
ಜಾರ್ಖಂಡ್ :ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಚಿತ್ರ ವಿಡಿಯೋಗಳು ಹರಿದಾಡುವುದು ಸರ್ವೇಸಾಮಾನ್ಯ ಹಾಗೆ ಕೆಲವೊಂದು ವಿಡಿಯೋಗಳಿಗೆ ಮೂಲವೇ ಇರುವುದಿಲ್ಲ ಕೆಲವು ವಿಡಿಯೋಗಳಿಗೆ ಮೂಲಗಳು ಇದ್ದರೂ ಸತ್ಯಂಸ ತಿಳಿಯುವುದಿಲ್ಲ ಇದೇ ರೀತಿ ಜಾರ್ಖಂಡ್ ನಲ್ಲಿ ನಡೆದ ಘಟನೆಯ ಒಂದು ವಿಡಿಯೋ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವೈರಲಾಗುತ್ತಿದೆ
ಭಗವಾನ್ ಭೋಲೆನಾಥನ ಭಕ್ತಿಯಲ್ಲಿ ಪಾಲ್ಗೊಳ್ಳಲು ಈ ಮಾಸದಲ್ಲಿ ಜಾರ್ಖಂಡ್ನ ರಾಣಿದಿಹ್ ಗುಪ್ತಾ ಧಾಮ್ ಗುಹೆಗೆ ದೂರದೂರುಗಳಿಂದ ಭಕ್ತರು ಬರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಶಿವನ ದರ್ಶನಕ್ಕೆ ಜನರು ಆಗಮಿಸಿದ್ದರು. ಆಗ ಗುಹೆಯ ಮುಖ್ಯದ್ವಾರದಲ್ಲಿ ಬಾಲಕಿ ಹಾಗೂ ನಾಗರಹಾವು ನೆಲದ ಮೇಲೆ ಹರಿದಾಡುತ್ತಿರುವುದನ್ನು ಕಂಡು ಭಕ್ತರು ಬೆಚ್ಚಿಬಿದ್ದರು. ಕ್ರಮೇಣ ಈ ಸುದ್ದಿ ಇಡೀ ಊರಿಗೆ ಹರಡಿತು ಈ ವಿಷಯ ತಿಳಿಯುತ್ತಿದ್ದಂತೆ ಗುಹೆ ಹತ್ತಿರ ನೂರಾರು ಜನರು ಸೇರಿದರು ನಂತರ ಯುವತಿಯ ವರ್ತನೆಯನ್ನು ಕಂಡು ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದರು
ಆದರೆ ಗುಹೆಯಲ್ಲಿ ಪ್ರತ್ಯಕ್ಷವಾದ ಯುವತಿ ಕಳೆದ ಮೂರು ತಿಂಗಳದಿಂದ ಕಾಣೆಯಾಗಿದ್ದಳು ಎಂದು ಹೇಳಲಾಗುತ್ತಿದೆ
ಬಾಲಕಿಯ ಕುಟುಂಬ ಸದಸ್ಯರ ಪ್ರಕಾರ, ಕಳೆದ ಮೂರು ತಿಂಗಳ ಹಿಂದೆ ಯುಪಿಯ ಸೋನಭದ್ರ ಜಿಲ್ಲೆಯಿಂದ ಕಾಣೆಯಾಗಿದ್ದಳು. ಬಾಲಕಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಅವಳ ಬಗ್ಗೆ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ.
ಗುಹೆ ಬಳಿ ಯುವತಿಯನ್ನು ಕಂಡು ಜನರು ಭಯಭೀತರಾಗಿದ್ದಾರೆ ನಂತರ ಯುವತಿಯ ಮನೆಯವರು ಪೂಜೆಯನ್ನು ಸಲ್ಲಿಸಿ, ಯುವತಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ
ಬಾಲಕಿಯ ಈ ವರ್ತನೆಗೆ ಸಂಬಂಧಿಸಿದಂತೆ ಆ ಪ್ರದೇಶದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದನ್ನು ಯಾವುದೋ ದುಷ್ಟಶಕ್ತಿಯ ನೆರಳು ಎನ್ನುತ್ತಿದ್ದಾರೆ.