ್ಕೆ ಹಮಿದುರ್ ರಹಮಾನ್ ನೀಡಿದ ಸಮರ್ಥನೆ ಟಿಎಂಸಿಯ ಕಾರ್ಯಸೂಚಿಯನ್ನು ತೋರಿಸುತ್ತಿವೆ. ಹೀಗೇ ಮುಂದುವರಿದರೆ ದೀದಿಯ ಸ್ಫೂರ್ತಿಯಿಂದ ಬಂಗಾಳ ಮುಸ್ಲಿಂ ರಾಜ್ಯವಾಗುವ ದಿನ ದೂರವಿಲ್ಲ’ ಎಂದು ಆಡಳಿತ ಪಕ್ಷ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.