ಅದಾನಿ ಗ್ರೂಪ್ ನಿಂದ ಈ ವಿದ್ಯಾರ್ಥಿಗಳಿಗೆ 50,000 ದಿಂದ 3,50,000 ರೂ ನಮಸ್ತೆ ಸ್ನೇಹಿತರೆ ಈಗಿನ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಹಣದ ಅವಶ್ಯಕತೆ ಬಹು ಮುಖ್ಯವಾಗಿರುತ್ತದೆ ಯಾವುದೇ ಪದವಿ ಅಥವಾ ಯಾವುದೇ ಪದವಿಯಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಬಯಸಿದರೆ ಅವರಿಗೆ ತುಂಬಾ ಹಣದ ಅವಶ್ಯಕತೆ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಹೆಚ್ಚಿನವರು ಬಹು ಸಂಕಷ್ಟದಲ್ಲಿ ಇರುವುದರಿಂದ ಜೀವನದಲ್ಲಿ ಭವಿಷ್ಯನ ರೂಪಿಸಿಕೊಳ್ಳಬೇಕೆಂದು ಕನಸನ್ನು ಕಂಡ ಎಷ್ಟೋ ಜನ ಅವರ ಕನಸುಗಳನ್ನು ಅರ್ಧಕ್ಕೆ ನಿಲ್ಲಿಸಿ ಇನ್ನು ಯಾವುದೋ ಉದ್ಯೋಗವನ್ನು ಹುಡುಕಿಕೊಂಡು ಹೋಗುತ್ತಾರೆ.
ಆದರೆ ಸರಕಾರ ಹಾಗೂ ಇನ್ನಿತರೆ ಖಾಸಗಿ ಸಂಸ್ಥೆಗಳು ಹಾಗೂ NGO ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳಲು ಿಶೇಷವಾದ ಸ್ಕಾಲರ್ಶಿಪ್‌ಗಳನ್ನು ಇತ್ತೀಚಿನ ದಿನಗಳಲ್ಲಿ ನೀಡುತ್ತಿದೆ ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸಿನ ಶಿಕ್ಷಣವನ್ನು ಪಡೆದು ಕನಸಿನ ಉದ್ಯೋಗವನ್ನು ಪಡೆಯುತ್ತಿದ್ದಾರೆ.
ಈ ಲೇಖನದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ವಿಶೇಷವಾದ ವಿದ್ಯಾರ್ಥಿ ವೇತನದ ಬಗ್ಗೆ ನೀಡಲಾಗಿದೆ ದಯವಿಟ್ಟು ಎಲ್ಲರೂ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇದು ನಿಮಗೂ ಸಹಾಯ ಆಗಬಹುದು ಹಾಗೂ ಹಲವು ವಿದ್ಯಾರ್ಥಿಗಳಿಗೆ ಸಹಾಯ ಆಗಬಹುದು.
ಅರ್ಥಶಾಸ್ತ್ರ ,ಕಾನೂನು,CA , JEE,neet,clat,ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕಾಗಿ ಅವರಿಗೆ ಆರ್ಥಿಕ ಸಹಾಯವನ್ನು ನೀಡಲು ಹಾಗೂ ಅರ್ಥಶಾಸ್ತ್ರ ,ಕಾನೂನು,CA ಇನ್ನುಳಿದ ಎಲ್ಲಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಬಗ್ಗೆ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿ ಅದಾನಿ ಜಾನ ಜ್ಯೋತಿ ವಿದ್ಯಾರ್ಥಿ ವೇತನ ಯೋಜನೆ ಸಹಾಯ ಮಾಡುತ್ತಿದೆ ಈ ವಿದ್ಯಾರ್ಥಿ ವೇತನ ಯೋಜನೆಯಿಂದ ವಿದ್ಯಾರ್ಥಿಗಳಿಗೆ 1,80,000 ರೂಪಾಯಿ ತನಕ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಆಸಕ್ತಿ ಇರುವ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಈ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.
ಹೌದು ಸ್ನೇಹಿತರೆ, ಅದಾನಿ ಧ್ಯಾನ ಜ್ಯೋತಿ ವಿದ್ಯಾರ್ಥಿ ವೇತನ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಅರ್ಥಶಾಸ್ತ್ರ ,ಕಾನೂನು,CA JEE,NEET,CLAT,EWS,ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಆಗಬಹುದು ಹಾಗೂ ಇದರಲ್ಲಿ ಇನ್ನೂ ಕೆಲವು ಕೋರ್ಸ್ಗಳು ಕೂಡ ಸೇರಿಕೊಂಡಿದೆ ಈ ಅಧಾನಿಜ್ಞಾನ ಜ್ಯೋತಿ ಸ್ಕಾಲರ್ಶಿಪ್ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿ .
ಯಾರ್ಯಾರಿಗೆ ಹಾಗೂ ಯಾವ ಯಾವ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ದೊರೆಯುತ್ತದೆ.
- ಅರ್ಥಶಾಸ್ತ್ರ ಓದುತ್ತಿರುವ ವಿದ್ಯಾರ್ಥಿಗಳಿಗೆ 50,000 ರೂಪಾಯಿ.
- ಕಾನೂನು ಓದುತ್ತಿರುವ ವಿದ್ಯಾರ್ಥಿಗಳಿಗೆ 1,80,000 ರೂಪಾಯಿ.
- ಸಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ 80,000 ರೂಪಾಯಿ.
- ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 3,50,000 ರೂಪಾಯಿ
- ಇಂಜಿನಿಯರಿಂಗ್ ಅಥವಾ ಇನ್ನುಳಿದ ವಿದ್ಯಾರ್ಥಿಗಳಿಗೆ ವಾರ್ಷಿಕ.2,50,000 ರೂಪಾಯಿ
ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಹಣದಿಂದ ಟ್ಯೂಷನ್ ಅಥವಾ ಇನ್ನಿತರೆ ಶಿಕ್ಷಣಕ್ಕೆ ಸಂಬಂಧಪಟ್ಟ ಖರ್ಚು ವೆಚ್ಚಗಳಿಗೆ ಸರಿ ಹೋಗಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
ಎಲ್ಲಾ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಹೇಗೆ ದಾಖಲೆಗಳನ್ನು ಕೇಳುತ್ತಾರೋ ಹಾಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.
ಬೇಕಾಗುವ ದಾಖಲೆಗಳು
- ಸಿಎ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ರ್‍ಯಾಂಕ್ ಪಡೆದಿರಬೇಕು.
- ಕಾನೂನು ಓದುತ್ತಿರುವ ವಿದ್ಯಾರ್ಥಿಗಳು ಕಾಮನ್ ಲಾ ಎಡಿಷನ್ ಟೆಸ್ಟ್ನಲ್ಲಿ ಟೆಸ್ಟ್ನ ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿ 10,000 ಕ್ಕಿಂತ ಕಡಿಮೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಅರ್ಥಶಾಸ್ತ್ರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 75ರಷ್ಟು ಅಂಕೆಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
- ಗುರುತಿನ ಪುರಾವೆಗಳು ಉದಾಹರಣೆ, ಆಧಾರ್ ಕಾರ್ಡ್ ಮತದಾರರ ಚೀಟಿ ಡ್ರೈವಿಂಗ್ ಲೈಸೆನ್ಸ್ ಪಾನ್ ಕಾರ್ಡ್.
- ಪ್ರಸ್ತುತ ನೀವು ಓದುತ್ತಿರುವ ಕಾಲೇಜು ಅಥವಾ ಇನ್ನಿತರ ಸಂಸ್ಥೆಯ ದಾಖಲಾತಿಯಲ್ಲಿ ನೀಡಿದ ಪುರಾವೆಗಳು ರಶೀದಿ ಶುಲ್ಕ ಅಥವಾ ಪ್ರವೇಶ ಪತ್ರ ಹಾಗೂ ಕಾಲೇಜು ಗುರುತಿನ ಚೀಟಿ.
- ಕುಟುಂಬದ ಆದಾಯ ದಾಖಲೆಗಳು ಕುಟುಂಬದ ಸ್ಯಾಲರಿ ಸ್ಲಿಪ್ ಅಥವಾ ಐಟಿ ರಿಟರ್ನ್ ಫಾರ್ಮ್ ಹಾಗೂ ಆದಾಯ ಪ್ರಮಾಣ ಪತ್ರ.
- ಹಿಂದಿನ ವಿದ್ಯಾಭ್ಯಾಸದ ಅಂಕಪಟ್ಟಿ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಮಾಹಿತಿ.
- ಅರ್ಜಿದಾರರ ಫೋಟೋ.
- 12ನೇ ತರಗತಿಯ ಅಂಕಪಟ್ಟಿ.
- ಪ್ರವೇಶ ಪ್ರಮಾಣ ಪತ್ರ.
- ಹಾಗೂ ಅರ್ಜಿ ಸಲ್ಲಿಸುವಾಗ ಕೇಳಿದ ಇನ್ನಿತರೆಯ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ದಾಖಲೆಗಳು.
ಅದಾನಿ ಜ್ಞಾನಜೋತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.
- ಅದಾನಿ ಧ್ಯಾನ ಜ್ಯೋತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು. https://www.buddy4study.com/page/adani-gyan-jyoti-scholarship ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ತೆರೆಯುವ ಪೇಜ್ ನಲ್ಲಿ ನಿಮ್ಮ ಐಡಿಯಾ ನೋಂದಾಯಿಸಿ ಹಾಗೂ ಹಿಂದೆ ಐಡಿಯನ್ನು ರಚಿಸಿದರೆ ಲಾಗಿನ್ ಆಗಿ.
- ಮುಂದಿನ ಹಂತ ಪೇಜ್ ತೆರೆದ ನಂತರ ಅದಾನಿಧ್ಯ ಸ್ಕಾಲರ್ಶಿಪ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಫೋಟೋಕ್ಕೆ ಹೋಗಿ.
- ನಂತರ ಅಪ್ಲಿಕೇಶನ್ ಹಾಕಲು ಭರ್ತಿ ಮಾಡಿ.
- ಕೇಳಿದ ಎಲ್ಲಾ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸಿ ಅಪ್ಲೋಡ್ ಮಾಡಿ ಹಾಗೂ ನಿಯಮಗಳು ಸರಕುಗಳನ್ನು ಒಪ್ಪಿಕೊಂಡು ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.
ಇದೆಲ್ಲ ಪ್ರಕ್ರಿಯೆ ಪೂರ್ಣವಾದ ನಂತರ ಮತ್ತೊಮ್ಮೆ ನೀವು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ.
ಅದಾನಿ ಜ್ಞಾನಜ್ಯೋತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿಯ ಪೂರ್ಣ ಮಾಹಿತಿಯನ್ನು ಸರಿಯಾಗಿ ಗಮನಿಸಿ ಹಾಗೂ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ಯಾವುದೇ ಒಂದು ದಾಖಲಾತಿ ತಪ್ಪಾದರೂ ನೀವು ಸಲ್ಲಿಸಿದ ಅರ್ಜಿ ವ್ಯರ್ಥವಾಗುತ್ತದೆ ಅದಕ್ಕಾಗಿ ಸೂಕ್ಷ್ಮವಾಗಿ ಗಮನಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ,
ಅದಾನಿ ಜಾನ ಜ್ಯೋತಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಕ್ಟೋಬರ್ 07/2024 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಈ ದಿನಾಂಕ ಮುಗಿದ ಮೇಲೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಸ್ನೇಹಿತರೆ ಈ ವಿದ್ಯಾರ್ಥಿ ವೇತನದ ಸಹಾಯ ಎಲ್ಲರಿಗೂ ಸಿಗುವಂತೆ ಆಗಲಿ ಹಾಗಾಗಿ ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ವಿದ್ಯಾಭ್ಯಾಸದಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳುವ ಗುರಿಯನ್ನು ಇಟ್ಟುಕೊಂಡ ಬಡ ಹಾಗೂ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡಿ.
ಎಷ್ಟು ವಿದ್ಯಾರ್ಥಿಗಳ ಕನಸು ಅವರು ಇಷ್ಟದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ನಂತರ ಅದರಲ್ಲಿ ಸುಂದರ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಆದರೆ ಕೆಲವು ಅಡಚಣೆಗಳಿಂದ ಆ ಕನಸುಗಳು ಕನಸಾಗಿ ಉಳಿಯುತ್ತದೆ ಆದರೆ ಕೆಲವು ಸಂಸ್ಥೆಗಳು ನೀಡುತ್ತಿರುವ ವಿದ್ಯಾರ್ಥಿವೇತನಗಳನ್ನು ಅಂತಹ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಈ ಲೇಖನವೂ ಆದಷ್ಟು ಜನರಿಗೆ ಸಹಾಯವಾಗಲಿ.
ನಿತ್ಯ ಧ್ವನಿ ಎಂದಿಗೂ ನೈಜ ಹಾಗೂ ಶ್ಯತ್ಯ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.