ನಮಸ್ತೆ ಸ್ನೇಹಿತರೆ ಇಂದಿನ ಲೇಖನದಲ್ಲಿ ಲೇಬರ್ ಕಾರ್ಡ್ ವಿದ್ಯಾರ್ಥಿವೇತನದ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ.
ಕಾರ್ಮಿಕರಿಗಾಗಿ ಸರಕಾರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ ಉದಾಹರಣೆ. ಕಾರ್ಮಿಕರ ಕಷ್ಟ ನೋವುಗಳಿಗೆ ಸರಕಾರ ಸ್ವಲ್ಪಮಟ್ಟಿಗೆ ಸ್ಪಂದಿಸಲು ಶುರು ಮಾಡಿದೆ ಎಂದು ಹೇಳಬಹುದು.
ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕರಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಇತ್ತೀಚಿನ ದಿನಗಳಲ್ಲಿ ಜಾರಿಗೆ ತಂದಿದೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಕಾರ್ಡನ್ನು ನೀಡಿ ಅದರಿಂದ ಅನೇಕ ಯೋಜನೆಗಳಿಗೆ ಸಹಾಯವಾಗುವ ರೀತಿ ಮಾಡಿದೆ.
ಇಂದಿನ ಈ ಲೇಖನದಲ್ಲಿ ಕಾರ್ಮಿಕ ಕಾರಣ ವಿದ್ಯಾರ್ಥಿವೇತನ 2024 – 25 ನೇ ಸಾಲಿನ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೋಡೋಣ ಈ ವಿದ್ಯಾರ್ಥಿ ವೇತನವನ್ನು ಪಡೆಯುವುದು ಹೇಗೆ ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳೇನು? ಬೇಕಾಗುವ ದಾಖಲೆಗಳೇನು ಅನ್ನುವ ಪೂರ್ಣ ವಿವರದೊಂದಿಗೆ ಈ ಲೇಖನವನ್ನು ನೋಡೋಣ ಹಾಗೂ ಲೇಖನವನ್ನು ಪೂರ್ತಿಯಾಗಿ ಓದಿ ನಿಮಗೆ ಇಷ್ಟವಾದರೆ ಶೇರ್ ಮಾಡಿ.
ಪ್ರಾಥಮಿಕ ಹಾಗೂ ಪದವಿ ಹಾಗೂ ಪದವಿ ಪೂರ್ವ ಹಾಗೂ ವಿವಿಧ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕಾರ್ಮಿಕ ಕಾರ್ಡ್ ನ ವಿದ್ಯಾರ್ಥಿ ವೇತನ ಸಹಾಯವಾಗಲಿದೆ ಇದಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಹಾಗೂ ಕೆಲವು ಸೂಕ್ತ ಮಾಹಿತಿಗಳು ಅಗತ್ಯವಿರುತ್ತದೆ ಈಗ ಅರ್ಜಿಯ ಪೂರ್ಣ ವಿವರವನ್ನು ನೋಡೋಣ.
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ಮಾಹಿತಿಗಳು
ವಿದ್ಯಾರ್ಥಿ ವೇತನದ ಹೆಸರು. | ಲೇಬರ್ ಕಾರ್ಡ್ ವಿದ್ಯಾರ್ಥಿವೇತನ |
ಯಾರಿಗೆ | ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ |
ಈ ವಿದ್ಯಾರ್ಥಿ ವೇತನದ ಮೊತ್ತ | ಪ್ರತಿವರ್ಷ 1,100 ರಿಂದ 11,000 ರೂ ತರೂ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31/01/2024 |
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ಎಂದರೇನು ಹಾಗೂ ಇದು ಯಾರಿಗೆ ಸಿಗಲಿದೆ.?
ಸ್ನೇಹಿತರೆ ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ಇದು ಕರ್ನಾಟಕ ರಾಜ್ಯ ಸರಕಾರ ಕಟ್ಟಡ ಮತ್ತು ಇನ್ನಿತರೆ ಕಾರ್ಮಿಕರ ಮಕ್ಕಳಿಗಾಗಿ ಹಾಗೂ ಅವರಿಗೆ ಶೈಕ್ಷಣಿಕವಾಗಿ ಬೆಂಬಲ ನೀಡಲು ಈ ಯೋಜನೆಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಜಾರಿಗೆ ತಂದಿದೆ.
ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ಈ ಕಾರ್ಯಕ್ರಮವನ್ನು ಅರ್ಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಹಾಯಕ್ಕಾಗಿ ಹಾಗೂ ಶಿಕ್ಷಣದ ಮುಂದಿನ ಕನಸನ್ನು ನನಸಾಗಿಸಿಕೊಳ್ಳಲು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈ ವಿದ್ಯಾರ್ಥಿ ವೇತನ ಪ್ರತಿ ವರ್ಷವೂ ಸುಮಾರು 1,100 ಇಂದ 11000 ವರೆಗೆ ವಾರ್ಷಿಕವಾಗಿ ಕಾರ್ಮಿಕ ಮಂಡಳಿ ನೀಡುತ್ತದೆ.
ಅರ್ಹ ವಿದ್ಯಾರ್ಥಿಗಳು ಬೇಕಾದ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಕರ್ನಾಟಕ ರಾಜ್ಯ ಸರಕಾರದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿರಬೇಕು ಹಾಗೂ ಲೇಬರ್ ಕಾರ್ಡ್ ಪಡೆದಿರಬೇಕು.
- ಹಾಗೂ ಮಂಡಳಿಯ ಅಧಿಸೂಚನೆಯಂತೆ ವಿದ್ಯಾರ್ಥಿಯ ಪೋಷಕರ ಆದಾಯ 35,000 ಕ್ಕಿಂತ ಹೆಚ್ಚಿಗೆ ಇರಬಾರದು.
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಯಲ್ಲಿ ಶೇಕಡ 50ರಷ್ಟು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇಕಡ 45ರಷ್ಟು ಅಂಕೆಗಳನ್ನು ಗಳಿಸಿರಬೇಕು.
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನದ 2024 ಹಾಗೂ 25ನೇ ಸಾಲಿನ ಮೊತ್ತ ವಿವರಣೆ.
- ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 1,100
- 5ನೇ ತರಗತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ 1,250
- 9ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 3,000
- ಹಾಗೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 4,600
- ಪದವಿ ವಿದ್ಯಾರ್ಥಿಗಳಿಗೆ 6,000
- ಡಿಪ್ಲೋಮೋ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ 4,600
- B.e /ಬಿ ಟೆಕ್ ವಿದ್ಯಾರ್ಥಿಗಳಿಗೆ 10,000
- ನಾದುಕೋತಾರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000
- ಬಿ ಎಸ್ ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ. 10,000
- ಬಿ ,ಎಡ್ ವಿದ್ಯಾರ್ಥಿಗಳಿಗೆ 6000
- ವೈದ್ಯಕೀಯ ವಿದ್ಯಾರ್ಥಿಗಳಿಗೆ 11,000
- ಎಲ್ ಎಲ್ ಬಿ ಹಾಗೂ ಎಲ್ಎಲ್ಎಂ ವಿದ್ಯಾರ್ಥಿಗಳಿಗೆ 10,000
- ಡಿ ಎಡ್ ವಿದ್ಯಾರ್ಥಿಗಳಿಗೆ 4,600
- ಪಿ ಎಚ್ ಡಿ ಡಿ ಎಂ ಪಿಲ್ ಹಾಗೂ ಇತರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ 11,000
ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು.
- ಪೋಷಕರ ಉದ್ಯೋಗ ಪ್ರಮಾಣ ಪತ್ರ ಅಥವಾ ಲೇಬರ್ ಕಾರ್ಡ್.
- ವಿದ್ಯಾರ್ಥಿಯ ಶೈಕ್ಷಣಿಕ ವಿವರ ಹಾಗೂ ವೈಯಕ್ತಿಕ ದಾಖಲೆಗಳು.
- ವಿದ್ಯಾರ್ಥಿಯ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆ ಆಗಿರುವುದು.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ.
- ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಪಾಸ್ ಬುಕ್ ಅಥವಾ ಜೆರಾಕ್ಸ್.
- ವಿದ್ಯಾರ್ಥಿಯ ಭಾವಚಿತ್ರ.
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ 2024-25 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಹಿತಿ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2024 ಹಾಗೂ 25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಮಾಹಿತಿಯನ್ನು ನೋಡೋಣ.
- Klwbapps.karnataka.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- ನೊಂದಾವಣಿಯ ಮೇಲೆ ಕ್ಲಿಕ್ ಮಾಡಿ ನಂತರ ತಾತ್ಕಾಲಿಕ ಖಾತೆಯನ್ನು ರಚಿಸಿ ನಿಮ್ಮ ಮೊಬೈಲ್ ಸಂಕೆಯೊಂದಿಗೆ ಪರಿಶೀಲನೆ ನಡೆಸಿ ಹಾಗೂ ಖಾತೆಯ ಪಾಸ್ಪೋರ್ಟ್ ಗಳನ್ನು ರಚಿಸಿ.
- ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಓಟಿಪಿಯನ್ನು ನೆಮ್ಮದಿಸಿ, ವೆರಿಫೈ ಮಾಡಿಕೊಳ್ಳಿ.
- ಈಗ ನೊಂದಾಯಿಸಿದ ಮೊಬೈಲ್ ಸಂಖ್ಯೆ ಹಾಗೂ ರಚಿಸಿದ ಖಾತೆಯ ಪಾಸ್ವರ್ಡ್ ನೊಂದಿಗೆ ಲಾಗಿನ್ ಆಗಿ.
- ನೀವು ಮೊದಲ ಬಾರಿಗೆ ಈ ವೆಬ್ ಸೈಟಿಗೆ ಭೇಟಿ ನೀಡಿದ್ದಾರೆ ಭದ್ರತಾ ದೃಷ್ಟಿಯಿಂದ ಕೆಲವೊಂದು ಮಾಹಿತಿಗಳನ್ನು ಕೇಳಲಾಗುತ್ತದೆ ನೀವು ಅದನ್ನು ರಚಿಸಿ ಹಾಗೂ ಆಯ್ಕೆ ಮಾಡಬೇಕಾಗುತ್ತದೆ.
- ನಂತರ ಪೇಜ್ ಓಪನ್ ಆದ ನಂತರ ಪ್ಲೀಸ್ ಸ್ಕಾಲರ್ಶಿಪ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಅದಾದ ನಂತರ ಕೇಳಿದ ಎಲ್ಲಾ ದಾಖಲೆಗಳನ್ನು ಸರಿಯಾದ ಮಾಹಿತಿಗಳನ್ನು ಅಪ್ಲೋಡ್ ಮಾಡಿ ಹಾಗೂ ಮುಂದಿನ ಹಂತ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸುವ ಮೊದಲು ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಜಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಹಾಗೂ ಸೂಕ್ಷ್ಮವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಇದಿಷ್ಟು ಮಾಹಿತಿ 2024 ಹಾಗು 2025 ನೇ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಗ್ಗೆ ಹಾಗೂ ಇನ್ನಷ್ಟು ಮಾಹಿತಿಗಳನ್ನು ಪಡೆಯಲು ನಿತ್ಯ ಧ್ವನಿ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಗಳನ್ನು ಪಡೆಯಿರಿ ಇದೇ ರೀತಿಯ.