
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ…!
ವೇದ ಪುರಾಣಗಳಲ್ಲಿ ಗುರುವಿನ ಮಹತ್ವವನ್ನು ವಿಸ್ತಾರವಾಗಿ ತಿಳಿಸಲಾಗಿದೆ…!!
ಗುರು ಪೂರ್ಣಿಮೆಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ…!
ಪೌರ್ಣಿಮೆಗೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಆಷಾಡ ತಿಂಗಳ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ…!!
ಮೊದಲ ಬಾರಿಗೆ ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದರು, ಇದೇ ಕಾರಣದಿಂದ ಅವರನ್ನು ಮೊದಲ ಗುರು ಎಂದೂ ಕೂಡ ಕರೆಯಲಾಗುತ್ತದೆ…!
ಬದುಕಿನ ಮೌಲ್ಯಗಳನ್ನು ತಿಳಿಸಿ ಕೊಡುವ ಗುರುವಿಗೆ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಉನ್ನತ ಮತ್ತು ಗೌರವಯುತ ಸ್ಥಾನಮಾನವಿದೆ…!!
ಜೀವನ ಮತ್ತು ಆಧ್ಯಾತ್ಮಿಕ ಶಕ್ತಿಯ ಮೌಲ್ಯವನ್ನು ತಿಳಿಸುವ ಗುರುವಿಗೆ ಗೌರವ ಸಲ್ಲಿಸಲು ಗುರುಪೂರ್ಣಿಮೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ…!
ಈ ವರ್ಷ ಗುರು ಪೂರ್ಣಿಮಾ ಜುಲೈ 21 ರಂದು ಆಚರಿಸಲಾಗುತ್ತಿದೆ…!!
ಮಹರ್ಷಿ ವೇದವ್ಯಾಸರು ಜನಿಸಿದ ದಿನವೇ ಗುರುಪೂರ್ಣಿಮೆ, ಅದಕ್ಕಾಗಿಯೇ ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ…!
ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು…!!
ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು…!!
ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು…!
ಇದರ ಆಚರಣೆ ಹೇಗೆ…?
ಗುರು ಪೂರ್ಣಿಮೆಯ ದಿನ ಹಿಂದೂಗಳು ಬೇಗನೆ ಎದ್ದು ಮಹಾ ಗುರುವಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ…!
ಮಹಾ ಗೀತೆಯ ಪಠಣದ ಮೂಲಕ ಮಹಾ ಗುರುವನ್ನು ಸ್ಮರಿಸಲಾಗುತ್ತದೆ ಮತ್ತು ಅವರ ಬೋಧನೆಗಳನ್ನು ಪಾಲಿಸಲಾಗುತ್ತದೆ…!!
ಈ ಮಂಗಳಕರ ದಿನದಂದು ಗುರುಗಳಿಗೆ ಹೂವು, ಉಡುಗೊರೆಗಳನ್ನು ಅರ್ಪಿಸಲಾಗುತ್ತದೆ…!
ಪಾದ ಪೂಜೆ ನಡೆಸಲಾಗುತ್ತದೆ…!!
ವೇದವ್ಯಾಸರಿಗೆ ಮೀಸಲಾದ ಆಶ್ರಮಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ…!
ಆಚರಣೆಯ ಮಹತ್ವವೇನು…?
ಸಾವಿರಾರು ವರ್ಷಗಳ ಹಿಂದಿನಿಂದ ಆಚರಿಸಲಾಗುವ ಗುರು ಪೂರ್ಣಿಮೆಯನ್ನು ಇಂದಿನ ಮಕ್ಕಳಿಗೆ ಗುರುವಿನ ಸ್ಥಾನಮಾನಗಳನ್ನು ತಿಳಿಸಲು ಬಳಸಲಾಗುತ್ತದೆ…!
ತಮ್ಮ ಜೀವನವನ್ನು ಶ್ರೇಷ್ಠಗೊಳಿಸುವ ವ್ಯಕ್ತಿಗೆ ಗೌರವ ನೀಡುವುದನ್ನು ಕಲಿಸಲು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ…!!
ಗುರು ಪೂರ್ಣಿಮೆಯು ಮಕ್ಕಳನ್ನು ಅಧ್ಯಾತ್ಮದತ್ತ ಸೆಳೆಯುವ ಒಂದು ದಾರಿಯಾಗಿದೆ…!
ನಾವು ಗುರುಗಳಿಗೆ ತೋರುವ ಗೌರವ, ಭಕ್ತಿಯನ್ನು ನಮ್ಮ ಮಕ್ಕಳಲ್ಲೂ ಬೆಳೆಸಲು ಈ ದಿನದ ಆಚರಣೆ ಅತ್ಯಂತ ಮಹತ್ವದ್ದಾಗಿದೆ…!!
ಗುರು ಮಂತ್ರಗಳು
ಓಂ ಗುರುಭ್ಯೋ ನಮಃ
ಓಂ ಗುಂ ಗುರುಭ್ಯೋ ನಮಃ
ಓಂ ಪರಮತ್ತ್ವಾಯ ನಾರಾಯಣ ಗುರುಭ್ಯೋ ನಮಃ
ಓಂ ವೇದಾಹಿ ಗುರು ದೇವಾಯ ವಿದ್ಮಹೇ
ಪರಂ ಗುರುವೇ ಧೀಮಹಿ
ತನ್ನೋಃ ಗುರುಃ ಪ್ರಚೋದಯಾತ್
ಗುರುಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ
ಗುರುರ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಅರ್ಥ – ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತಾರೆ, ಗುರು ಬ್ರಹ್ಮ, ಸ್ರಷ್ಠಿಕರ್ತನಾದ ಬ್ರಹ್ಮನಿಗೆ ಹೋಲಿಸುತ್ತಾರೆ, ಗುರು ವಿಷ್ಣು, ಸ್ಥಿತಿಕಾರಕ ನಾಗಿರುವ ವಿಷ್ಣುವಿಗೆ ಹೋಲಿಸುತ್ತಾರೆ, ಗುರು ದೇವೋ ಮಹೇಶ್ವರ, ಲಯಕಾರಕನಾದಂತಹ ಶಿವನಿಗೆ ಹೋಲಿಸುತ್ತಾರೆ, ಹಾಗೆಯೇ ಗುರು ಸಾಕ್ಷಾತ್ ಪರಬ್ರಹ್ಮ ಎಂದು ಅಂತ್ಯ ಇಲ್ಲದ ಆದಿ ಬ್ರಹ್ಮನಿಗೆ ಗುರುವನ್ನು ಹೋಲಿಸುತ್ತಾರೆ…!