
ನ್ಯೂಯಾರ್ಕ್: ಮಗುವಿಗೆ ಸಾಮಾನ್ಯವಾಗಿ ಹಲ್ಲು ಹುಟ್ಟಲು ಆರಂಭವಾಗುವುದು 6 ತಿಂಗಳಿಂದ 12 ತಿಂಗಳ ನಡುವಿನ ಅವಧಿಯಲ್ಲಿ…!
ಆದಾಗ್ಯೂ, ಹಲ್ಲುಗಳು ಸಂಪೂರ್ಣವಾಗಿ ಬರಲು ಹಲವು ವರ್ಷಗಳು ಬೇಕಾಗುತ್ತದೆ…!!
ಆದರೆ ಇಲ್ಲೊಂದು ಮಗು ಎಲ್ಲಾ 32 ಹಲ್ಲುಗಳೊಂದಿಗೆ ಜನ್ಮ ತಾಳಿದೆ…!
ನಿಮಗೆ ನಂಬಲು ಸಾಧ್ಯವೇ ಇಲ್ಲ ಅಂತ ಅನಿಸಬಹುದು…!!
ಆದರೆ ಅಮೆರಿಕಾದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ…!
ಈ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ…!!
ಮಗು ಹುಟ್ಟಿ ಹಲವು ವರ್ಷಗಳು ಕಳೆದ ಬಳಿಕ ಆ ಮಗುವಿಗೆ ಸಂಪೂರ್ಣವಾಗಿ ಹಲ್ಲುಗಳು ಬರುತ್ತವೆ, ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ, ಅಮೆರಿಕಾದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ…!
ಎಲ್ಲಾ ಹಲ್ಲುಗಳನ್ನು ಹೊಂದಿರುವ ಮಗುವಿನ ವಿಡಿಯೋವನ್ನು ಆಕೆಯ ತಾಯಿಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ...!!
ಅಪರೂಪದಲ್ಲಿ ಅಪರೂಪದ ವೈದ್ಯಕೀಯ ಕಂಡಿಷನ್ ಇದು
ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ, ಇದು ತಮಾಷೆಯಲ್ಲ ಎಂದು ಹೇಳಿದ್ದಾರೆ…!
ಮಗುವಿನ ಈ ಪರಿಸ್ಥಿತಿಗೆ ಹಲವು ಕಾರಣಗಳಿರಬಹುದು, ಆರಂಭದಲ್ಲಿ ಇದು ನವಜಾತ ಶಿಶುವಿಗೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡುವುದಿಲ್ಲ, ಆದರೆ ಇದರಿಂದಾಗಿ ಮಗುವಿಗೆ ಹಾಲುಣಿಸಲು ತಾಯಿಯು ತೊಂದರೆಯನ್ನು ಎದುರಿಸಬೇಕಾಗುತ್ತದೆ, ಅದೇ ಸಮಯದಲ್ಲಿ, ಮಗು ಕೂಡ ಮುರಿದ ಹಲ್ಲು ನುಂಗುವ ಆತಂಕವೂ ಇದೆ…!!