
ಚೆನ್ನೈ: ಲೈಕ್ ಮತ್ತು ಸಬ್ಸ್ಕ್ರೈಬ್ ಹೆಚ್ಚಿಸಿಕೊಳ್ಳಲು ಕೆಲವು ಹಾಗೂ ಹಣ ಗಳಿಸಲು ಯೂಟ್ಯೂಬರ್ಸ್ ಸಾರ್ವಜನಿಕರಲ್ಲಿ ಅಶ್ಲೀಲ ಪ್ರಶ್ನೆಗಳನ್ನು ಕೇಳಿ ಹುಚ್ಚಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಕೆಲವು ಯೂಟ್ಯೂಬರ್ಸ್ಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಯುವ ಜನಾಂಗದವರ ಹತ್ತಿರ ಅಶ್ಲೀಲ ಪ್ರಶ್ನೆಗಳನ್ನು ಕೇಳಿ ಅಪ್ಲೋಡ್ ಮಾಡೋದಿಲ್ಲ ಎಂದು ನಂತರ ಅಪ್ಲೋಡ್ ಮಾಡುತ್ತಾರೆ ಇದರಿಂದ ಈ ಹುಚ್ಚು ಯೂಟೂಬರ್ಸ್ ಗಳ ಪ್ರಶ್ನೆಗೆ ಉತ್ತರ ಕೊಟ್ಟವರು ಮುಜುಗರಕ್ಕೆ ಒಳಗಾಗುತ್ತಾರೆ.
ಇಂಥದ್ದೇ ಒಂದು ಘಟನೆ ತಮಿಳುನಾಡಿನಲ್ಲಿ ಇತ್ತೀಚಿಗೆ ನಡೆದಿದೆ ಯುವತಿಯ ಬಳಿ ಡಬಲ್ ಮೀನಿಂಗ್ ಪ್ರಶ್ನೆ ಒಂದನ್ನು ಕೇಳಿ ನಂತರ ಅದನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿ ಪ್ರಸಾರ ಮಾಡಿದ್ದಾರೆ. ಇವತ್ತಿಗೆ ಮುಜುಗರವಾಗಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಯೂಟ್ಯೂಬರ್ಸ್ ಗಳ ಹೆಡೆಮುರಿ ಕಟ್ಟಿದ್ದಾರೆ.
ಹಾಗಾದ್ರೆ ಈ ಘಟನೆ ನಡೆದಿರೋದಾದ್ರೂ ಎಲ್ಲಿ.?
ಈ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಬಂಧಿತರನ್ನು ವಿಡಿಯೋ ಜಾಕಿ ಆರ್. ಶ್ವೇತಾ (23), ವಿಡಿಯೋ ಜಾಕಿ ಎಸ್ ಯೋಗರಾಜ್ (21) ಮತ್ತು ಮ್ಯಾನೇಜರ್ ರಾಮ ವೀರಪ್ಪನ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ‘ವೀರಾ ಟಾಕ್ಸ್ ಡಬಲ್ ಎಕ್ಸ್’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಈ ಚಾನೆಲ್ ಮೂಲಕ ರಸ್ತೆಯಲ್ಲಿ ಹೋಗುವ ಯುವಕ-ಯುವತಿಯರು ಹಾಗೂ ಅಪ್ರಾಪ್ತರನ್ನು ಸಂದರ್ಶಿಸಿ, ಹಾಸ್ಯಾಸ್ಪದ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅಶ್ಲೀಲ ಪ್ರಶ್ನೆಗಳನ್ನು ಕೇಳುವ ಮೂಲಕ ಮುಜುಗರ ಉಂಟು ಮಾಡುತ್ತಾರೆ.
ಈ ಯೂಟ್ಯೂಬರ್ಸ್ ಇತ್ತೀಚೆಗೆ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳ ಸಂದರ್ಶನವನ್ನು ಮಾಡುತ್ತಾರೆ. ವಿಡಿಯೋವನ್ನು ಅಪ್ಲೋಡ್ ಮಾಡುವುದಿಲ್ಲ. ಇದನ್ನು ಗೌಪ್ಯವಾಗಿ ಇಡುತ್ತೇವೆ ಎಂದು ಯುವತಿಯನ್ನು ನಂಬಿಸುತ್ತಾರೆ, ಡಬಲ್ ಮೀನಿಂಗ್ ಪ್ರಶ್ನೆಗಳನ್ನು ಕೇಳಿ, ಯುವತಿಯಿಂದ ಅಭಿಪ್ರಾಯಗಳನ್ನು ಪಡೆದು, ಆಕೆಯ ಅನುಮತಿ ಇಲ್ಲದೆ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಂತ್ರಸ್ತ ಯುವತಿ ಇಂಜಿನಿಯರಿಂಗ್ ವಿದ್ಯಾರ್ಥಿಯು ಆಗಿದ್ದಳು ವಿಡಿಯೋದಿಂದ ಸಾಕಷ್ಟು ಅವಮಾನ ಅನುಭವಿಸಿದ್ದಳು ನಂತರ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ . ಇದನ್ನು ಗಮನಿಸಿದ ಕೂಡಲೇ ಕಿಲ್ಪಾಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸದ್ಯ ಯುವತಿಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.
ನಂತರ ಯುವತಿ ದುರಿನ ಮೇಲೆ ಯೂಟ್ಯೂಬರ್ಸ್ ಗಳನ್ನು ಪೋಲೀಸರು ಬಂಧಿಸಿದ್ದಾರೆ ನಂತರ ಇವರ ಯುಟ್ಯೂಬ್ ಚಾನೆಲ್ ಅನ್ನು ಕೂಡ ಚೇಂಜ್ ಮಾಡಿದ್ದಾರೆ.