
ಕೊನೆಯ ಹಂತದ ಮತದಾನದಂದು ನಡೆಯಲಿರುವ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ…!
ಈ ವೇಳೆ ಮೈತ್ರಿಕೂಟ ಪಕ್ಷಗಳ ನಾಯಕರ ಜೊತೆಗೆ ಒಬ್ಬರು ಮೋದಿ ಅವರ ಜೊತೆಗಿದ್ದರು, ಅವರು ಮೋದಿ ಪಕ್ಕದಲ್ಲೇ ಕೂತು ಅವರಿಗೆ ಸಾಥ್ ನೀಡಿದರು….!!
ನಾಮಪತ್ರ ಸಲ್ಲಿಸಲು ಮೇ ಹದಿನಾಲ್ಕು ಕೊನೆಯ ದಿನವಾಗಿತ್ತು, ಹೀಗಾಗಿ ಒಂದು ದಿನದ ಮುನ್ನವೇ ಕಾಶಿ ನಗರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಸೋಮವಾರ ಬ್ರಹತ್ ರೋಡ್ ಶೋ ವಾರಾಣಾಸಿಯಲ್ಲಿ ನಡೆಸಿದ್ದರು…!
ಇದಾದ ನಂತರ ಗಂಗಾನದಿಗೆ, ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು…!!
ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಯ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಮಮಂದಿರದ ಭೂಮಿಪೂಜೆಗೆ ಮಹೂರ್ತ ನಿಗದಿ ಪಡಿಸಿದ್ದ ಗಣೇಶ್ವರ್ ಶಾಸ್ತ್ರಿ ದ್ರಾವಿಡ್ ಮಾತ್ರ ಹಾಜರಿದ್ದರು…!
ಮೋದಿ ಪಕ್ಕದಲ್ಲಿ ಕುಳಿತವರು ಯಾರು…?
ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಕುಳಿತ ವ್ಯಕ್ತಿ ಖ್ಯಾತ ಜ್ಯೋತಿಷಿ ಮತ್ತು ಅಂಕಗಣಿತ ತಜ್ಞ ಗಣೇಶ್ವರ ಶಾಸ್ತ್ರಿ ದ್ರಾವಿಡ್…!
ಇವರೇ ರಾಮಲಲ್ಲಾ ದೇವಸ್ಥಾನದ ಭೂಮಿ ಪೂಜೆ ಮತ್ತು ಶಿಲಾ ಪೂಜೆಯ ಜೊತೆಗೆ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದ್ದರು…!!
ಪ್ರಧಾನಿಯವರು ತಮ್ಮ ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದ ನಾಲ್ವರಲ್ಲಿ ಒಬ್ಬರು ಖ್ಯಾತ ಜ್ಯೋತಿಷಿ ಮತ್ತು ಗಣೇಶ್ವರ ಶಾಸ್ತ್ರಿ ದ್ರಾವಿಡ್ ಕೂಡ ಒಬ್ಬರು…!
ಪ್ರಧಾನಿ ಮೋದಿಯವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಗಣೇಶ್ ಶಾಸ್ತ್ರಿ ದ್ರಾವಿಡ್ ಅವರು ಪ್ರಧಾನಿಯವರ ಪಕ್ಕದಲ್ಲಿಯೇ ಕಾಣಿಸಿಕೊಂಡರು…!!
ನಾಮಪತ್ರ ಸಲ್ಲಿಸುವ ಶುಭಃ ಮುಹೂರ್ತ ನಿರ್ಧರಿಸದ್ದು ಇವರೇ
ಪ್ರಧಾನಿ ಮೋದಿ ಇಂದು ನಾಮನಿರ್ದೇಶವನ್ನು ಮಾಡುವ ಸಮಯವನ್ನು ಸಹ ಗಣೇಶ್ವರ ಶಾಸ್ತ್ರಿ ನಿರ್ಧರಿಸಿದ್ದರು…!
ಇದರಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಣಾಸಿಯಿಂದ ಬೆಳಗ್ಗೆ 1.55ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ…!!
ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಜ್ಯೋತಿಷ್ಯ ಮತ್ತು ವೇದಗಳಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ…!