
ಒಂದು ಕಾಲದಲ್ಲಿ “ಗೂಂಡಾ ರಾಜ್” ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಈಗ ಸಾಕಷ್ಟು ಸುಧಾರಣೆ ಕಾಣುತ್ತಿದೆ, ಆದರೆ ಶ್ರೀಗಂಧದ ನಾಡು ಕರ್ನಾಟಕ ಅಪರಾಧಿಗಳ ಬೀಡಾಗುತ್ತಿದೆಯೇ…?
ಹಿಂದೆ ಹಣ ಕೈಯಲ್ಲಿ ಇಟ್ಟುಕೊಂಡು ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ಇದ್ದ ಉತ್ತರಪ್ರದೇಶವು, 2017 ರ ನಂತರ ಯೋಗಿ ಆಡಳಿತದಲ್ಲಿ ದಿನದಿಂದ ದಿನಕ್ಕೆ ಸುರಕ್ಷಿತ ರಾಜ್ಯವಾಗಿ ಮಾರ್ಪಾಡಾಗುತ್ತಿದೆ ಅದಕ್ಕೆ ಮುಲಾಜಿಲ್ಲದೇ ನಡೆದ ಎನ್ಕೌಂಟರ್ ಗಳು ಕಾರಣ ಎನ್ನಬಹುದು, ಈಗ ಅವರು ಇನ್ನೂ ಒಂದು ಹೆಜ್ಜೆ ಮುಂದುವರಿದು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲೂ ಮುಂದಾಗಿದ್ದಾರೆ, ಒಂದು ವೇಳೆ ಯಾರಾದರೂ ತೊಂದರೆ ಕೊಡಲು ಮುಂದಾದರೆ ಅವರ ಮನೆಯನ್ನೆ ಕೆಡವಿ ಸ್ಪಷ್ಟ ಸಂದೇಶ ರವಾನಿಸಲಾಗುತ್ತಿದೆ. ಆದರೆ ಸುರಕ್ಷಿತವಾಗಿದ್ದ ಕರ್ನಾಟಕದ ಪರಿಸ್ಥಿತಿ ದಿನದಿಂದ ದಿನಕ್ಕೆ ಹಾಳಾಗುತ್ತಿದೆಯೇ…?
ಈ ಪ್ರಶ್ನೆ ಹುಟ್ಟಲು ಕಾರಣ ಇತ್ತೀಚಿನ ದಿನಗಳಲ್ಲಿ ನಡೆದ ಕೆಲ ಘಟನೆಯನ್ನೇ ನೋಡಿ…!
★ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಯಿತು
★ ನೇಹಾ ಎಂಬ ಹುಡುಗಿಯನ್ನು ಕೊಲ್ಲಲಾಯಿತು
★ ನಟಿ ಹರ್ಷಿಕಾ ಮೇಲೆ ದಾಳಿಗೆ ಪ್ರಯತ್ನವಾಯಿತು
★ ಗದಗದಲ್ಲಿ ನಗರಸಭೆ ಉಪಾಧ್ಯಕ್ಷರ ಮನೆಯ ನಾಲ್ವರನ್ನು ಹತ್ಯೆ ಮಾಡಲಾಯಿತು
★ ಸಹೋದ್ಯೋಗಿ ಹುಡುಗಿಗೆ ಡ್ರಾಪ್ ನೀಡಿದ ಎಂಬ ನೆಪವೊಡ್ಡಿ ಯುವಕನೊಬ್ಬನ ಮೇಲೆ ಅಮಾನುಷ ಹಲ್ಲೆ ಮಾಡಲಾಯಿತು
★ ಚೈನ್ ಕಳ್ಳತನವಂತೂ ಮಿತಿಮೀರಿ ಹೋಗಿದೆ
★ ಮಾದಕ ವಸ್ತುಗಳ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ
★ ನರೇಂದ್ರಮೋದಿಯವರ ಕುರಿತಾಗಿ ಹಾಡು ರಚಿಸಿದವನಿಗೆ ಹಲ್ಲೆ ಮಾಡಲಾಯಿತು
ಇದೆಲ್ಲಾ ಗಮನಿಸುವಾಗ ಆತಂಕವಾಗುತ್ತದೆ ಅಲ್ಲವೇ…? ಪರಿಸ್ಥಿತಿ ಯಾಕಿಷ್ಟು ಹದಗೆಟ್ಟಿದೆ…?
ಪ್ರಜೆಗಳಾದ ನಾವು ಆಲೋಚನೆ ಮಾಡಬೇಕಾಗಿದೆ…!
ಸಂಪಾದಕರ ನಿಲುವು
ಸಮಾಜದಲ್ಲಿ ಶಾಂತಿ ಕೆಡವುವವರ ಮೂಲಕ ಅಶಾಂತಿಯನ್ನು ಸ್ರಷ್ಠಿಸುವ ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು…!
ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯಪ್ರವೃತ್ತವಾಗಬೇಕು…!!