
ಬೆಂಗಳೂರು: ಜೂನ್ ನಾಲ್ಕರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಬಹುಶಃ ಆಗಸ್ಟ್-ಸೆಪ್ಟೆಂಬರ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಪುನಶ್ಚೇತನ ಕಾಣುವ ಸಾಧ್ಯತೆಯಿದೆ. ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರ ದಿಢೀರ್ ನಿರ್ಗಮನವು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗುವ ಲಕ್ಷಣಗಳನ್ನು ತೋರುತ್ತಿದೆ.
ರಾಜ್ಯ ಬಿಜೆಪಿಗೆ ಒಂದು ರೀತಿಯ ಶಕ್ತಿಗಳಾಗಿ ಇಬ್ಬರು ನಾಯಕರು ಇದ್ದಿದ್ದರು ಬಿ.ಎಲ್.ಸಂತೋಷ್ ಮತ್ತು ಬಿ.ಎಸ್.ಯಡಿಯೂರಪ್ಪ ಈಗ ಇವರಿಬ್ಬರನ್ನು ಬದಿಗೆ ಸರಿಸಿ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಪಕ್ಷದ ಆಂತರಿಕ ವರದಿಯ ಮೂಲಗಳು ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 15ರಿಂದ 16 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ 12ರಿಂದ 13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳುತ್ತಿದೆ.
ಪಕ್ಷದ ಆಂತರಿಕ ವರದಿ ಬಂದ ನಂತರ ಕಮಲಕಲಿಗಳಿಗೆ ಕೊಂಚ ಟೆಂಶನ್ ಆದ ಹಾಗೆ ಕಾಣುತ್ತಿದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ರಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು ಇನ್ನೂ ಮೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿತ್ತು.
25 ರಲ್ಲಿ ಸ್ಪರ್ಧಿಸಿದ ಬಿಜೆಪಿ 24 ರಲ್ಲಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿತ್ತು ಜೆಡಿಎಸ್ ಕೂಡ ಮೂರೂ ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಇಟ್ಟಿದ್ದು ಆದರೆ ಇದೀಗ ಪಕ್ಷದ ಆಂತರಿಕ ವರದಿ ಬಿಜೆಪಿ ನಾಯಕರಿಗೆ ಕೊಂಚ ಟೆನ್ಶನ್ ಕೊಟ್ಟಿರೋದು ನಿಜ.
ಬಿಜೆಪಿ ಶಿಸ್ತಿನ ಪಕ್ಷ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು ಆದರೆ ಶಿಸ್ತಿನ ಪಕ್ಷಕ್ಕೆ ಈ ಬಾರಿ ಬಂಡಾಯದ ಬಿಸಿ ತಟ್ಟಿದೆ
ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ತಪ್ಪಿತು ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಅವರ ಮಗನಿಗೂ ಟಿಕೆಟ್ ಕೈತಪ್ಪಿತು, ಇದರಿಂದ ಬೇಸರಗೊಂಡ ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಗೆ ಟಕ್ಕರ್ ಕೊಡಲು ಬಂಡಾಯ ಎದ್ದರು, ಇದಾದ ನಂತರ ಈಗ ವಿಧಾನಪರಿಷತ್ ಚುನಾವಣೆಯಲ್ಲಿ ಕೂಡ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ಟರು ಕೂಡ ಈಗ ಬಿಜೆಪಿಗೆ ಬಂಡಾಯದ ಬಿಸಿ ಉಂಡೆ ಆಗಿದ್ದಾರೆ.
ಬಂಡಾಯ ಸಮಾನ ಮಾಡುವಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಯಿತು ಎಂದು ಕೆಲವು ಬಿಜೆಪಿಯ ನಾಯಕರುಗಳು ಹೇಳುತ್ತಿದ್ದಾರೆ,
ರಾಜ್ಯದ ಮತದಾರರು ಕೈಗೆ ಕೈ ಕೊಟ್ಟರಾ ಇಲ್ಲ ಕಮಲ ಹಿಡಿದರ ಎಂದು ಜೂನ್ ನಾಲ್ಕರ ತನಕ ಕಾಯಬೇಕು.
ಜೂನ್ ನಾಲ್ಕರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಬಿಜೆಪಿಯ ನಾಯಕತ್ವ ಸಫಲವಾಯಿತಾ ಇಲ್ಲ ವಿಫಲವಾಯಿತಾ ಎಂದು ಕಾಯಬೇಕಾಗಿದೆ.
ಬಿಜೆಪಿಯಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ಅನ್ನೋದು ಕಾದುನೋಡಬೇಕಾಗಿದೆ.
ಪೊಲಿಟಿಕಲ್ ಭೀಷ್ಮ ನಿತ್ಯ ಧ್ವನಿ