
ಪ್ರಮಾಣವಚನ ವೀಕ್ಷಣೆಗೆಂದು ದೆಹಲಿಗೆ ತೆರಳಿದ ಧ್ಯೇಯನಿಷ್ಠ ಕೇರಳದ ಬಿಜೆಪಿ ಕಾರ್ಯಕರ್ತ ಜಾರ್ಜ್ ಕುರಿಯನ್ ಗೆ ಮೋದಿ ಕೊಟ್ಟ ಸರ್ಪ್ರೈಸ್ ಗಿಪ್ಟ್ – ಸಚಿವ ಗಿರಿ…!
ಅರೆ ಹೀಗೂ ಉಂಟೇ…? ಎಂದು ಕೇಳಬೇಕಾದ ಅಚ್ಚರಿಯ ಸಂಗತಿ ಇದು…!
ಜತೆಗೆ ತಳಮಟ್ಟದ ನಿಷ್ಠಾವಂತ ಧ್ಯೇಯನಿಷ್ಠ ಕಾರ್ಯಕರ್ತನಿಗೂ ಬಿಜೆಪಿಯಲ್ಲಿ ಮನ್ನಣೆ ಇದೆ ಎಂಬುದರ ಸಾಕ್ಷಿಯಿದು…!!
ಇಷ್ಟಕ್ಕೂ ಮೋದಿ 3.0 ಸಂಪುಟದಲ್ಲಿ ಯಾವ ಸುಳಿವೂ ಸಹ ಇಲ್ಲದೆ ಸಚಿವ ಸ್ಥಾನ ಪಡೆದ ಕೇರಳದ ಈ ಜಾರ್ಜ್ ಕುರಿಯನ್ ಯಾರು…???
ಜಾರ್ಜ್ ಕುರಿಯನ್ ಇಡೀ ದೇಶದಲ್ಲಿ ಹೆಚ್ಚಿನವರಿಗೆ ಗೊತ್ತಿರದ ಹೆಸರಿದು…!
ಈಗ ಬಿಜೆಪಿ, ಬಿಜೆಪಿ ಎಂದು ಕೂಗಾಡಿ, ರೇಗಾಡುವವರೆಲ್ಲ ಅರಿಯದ ಕತೆ ಅವರದ್ದು…!!
ಜಾರ್ಜ್ ಕುರಿಯನ್ ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯವರು…!
ಬಿಜೆಪಿ ಜನಿಸುವ ಮುನ್ನವೇ ಜನಸಂಘ, ಜನತಾ ಪರಿವಾರದಲ್ಲಿ ವಿದ್ಯಾರ್ಥಿ ಘಟಕದ ನಾಯಕರಾದವರು…!!
ಕೇರಳದಲ್ಲಿ ಕ್ರೈಸ್ತ ಸಮಾಜದಿಂದ ಯಾರೊಬ್ಬರೂ ಬಿಜೆಪಿ ಯತ್ತ ಸುಳಿಯದ ಆ ದಿನಗಳಲ್ಲಿ, ಬಿಜೆಪಿಯ ಬಾವುಟ ಕಟ್ಟಿ ಪಕ್ಷ ಸಂಘಟನೆ ಮಾಡಿದ ವ್ಯಕ್ತಿ ಇವರು…!
ಬಿಜೆಪಿ ಎಂದರೆ ಅಪ್ಪಟ ಬ್ರಾಹ್ಮಣವಾದಿ ಹಾಗೂ ಹಿಂದುತ್ವವಾದಿ ಪಕ್ಷವೆಂದೇ ಬಿಂಬಿತವಾಗಿದ್ದ ಆ ಕಾಲಘಟ್ಟದಲ್ಲಿ ಕೊಟ್ಟಾಯಂ ನಂತಹ ಕ್ರೈಸ್ತ ಬಾಹುಳ್ಯದ ಪ್ರದೇಶದಿಂದೊಬ್ಬ ಕ್ರೈಸ್ತ ತರುಣ ಸಂಘ ಪರಿವಾರದ ಸಹವರ್ತಿ ಆಗುತ್ತಾನೆಂದರೆ…??
ಅಂದಿನಿಂದಲೇ ಅವರು ಎದುರಿಸಿದ ಸಂಕಷ್ಟಗಳ ಸವಾಲು ಒಂದರಡೇನಲ್ಲ…!
ಅಂದು ಬಿಜೆಪಿ ಬಾವುಟ ಹಿಡಿಯಲು ಕೇರಳದಲ್ಲಿ ಹತ್ತು ಕಾರ್ಯಕರ್ತರು ಸಹ ಇರಲಿಲ್ಲ…!!
ಬಿಜೆಪಿ ಎಂದರೆ ಸಾಕು ಅಟ್ಟಾಡಿಸಿ ಹೊಡೆಯುವ , ಉಸಿರೆತ್ತಲು ಬಿಡದ ರಾಜಕೀಯ ಕ್ರೌರ್ಯದ, ದಬ್ಬಾಳಿಕೆಯ ದಿನಗಳವು…!
ಈ ಪಕ್ಷ ಭವಿಷ್ಯದಲ್ಲಿ ಭಾರತವನ್ನಾಳಲಿದೆ ಎಂಬ ಯಾವ ನಿರೀಕ್ಷೆಯ ಕನಸು ಸಹ ಯಾರಿಗೂ ಇರಲಿಲ್ಲ...!!
ಆದರೆ ಆದರ್ಶವೊಂದಿತ್ತು, ಅದನ್ನು ಒಪ್ಪಿ, ಅಪ್ಪಿದ ಕೆಲವೇ ಕೆಲವೇ ಕೆಲವು ಮಂದಿಯಲ್ಲಿ ಜಾರ್ಜ್ ಕುರಿಯನ್ ಸಹ ಒಬ್ಬರು…!
ಅವರು ಸಂಘ ನಿಷ್ಠೆಯವರು,
ಅಧಿಕಾರ, ಹುದ್ದೆ, ಜನಪ್ರಿಯತೆ, ವ್ಯಕ್ತಿಪ್ರಚಾರ ಮುಖ್ಯವಲ್ಲ, ರಾಷ್ಟ್ರ ಜಾಗೃತಿಗೆ ತನ್ನ ಕೊಡುಗೆ ಮುಖ್ಯವೆಂದು ಪರಿವಾರ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ದುಡಿದವರು…!!
ಅವರ ನಿಷ್ಠಾವಂತ ಕಾಯಕ ಪಕ್ಷಕ್ಕೂ, ಸಂಘ ಪರಿವಾರಕ್ಕೂ ಅವರನ್ನ ಅತ್ಯಾಪ್ತರನ್ನಾಗಿಸಿದೆ…!
ಪಕ್ಷದೊಳಗಿನ ಗುಂಪುಗಾರಿಕೆಗೆ ಸಿಲುಕದೇ, ಯಾರದ್ದೋ ಹಿಂಬಾಲಕನಾಗದೇ ಆದರ್ಶ ಪಥದಲ್ಲಿ ನಡೆದ ಅವರು ಯುವ ಮೋರ್ಛಾ ರಾಷ್ಠ್ರೀಯ ನಾಯಕನಾದವರು…!!
ಅಲ್ಪ ಸಂಖ್ಯಾತ ಮೋರ್ಛಾದ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದವರು…!
ದೇಶದಲ್ಲೇ ಬಿಜೆಪಿ ಪಾಲಿಗೆ ಅಲ್ಪ ಸಂಖ್ಯಾತರ ಮುಖವಾಗಿದ್ದರು…!!
ಪ್ರಸ್ತುತ ಕೇರಳದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ವೃತ್ತಿಯಲ್ಲಿ ವಕೀಲರು, ರಾಷ್ಟ್ರೀಯ ನಾಯಕರು ಕೇರಳಕ್ಕೆ ಯಾರೇ ಬರಲಿ, ಅವರ ಹಿಂದೀ ಭಾಷಣಗಳನ್ನು ಮಲಯಾಳಕ್ಕೆ ಭಾಷಾಂತರಿಸುತ್ತಿದ್ದ ಕುರಿಯನ್ ಪಕ್ಷದ ರಾಷ್ಟ್ರೀಯ ಮುಖಂಡರ ಮನಗೆದ್ದವರು…!
ಹಿರಿಯ ನಾಯಕ ಒ ರಾಜಗೋಪಾಲ್ ಅವರ ಕೈ ಹಿಡಿದು ನಡೆದು, ಅವರು ಸಚಿವರಾಗುತ್ತಿದಂತೆಯೇ ಅವರ ಆಪ್ತ ಕಾರ್ಯದರ್ಶಿಯಾಗಿ ಸಂಸತ್ತಿನ ಅನುಭವ ಗಳಿಸಿಕೊಂಡ ಕುರಿಯನ್ ಕಾರ್ಯದಕ್ಷತೆ, ಪ್ರಬುದ್ದತೆ, ವೈಚಾರಿಕತೆಯಲ್ಲಿ ಪ್ರತಿಭಾವಂತರು…!!
ಈ ಬಾರಿ ಕೇರಳದಲ್ಲಿ ಕ್ರೈಸ್ತ ಜನಾಂಗವನ್ನು ಬಿಜೆಪಿಯತ್ತ ಆಕರ್ಷಿಸುವುದರಲ್ಲಿ ಕುರಿಯನ್ ಪರಿಶ್ರಮ ಅಪಾರ…!
ಅದು ಫಲಿತಾಂಶವೂ ನೀಡಿದೆ, ಅದರ ಪರಿಣಾಮವೇ ಬಿಜೆಪಿ ಕೇರಳದಲ್ಲಿ 20ಶೇಕಡಾ ಮತಗಳಿಸಿದೆ…!!
ಕೇರಳದಲ್ಲಿ ಬಿಜೆಪಿ ಬೆಳೆಯಬೇಕಾದರೆ ಹಿಂದೂ – ಕ್ರೈಸ್ತ ಮತೀಯರ ಒಲುಮೆಯ ರಾಜಕೀಯ ಮೈತ್ರಿ ಅತ್ಯಗತ್ಯ…!
ಇದನ್ನು ಮನಗಂಡು ನರೇಂದ್ರ ಮೋದಿ ಸಂಪುಟದಲ್ಲಿ ಅಪ್ಪಟ ಕಾರ್ಯಕರ್ತ ಕುರಿಯನ್ ಅವರಿಗೆ ಅಚ್ಚರಿಯ ಪಾರಿತೋಷಕವಾಗಿ ಸಚಿವಸ್ಥಾನ ನೀಡಿದ್ದಾರೆ…!!
ತಾನು ಸಚಿವನಾಗುವುದು ಸ್ವತಃ ಅವರಿಗೆ, ಕೊನೆಯಕ್ಷಣದ ವರೆಗೂ ಗೊತ್ತಿರಲಿಲ್ಲ…!
ಅವರಿಗೆ ಪ್ರಧಾನವಾದ 4ಖಾತೆಗಳ ಸಹ ಸಚಿವ ಪದವಿ ಒದಗಿದೆ…!!
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಮೀನುಗಾರಿಕೆ, ಮೃಗ ಸಂರಕ್ಷಣೆ ಮತ್ತು ಕ್ಷೀರ ವಿಕಸನ…!
ಈ ಮೂಲಕ ಕೇರಳದಲ್ಲಿ ಅಭಿವೃದ್ದಿಪರ ರಾಜಕೀಯದೊಂದಿಗೆ ಜನಮಾನಸಕ್ಕೆ ಬೇರಿಳಿಸಲು ಸಾಧ್ಯ ಎಂಬುದು ಪಕ್ಷದ ಗಣನೆ…!
ಈ ಧ್ಯೇಯದಲ್ಲಿ ಜಾರ್ಜ್ ಕುರಿಯನ್ ಸಮರ್ಥವಾಗಿ ಮುನ್ನಡೆಯಬಲ್ಲರೆಂಬುವುದೇ ನಿರೀಕ್ಷೆ…!!
ಏಕೆಂದರೆ ಅವರು ಸಂಘಪರಿವಾರದ ಸಂಘಟನಾ ಗರಡಿಯಲ್ಲಿ ಪಳಗಿದ ಅನುಭವಿ ರಾಜನೀತಿಜ್ಞ…!