
ನಿತ್ಯ ಧ್ವನಿ ಚುಟುಕು ಸಂಪಾದಕೀಯ
ದೇಶದ 28 ರಾಜ್ಯಗಳ ಪೈಕಿ ಕೇವಲ 6
ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ( ಮೇಲ್ಮನೆ )
ಅಸ್ತಿತ್ವದಲ್ಲಿದೆ…!
ಅಂದರೆ ಇದು ಅನಿವಾರ್ಯವಲ್ಲ ಎಂದಾಯ್ತಲ್ಲವೇ…?
ವಿಧಾನ ಪರಿಷತ್ತು ಸದಸ್ಯರಿಗೆ ಸಂಬಳ, ಭತ್ಯೆಗಳು, ಪಿಂಚಣಿ ಇತ್ಯಾದಿ ವೆಚ್ಚಗಳು ನೂರಾರು ಕೋಟಿಗಳಾಗುತ್ತವೆ…!
ಇವೆಲ್ಲವುಗಳ ಮೌಲ್ಯಮಾಪನ ಅಗತ್ಯವಿದೆ…!!
ಕೋಸ್ಟ್ – ಬೆನಿಫಿಟ್ ಅನಾಲಿಸಿಸ್ ಆಗಬೇಕಾಗಿದೆ…!
ಜನರಿಂದ ನೇರವಾಗಿ ಚುನಾಯಿಸಲ್ಪಟ್ಟ ಲೋಕಸಭೆ ವಿದಾನಸಭೆಗಳು ಇರುವಾಗ ಇವುಗಳ ಅಗತ್ಯವೇನು….?
ಬಹುಮತ ಪಡೆದ ಸರಕಾರ ಬಹುಮತದಿಂದ ಪಾಸು ಮಾಡಿದ ವಿದೇಯಕಗಳನ್ನು
ವಿರೋದಿಸುವುದರಲ್ಲೇ ಸಮಯ ವ್ಯರ್ಥಮಾಡುವ ನೂರಾರು ಸಂಗತಿಗಳು ಮಾಮೂಲಿಯಾಗಿವೆ…!
ಈ ಬಗ್ಗೆ ಆಳವಾದ ವಿಶ್ಲೇಷಣೆ ಆಗಬೇಕು…!!
ಇದರ ಅಸ್ತಿತ್ವದಿಂದ ಪ್ರಜಾಪ್ರಭುತ್ವಕ್ಕೆ ಪ್ರಯೋಜನವಿದ್ದರೆ ಇತರೆ ರಾಜ್ಯಗಳಲ್ಲೂ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬರಬೇಕು 28 ರಲ್ಲಿ ಕೇವಲ 6 ರಾಜ್ಯಗಳಲ್ಲಿ ಮಾತ್ರ ಯಾಕೆ…?