ನಿಮ್ಮ ಎದುರಿಗೆ ಯಾರಿಗಾದರೂ ಹೃದಯ ಅಪಘಾತವಾದರೆ ಏನು ಮಾಡಬೇಕು, ಹಾಗೂ ಹೃದಯವನ್ನು ಆರೋಗ್ಯವಾಗಿಡಲು ಏನು ಮಾಡಬೇಕು.

ನಮಸ್ತೆ ಸ್ನೇಹಿತರೆ ಈಗಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಗಳಿಂದಾಗಿ ಹೃದಯ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆರೋಗ್ಯವಾಗಿದ್ದ ವ್ಯಕ್ತಿಯು ಕೂಡ ಒಂದೇ ಕ್ಷಣದಲ್ಲಿ ಖುಷಿದು ಬಿದ್ದು ಹೃದಯ ಅಪಘಾತಕ್ಕೆ ತುತ್ತಾಗಿರುವ ಘಟನೆಗಳು ಸಾಲು ಸಾಲಾಗಿ ವರದಿಯಾಗುತ್ತಿದೆ ಇದರ ಬೆನ್ನಲ್ಲಿಯೇ ವಾಕಿಂಗ್ ಮಾಡುತ್ತಿರುವ ಹದಿಹರೆಯದ ಕೆಲವರು ಖುಷಿದು ಬಿದ್ದು ಹೃದಯ ಅಪಘಾತಕ್ಕೆ ತುತ್ತಾಗಿರುವ ಘಟನೆಗಳು ಕೂಡ ನಡೆದಿದೆ.

ಅಧ್ಯಾಯನದ ಪ್ರಕಾರ ಮನುಷ್ಯರ ಈಗಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿದ್ದಾಗಿ ಈ ಪ್ರಕರಣಗಳು ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ ಮಾಧ್ಯಮ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ವರದಿಯಾಗಿರುವಂತೆ ವಾಕಿಂಗ್ ಮಾಡುವಾಗ ಹಾಗೂ ದೇಹದಂಡನೆ ಮಾಡುವಾಗ ಪ್ರತಿಯೊಬ್ಬ ಗಾಧಕ್ಕೆ ತುತ್ತಾಗಿ ಸಾವು ಸಂಭವಿಸಿದ ಘಟನೆಗಳು ಸಾಲುಸಾಲಾಗಿ ವರದಿಯಾಗಿದೆ ಈ ಸಮಸ್ಯೆ 15ರಿಂದ 20 ವರ್ಷದ ಮಕ್ಕಳಲ್ಲಿಯೂ ಕೂಡ ಸಾಮಾನ್ಯವಾಗಿ ಹೋಗಿದೆ.
ಒಟ್ಟಾರೆಯಾಗಿ ಈ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನಪ್ಪಿದವರ ಸಂಖ್ಯೆಯಲ್ಲಿ ಎಲ್ಲಾ ವಯಸ್ಸಿನ ಎಲ್ಲಾ ವರ್ಗದ ಜನರು ಕೂಡ ಇದ್ದಾರೆ ಈ ಲೇಖನದಲ್ಲಿ ಹೃದಯ ಸಂಬಂಧಿ ರೋಗಗಳನ್ನು ಪತ್ತೆ ಹಚ್ಚುವುದು ಹೇಗೆ? ಹಾಗೂ ನಮ್ಮೆದುರಿಗೆ ಯಾರಿಗಾದರೂ ಹೃದಯ ಅಪಘಾತವಾದಾಗ ನಾವು ಏನು ಮಾಡಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಮಾಹಿತಿ ಇಷ್ಟ ಆದರೆ ಶೇರ್ ಮಾಡಿ.

ಹೃದಯಾಘಾತದಹೃದಯಾಘಾತದ

ತೀರ್ವ ಎದೆ ನೋವು
ಈ ಎದೆ ನೋವು ಬಿಗಿಯಾಗಿ ಹಿಡಿದ ಹಾಗೆ ಹಾಗೂ ಒಂದು ರೀತಿಯ ಒತ್ತಡದ ಹಾಗೆಯೂ ಅನಿಸಬಹುದು.

ಉಸಿರಾಟದ ಸಮಸ್ಯೆ ಮತ್ತು ಅತಿಯಾದ ಬೆವರು ಸೋರುವುದು ಹೃದಯಘಾತದ ಆರಂಭಿಕ ಲಕ್ಷಣಗಳಾಗಿವೆ ಎಂದು ಹೇಳಲಾಗುತ್ತೆ.

ಹಾಗೂ ಹೆಚ್ಚಿನವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಹೊಟ್ಟೆಯಲ್ಲಿ ಅನಿಲವು ರಚನೆಯಾಗಿ ಇದರಿಂದ ಎದೆ ನೋವು ಬರುವ ಸಾಧ್ಯತೆಗಳು ಕೂಡ ಇರುತ್ತದೆ ಆದರೆ ಎದೆ ನೋವು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ,

ನಮ್ಮ ಎದುರಿಗೆ ಯಾರಿಗಾದರೂ ರಧಿಯಾಘಾತ ಸಂಭವಿಸಿದಾಗ ಏನು ಮಾಡಬೇಕು.

ಹೌದು ಸ್ನೇಹಿತರೆ, ಸಹಜವಾಗಿ ನಮ್ಮ ಸ್ನೇಹಿತರು ಅಥವಾ ನಮ್ಮ ಸಂಬಂಧಿಕರು ಅಥವಾ ನಮ್ಮ ಕುಟುಂಬದವರು ಯಾರಾದರೂ ಜೊತೆಯಲ್ಲಿ ಇದ್ದಾಗ ಅಂತ ಅವರಿಗೆ ಯಾರಿಗಾದರೂ ಹೃದಯಘಾತವಾದಲ್ಲಿ ಅವರ ಹೃದಯದ ಬಡಿತ ನಿಲ್ಲುತ್ತದೆ ಇದು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ ಏಕೆಂದರೆ ಹೃದಯಘಾತವಾದ ವ್ಯಕ್ತಿಯು ಮೂರ್ತಿ ಹೋಗಿರುತ್ತಾರೆ. ಎರಡರಿಂದ ಮೂರು ನಿಮಿಷದ ಒಳಗೆ ಆ ವ್ಯಕ್ತಿಯನ್ನು ಹಾಗೂ ಆ ವ್ಯಕ್ತಿಯ ಹೃದಯವನ್ನು ಪುನರ್ಜೀವನಗೊಳಿಸುವ ಕಾರ್ಯ ಆಗದಿದ್ದರೆ ವ್ಯಕ್ತಿ ಮರಣ ಸಂಭವಿಸಬಹುದು,

ಹಾಗಾಗಿ ಹೃದಯಾಘಾತ ಆದ ವ್ಯಕ್ತಿಯನ್ನು ಎರಡರಿಂದ ಮೂರು ನಿಮಿಷದ ಒಳಗೆ ಪುನರ್ಜೀವನಗೊಳಿಸುವುದು ಹಾಗೂ ಅವರ ಹೃದಯಕ್ಕೆ ಶಕ್ತಿ ತುಂಬುವುದು ಅವಶ್ಯಕವಾಗಿದೆ ಹಾಗಾದರೆ ಇದಕ್ಕೆ ಏನು ಮಾಡಬೇಕು.

ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವ ಹೃದಯಘಾತವಾದ ವ್ಯಕ್ತಿಗೆ ತಕ್ಷಣವೇ CPR ನೀಡಿ.

ಹೌದು ಸ್ನೇಹಿತರೆ, ನಿಮ್ಮೆದುರಿಗೆ ಹೃದಯಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದರೆ ತಕ್ಷಣ ಅವರ ನಾಡಿಮಿಡಿತವನ್ನು ಗಮನಿಸಿ ಅದಾದ ನಂತರ ನಿಮ್ಮ ಕೈಗಳಿಂದ CPR ನಲ್ಲಿ ಬಹು ಮುಖ್ಯವಾಗಿ ಎರಡು ಕಾರ್ಯಗಳನ್ನು ಮಾಡಲಾಗುತ್ತದೆ ಮೊದಲನೆಯದಾಗಿ ನಿಮ್ಮ ಎರಡು ಕೈಗಳನ್ನು ಬಿಗಿಯಾದ ಮುಷ್ಟಿಯನ್ನು ಮಾಡಿ ಒಂದರ ಒಳಗೆ ಒಂದನ್ನು ಸೇರಿಸಿ ಪ್ರಜ್ಞ ಹೀನ ಸ್ಥಿತಿಯಲ್ಲಿರುವ ವ್ಯಕ್ತಿಯ ಎದೆಯನ್ನು ನಿಧಾನವಾಗಿ ಜೋಡಿಸಿದ ಕೈಗಳಿಂದ ಒಂದು ಇಂಚು ಒಂದು ನಿಮಿಷದಲ್ಲಿ ನೂರು ಬಾರಿ ಒತ್ತಬೇಕಾಗುತ್ತದೆ.

ಎರಡನೆಯ ಹಂತ ವ್ಯಕ್ತಿಯ ಹೃದಯ ಕಾರ್ಯವನ್ನು ನಿಲ್ಲಿಸಿದ್ದರಿಂದ ವ್ಯಕ್ತಿಯು ಉಸಿರಾಟವನ್ನು ಕೂಡ ಸ್ವಲ್ಪ ನಿಲ್ಲಿಸಿರುತ್ತಾರೆ ಆ ಸಂದರ್ಭದಲ್ಲಿ ನಾವು ನಮ್ಮ ಬಾಯಿಂದ ಅವರ ಬಾಯಿಗೆ ಉಸಿರನ್ನು ಪಂಪ್ ಮಾಡಬೇಕಾಗುತ್ತದೆ ಇದರಿಂದ ಹೃದಯ ಪುನರ್ಜೀವನಗೊಳ್ಳುತ್ತದೆ ಹಾಗೂ ವ್ಯಕ್ತಿಯು ಎಚ್ಚರವಾಗುತ್ತಾನೆ.

ಹೃದಯವನ್ನು ಆರೋಗ್ಯವಾಗಿಡಲು ಏನು ಮಾಡಬೇಕು.

ಹೃದಯವನ್ನು ಆರೋಗ್ಯವಾಗಿಡಲು ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಲು ಮೊದಲು ಕೆಟ್ಟ ಕೊಲೆಸ್ಟ್ರಾ ವನ್ನು ಹೋಗಲಾಡಿಸಬೇಕಾಗುತ್ತದೆ ಕೆಟ್ಟ ಕೊಲೆಸ್ಟ್ರಾ ಗಳೆ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ನಾವು ಸೇವಿಸುವ ಕೆಲವು ಆಹಾರವನ್ನು ನಿಯಂತ್ರಿಸಿದರೆ ಕೆಟ್ಟ ಕೊಲೆಸ್ಟ್ರಾ ವನ್ನು ಹೋಗಲಾಡಿಸಬಹುದು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಂದಲೂ ಕೂಡ ದೂರ ಉಳಿಯಬಹುದು..

ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ ಉದಾಹರಣೆ ಕೊಲೆಸ್ಟ್ರಾ ಮಟ್ಟ ಕಡಿಮೆ ಇರುವ ಆಹಾರವನ್ನು ಸೇವಿಸಿದರೆ ಹೃದಯದ ಅನೇಕ ಸಮಸ್ಯೆಗಳು ದೂರವಾಗುತ್ತದೆ.

ಉತ್ತಮವಾದ ಹಣ್ಣು ಮತ್ತು ತರಕಾರಿಗಳು ಆರೋಗ್ಯದ ಸಮತೋಲವನ್ನು ರಕ್ಷಣೆ ಮಾಡಿಕೊಳ್ಳಲು ತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡುವುದರಿಂದ ಹೃದಯ ಸಮಸ್ಯೆಗಳಿಗೆ ಹಾಗೂ ಹೃದಯಕ್ಕೆ ಸಂಚರಿಸುವ ರಕ್ತನಾಳದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು,

ತಾಜಾ ಹಣ್ಣು ಹಾಗೂ ತಾಜಾ ತರಕಾರಿಗಳು ಹಾಗೂ ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ.

ಡೇರಿ ಪದಾರ್ಥಗಳು

ಸ್ನೇಹಿತರೆ ಹಾಲಿನ ಪದಾರ್ಥಗಳನ್ನು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ನಾವು ಸೇವಿಸುತ್ತೇವೆ. ಉದಾಹರಣೆ ಚೀಸ್ ಬಟರ್ ಮೊಸರು ಹಾಗೂ ಇನ್ನಿತರ ಡೈರಿ ಪದಾರ್ಥಗಳನ್ನು ಸೇವಿಸುವಂತಹ ಅಭ್ಯಾಸವೂ ಕೂಡ ಹೆಚ್ಚಿದೆ ಆದರೆ ಅವುಗಳಲ್ಲಿ ಕೊಬ್ಬಿನ ಅಂಶ ಕಮ್ಮಿ ಇರುವ ಹಾಗೂ ಕೊಲೆಸ್ಟ್ರಾಲ್ ಮಟ್ಟವು ಕಮ್ಮಿ ಇರುವ ಆಹಾರವನ್ನ ನಾವು ಆಯ್ಕೆ ಮಾಡಿಕೊಂಡರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ನ ಉತ್ತಮ ಗುಣವನ್ನು ಹಾಲಿನ ಪದಾರ್ಥಗಳು ಒಳಗೊಂಡಿರುತ್ತದೆ.

ಬೀನ್ಸ್ ಕಾಳುಗಳು ಹಾಗೂ ಮಾಂಸಹಾರಗಳು.

ಬೀನ್ಸ್ ಮತ್ತು ಬೇಳೆ ಕಾಳುಗಳು ಅತಿ ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿದೆ ಮತ್ತು ಹೆಚ್ಚಿನ ಪ್ರೋಟೀನ್ ಫೈಬರ್ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ ಮನುಷ್ಯಕಿಂತ ಪ್ರೋಟಿನ್ ನ ಹೆಚ್ಚನ್ನು ಸಮರ್ಥನೆ ಮೂಲವೆಂದು ಕಾಳುಗಳನ್ನು ಪರಿಗಣಿಸಲಾಗಿದೆ.

ಹಾಗೂ ಮೀನು ಮಾಂಸ ಆಹಾರ ಗಳು ಕೆಲವು ಮೀನುಗಳು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ ಹಾಗೂ ಸಂಸ್ಕರಿಸಿದ ಮಾಂಸ ಹಾಗೂ ಮೀನುಗಳ ಸೇವನೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹಾಗಾಗಿ ಸಂಸ್ಕರಣೆ ಮಾಡಿಟ್ಟ ಆಹಾರವನ್ನು ಸೇವಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಸೇವಿಸಿ.

ಹಾಗೂ ಅಡುಗೆಗೆ ಬಳಸುವ ಎಣ್ಣೆ

ಬಹು ಮುಖ್ಯವಾಗಿ ನಮ್ಮ ಆಹಾರ ಸೇವನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಅಡುಗೆ ಎಣ್ಣೆ, ನಾವು ಯಾವ ಗುಣಮಟ್ಟದ ಎಣ್ಣೆಗಳನ್ನು ಉಪಯೋಗಿಸುತ್ತೇವೆ ಹಾಗೂ ಅದರ ಗುಣಮಟ್ಟವೇನು ಅನ್ನೋದನ್ನ ಮೊದಲು ಗಮನಿಸಬೇಕಾಗುತ್ತದೆ ಉತ್ತಮವಾಗಿರುವ ಎಣ್ಣೆಯನ್ನು ಅಡುಗೆಯಲ್ಲಿ ಸೇರಿಸುವುದರಿಂದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಹಾಗೆ ಕಲಬೇರಿಕೆ ಹಾಗೂ ರಾಸಾಯನಿಕ ಮಿಶ್ರಿತ ಎಣ್ಣೆಗಳನ್ನು ಅಡುಗೆಗಳಲ್ಲಿ ಸೇರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹಾಗಾಗಿ ಅಡುಗೆಗೆ ಬಳಸುವ ಎಣ್ಣೆಗಳನ್ನು ಗಮನಿಸಿ ಪರಿಶುದ್ಧವಾದ ಎಣ್ಣೆಗಳನ್ನು ಬಳಸಿ.

ಕೊಬ್ಬಿನ ಅಂಶ ಅತಿ ಹೆಚ್ಚಾಗಿರುವ ಪದಾರ್ಥಗಳನ್ನು ದಯವಿಟ್ಟು ಸೇವಿಸಬೇಡಿ ಹಾಗೂ ನಿಮಗೆ ಯಾವುದೇ ತರದ ಹೃದಯ ಸಂಭಾತ್ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ನೀವು ವೈದ್ಯರನ್ನು ಸಂಪರ್ಕಿಸಿ ನಿಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ವಿವರಿಸಿ.

Leave a Comment

Your email address will not be published. Required fields are marked *

Scroll to Top