ಭಾರತೀಯ ಸಂಪ್ರದಾಯದಲ್ಲಿ ಕೆಲವೊಂದು ನಿಯಮಗಳು ತಲಾ ತಲಾಂತರಗಳಿಂದ ನಡೆದುಕೊಂಡು ಬಂದಿದೆ ಹಿರಿಯರು ಹಾಕಿಕೊಟ್ಟ ಕೆಲವಷ್ಟು ಕಟ್ಟುಪಾಡುಗಳನ್ನು ನಡೆಸಿಕೊಂಡು ಬಂದಿರುವಂತಹ ಪರಂಪರೆ ಭಾರತೀಯ ಪರಂಪರೆ.
ಹಾಗೆ ನಮ್ಮಲ್ಲಿ ರಾತ್ರಿ ಹೊತ್ತು ಕೈ ಉಗುರುಗಳನ್ನ ಕತ್ತರಿಸಬಾರದು ಮಂಗಳವಾರ ತಲೆ ಕೂದಲನ್ನು ಕತ್ತರಿಸಬಾರದು ಊಟಕ್ಕೆ ಕುಳಿತುಕೊಳ್ಳುವ ಮೊದಲು ಕೈಕಾಲುಗಳನ್ನು ತೊಳೆಯಬೇಕು ಹಾಗೆ ರಾತ್ರಿ ಹೊತ್ತು ತಲೆ ಬಾಚಬಾರದು ಹಾಗೆ ಇನ್ನೊಂದು ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ನೋಡಬಾರದು ಎಂದು ನಮ್ಮ ಹಿರಿಯವರು ಹೇಳುತ್ತಿದ್ದರು ಆದರೆ ಯಾಕೆ ಹೀಗೆ ಹೇಳುತ್ತಿದ್ದರು ರಾತ್ರಿ ಸಮಯದಲ್ಲಿ ಈ ರೀತಿಯ ಕ್ರಿಯೆಗಳನ್ನು ಯಾಕೆ ಮಾಡಬಾರದು ಅಂತ ಹೇಳುತ್ತಿದ್ದರು.
ಇವತ್ತಿನ ಲೇಖನದಲ್ಲಿ ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಯಾಕೆ ನೋಡಬಾರದು ಅನ್ನೋದನ್ನು ನೋಡೋಣ.
ರಾತ್ರಿಯ ಸಮಯದಲ್ಲಿ ವಾತಾವರಣದಲ್ಲಿ ದುಷ್ಟ ಶಕ್ತಿಗಳ ಹಾವಳಿ ಹೆಚ್ಚಿರುವುದರಿಂದ ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ನೋಡುವುದರಿಂದ ದುಷ್ಟ ಶಕ್ತಿಗಳಿಗೆ ನಮ್ಮ ಶರೀರದ ಮೇಲೆ ನೇರವಾಗಿ ದಾಳಿ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ನಮ್ಮ ಪ್ರತಿಬಿಂಬದ ಮೇಲೆ ಸೂಕ್ಷ್ಮವಾಗಿ ದುಷ್ಟ ಶಕ್ತಿಗಳು ಅಕ್ರಮಣ ಮಾಡುತ್ತದೆ ಇದರಿಂದ ಸರಿಯಿರದ ಮೇಲೂ ಕೂಡ ಸಮಸ್ಯೆಗಳು ಹೆಚ್ಚಾಗುತ್ತದೆ.
ಹಾಗೆ ಹಗಲಿನಲ್ಲಿ ಸೂರ್ಯನ ಬೆಳಕು ಇರುವುದರಿಂದ ನಮ್ಮ ಶರೀರದ ಮೇಲೆ ಸೂರ್ಯನ ಕಿರಣಗಳು ಬೀಳುವುದರಿಂದ
ದುಷ್ಟ ಶಕ್ತಿಗಳಿಗೆ ನಮ್ಮ ಮೇಲೆ ದಾಳಿ ಮಾಡಲು ಸಾಧ್ಯವಾಗುವುದಿಲ್ಲ ಹಾಗೆ ನಮ್ಮ ಶರೀರದಲ್ಲಿರುವ ದೈವಿಕ ಚೈತನ್ಯಗಳು ಯಾವಾಗಲೂ ಜಾಗೃತವಾಗಿ ಇರುತ್ತದೆ ಇದೇ ಕಾರಣಕ್ಕೆ ನಮ್ಮ ಮೇಲೆ ನೇರವಾಗಿ ದುಷ್ಟ ಶಕ್ತಿಗಳು ದಾಳಿ ಮಾಡಲು ಸಾಧ್ಯವಾಗುವುದಿಲ್ಲ ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬದ ಮೇಲೆ ದಾಳಿಯನ್ನು ಮಾಡಿ ಅದರಿಂದ ನಮ್ಮ ಸೂಕ್ಷ್ಮ ಶರೀರದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ
ಇದಕ್ಕಾಗಿಯೇ ರಾತ್ರಿ ಸಮಯದಲ್ಲಿ ಕನ್ನಡಿಯನ್ನು ನೋಡಬಾರದು ಎಂದು ಹೇಳುತ್ತಾರೆ.
ಹಾಗೆ ರಾತ್ರಿ ಸಮಯದಲ್ಲಿ ಕನ್ನಡಿ ನೋಡಬಾರದು ವೈಜ್ಞಾನಿಕ ಕಾರಣಗಳು.
ಸಹಜವಾಗಿ ನಾವು ಕನ್ನಡಿಯನ್ನು ನೋಡಿದಾಗ ಕನ್ನಡಿಯಿಂದ ಬೆಳಕಿನ ಪ್ರತಿಕ್ರಿಯೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಹೇಗೆ ಹಗಲಲ್ಲಿ ಕನ್ನಡಿಯನ್ನು ಹಿಡಿದಾಗ ಸೂರ್ಯನ ಕಿರಣದಿಂದ ಕನ್ನಡಿಯಿಂದ ಒಂದು ಬಿಂದುವಿನ ರೀತಿ ಬೆಳಕು ಹೊರಹೊಮ್ಮುತ್ತದೆ ಈ ಬೆಳಕು ಶರೀರಕ್ಕೆ ಯಾವುದೇ ರೀತಿಯ ಅಪಾಯ ಇರೋದಿಲ್ಲ.
ಆದರೆ ರಾತ್ರಿಯ ಸಮಯದಲ್ಲಿ ಸೂರ್ಯನ ಕಿರಣ ಇಲ್ಲದ ಕಾರಣ ಎಲೆಕ್ಟ್ರಿಕ್ ಲೈಟ್ ಗಳು ಹಾಗೂ ದೀಪದ ಬೆಳಕುಗಳು ಕನ್ನಡಿಯ ಮೇಲೆ ಬೀಳುತ್ತದೆ ಕನ್ನಡಿಯನ್ನು ನಾವು ನೋಡಿದಾಗ ಎಲೆಕ್ಟ್ರಿಕ್ ಲೈಟಿನ ಕಿರಣಗಳು ಕನ್ನಡಿಯ ಮೇಲೆ ಬಿದ್ದು ಅದರ ಬಿಂದು ನಮ್ಮ ಮುಖದ ಮೇಲೆ ಬೀಳುತ್ತದೆ ಇದರಿಂದ ನಮ್ಮ ಮಖದ ತ್ವಚೆ ಹಾಗೂ ಕಾಂತಿ ಹಾಳಾಗುತ್ತದೆ ಎಂದು ಹೇಳುತ್ತಾರೆ, ಹಾಗೆ ಈ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ ಕಣ್ಣಿನ ದೃಷ್ಟಿಯೂ ಕೂಡ ಕುಗ್ಗುವ ಸಾಧ್ಯತೆಗಳು ಇರುತ್ತದೆ ಇದೇ ಕಾರಣಗಳಿಗಾಗಿ ರಾತ್ರಿ ಸಮಯದಲ್ಲಿ ಕನ್ನಡಿ ನೋಡಬಾರದು ಎಂದು ನಮ್ಮ ಹಿರಿಯರು ಹೇಳಿದ್ದು .
ಇದಿಷ್ಟು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿಂದ ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಎಂದು ಹೇಳುತ್ತಾರೆ
ಹಿರಿಯರು ಮಾಡಿದ ಯಾವ ನಿಯಮಗಳು ಕೂಡ ಸುಳ್ಳಾಗಲು ಸಾಧ್ಯವಿಲ್ಲ.
ಹಾಗೂ ತಲೆ ಕೂದಲು ಬಿಚ್ಚಿಕೊಳ್ಳಬಾರದು
ನಮ್ಮ ಆಧುನಿಕ ಜೀವನಶೈಲಿಯು ನಮ್ಮ ಪೂರ್ವಜರು ಹಾಕಿಕೊಟ್ಟಂತಹ ಎಷ್ಟು ಮಾರ್ಗಗಳಿಂದ ಬಹಳ ದೂರ ಸರಿಯುತ್ತಿದೆ ಹಿಂದಿನ ಕಾಲದಲ್ಲಿ ಪ್ರತಿಯೊಂದು ಕೂಡ ವೈಜ್ಞಾನಿಕ ಹಾಗೂ ಅಧ್ಯಾತ್ಮಕ ಕಾರಣಗಳಿಂದ ಮಾಡುತ್ತಿದ್ದರು ಆದರೆ ಆಧುನಿಕ ಜೀವನದಲ್ಲಿ ನಮಗೆ ಅಷ್ಟು ಸಮಯ ಕೂಡ ಇಲ್ಲ ಹಾಗೆ ಕೆಲಸದ ಒತ್ತಡ ಜೀವನ ಶೈಲಿ ಹಿರಿಯರು ಹಾಕಿಕೊಟ್ಟಂತಹ ಮಾರ್ಗಗಳ ಜೊತೆ ನಮಗೆ ಹೋಗಲು ಸಾಧ್ಯವಾಗುತ್ತಿಲ್ಲ ಆದರೆ ಹಿಂದಿನವರು ಹೇಳುವಂತೆ ರಾತ್ರಿ ಸಮಯದಲ್ಲಿ ಕನ್ನಡಿ ಯಾಕೆ ನೋಡಬಾರದು ಅನ್ನುವಂತದ್ದು ತಿಳಿದುಕೊಂಡು ಅದೇ ರೀತಿ ರಾತ್ರಿಯ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಅನ್ನುವಂತಹ ವಿಷಯವನ್ನು ತಿಳಿದುಕೊಳ್ಳೋಣ.
ರಾತ್ರಿಯ ಸಮಯದಲ್ಲಿ ತಲೆ ಕೂದಲನ್ನು ಬಿಚ್ಚಿಕೊಳ್ಳುವುದರಿಂದ ಆಗುವ ಅಪಾಯಗಳು
ನಮಸ್ತೆ ಸ್ನೇಹಿತರೆ ರಾತ್ರಿ ಸಮಯದಲ್ಲಿ ತಲೆ ಕೂದಲುಗಳನ್ನು ಬಿಚ್ಚಿಕೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮ ಮೇಲೆ ದುಷ್ಟಶಕ್ತಿಗಳು ದಾಳಿ ಮಾಡುತ್ತದೆ ಅದಕ್ಕೆ ಕಾರಣ ಏನೆಂದರೆ ನಮಗೆ ಹಲವಾರು ಕಥೆಗಳು ಗೊತ್ತೇ ಇದೆ ದೆವ್ವ ಬೂತ ಹಾಗೂ ದುಷ್ಟ ಶಕ್ತಿಗಳ ಬಗ್ಗೆ ಇದು ನಂಬುವವರ ವಿವೇಚನಕ್ಕೆ ಬಿಟ್ಟಿದ್ದು ಅವರವರ ನಂಬಿಕೆಯ ಮೇಲೆ ಅವರವರ ಚಿಂತನೆಗಳು ಆದರೂ ನಾವು ಇಲ್ಲಿ ಸಂಗ್ರಹಿಸಿದ ವಿಚಾರಗಳನ್ನ ಹೇಳುತ್ತಿದ್ದೇವೆ .
ದುಷ್ಟಶಕ್ತಿಗಳು ಗೋಚರವಾಗುವುದಿಲ್ಲ ಒಂದು ರೀತಿಯ ಮಾಯೆ ಹಾಗೆ ದುಷ್ಟ ಶಕ್ತಿಗಳು ಯಾವುದಾದರೂ ಮನುಷ್ಯನ ದೇಹದಲ್ಲಿ ಸೇರಿಕೊಂಡರೆ ತಲೆ ಕೂದಲುಗಳು ಬಿಚ್ಚಿಕೊಳ್ಳುತ್ತಾರೆ ಇದು ಸಹಜವಾಗಿ ನಮಗೆ ಗೊತ್ತಿದೆ ಹಾಗೆ ತಲೆ ಕೂದಲುಗಳನ್ನು ಬಿಚ್ಚಿಕೊಳ್ಳುವುದರಿಂದ ನಮ್ಮ ತಲೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತೆ ದುಷ್ಟ ಶಕ್ತಿಗಳು ತಲೆ ಕೂದಲಿನ ಮಾರ್ಗದಿಂದ ದೇಹವನ್ನ ಪ್ರವೇಶಿಸುತ್ತದೆ ಇದರಿಂದ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಇನ್ನು ಅನೇಕ ರೀತಿಯಾದಂತಹ ಸಮಸ್ಯೆಗಳು ಪ್ರಾರಂಭವಾಗುತ್ತದೆ ಎಂದು ನಮ್ಮ ಪ್ರಾಚೀನರು ಹೇಳುತ್ತಿದ್ದರು ಅದೇ ರೀತಿ ರಾತ್ರಿ ಹೊತ್ತು ತಲೆ ಕೂದಲು ಯಾಕೆ ಕಟ್ಟಿಕೊಳ್ಳಬೇಕು ಅನ್ನೋದಕ್ಕೆ ಇದೊಂದು ಉದಾಹರಣೆ.
ವೈಜ್ಞಾನಿಕ ಕಾರಣ
ರಾತ್ರಿ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಎಂದರೆ ದೇಹದ ಎಲ್ಲಾ ಭಾಗದ ಸಂಪರ್ಕಗಳನ್ನು ತಲೆ ಕೂದಲು ಹೊಂದಿರುತ್ತದೆ ಇದರಿಂದ ಏನಾಗುತ್ತದೆ ಎಂದರೆ ತಲೆ ಕೂದಲು ಬಿಚ್ಚುವುದರಿಂದ ದೇಹದ ನಾಡಿಗಳು ರಕ್ತ ಸಂಚಾರವನ್ನು ನಿಧಾನಗತವಾಗಿ ಮಾಡುತ್ತದೆ ಹಾಗೆ ಇದರಿಂದ ಮಂಡಿ ನೋವು ಕುತ್ತಿಗೆ ನೋವು ಪ್ರಾರಂಭವಾಗುತ್ತದೆ ಹಾಗೆ ತಲೆಗಳು ಭಾರವಾಗಿ ಎಳೆಯುವುದರಿಂದ ನಿದ್ರೆಯ ಮಂಪರು ಹೆಚ್ಚಾಗುತ್ತದೆ ಹಾಗೆ ನೆನಪಿನ ಶಕ್ತಿಯು ಕೂಡ ಕಮ್ಮಿಯಾಗುತ್ತದೆ ಎಂದು ಹೇಳುತ್ತಾರೆ.
ರಾತ್ರಿ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಇದಿಷ್ಟು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳು ಇದು ಈಗಿನಿಂದ ಬಂದಿರುವುದನ್ನು ತಂದು ಅಲ್ಲ ಸಾವಿರಾರು ವರ್ಷಗಳಿಂದ ಭಾರತೀಯರು ನಡೆಸಿಕೊಂಡು ಬಂದಂತಹ ಒಂದು ನಿಯಮಗಳು ಎಲ್ಲದಕ್ಕೂ ಕೂಡ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಕಾರಣಗಳನ್ನು ಕೊಟ್ಟಿದ್ದಾರೆ.