ಇತ್ತೀಚಿನ ದಿನಗಳಲ್ಲಿ ಒತ್ತಡ ಹಾಗೂ ಆಧುನಿಕ ಜೀವನ ಶೈಲಿಯಿಂದ ದೇಹದ ಸ್ಥಿತಿಗತಿಗಳು ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಿದೆ ದೇಹದ ತೂಕ ಹಾಗೂ ದೇಹದ ಬೊಜ್ಜು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚುತ್ತಿದೆ ಆಹಾರ ಪದಾರ್ಥದ ನಿಯಮಗಳು ಹಾಗೂ ವ್ಯಾಯಾಮ ರಹಿತ ಜೀವನಶೈಲಿ ಇದಕ್ಕೆ ಕಾರಣವಾಗಿದೆ ಎಂದು ವೈಜ್ಞಾನಿಕವಾಗಿ ವಿಜ್ಞಾನಿಗಳು ಹೇಳುತ್ತಾರೆ.
ಈಗಿನ ಸ್ಥಿತಿಯಲ್ಲಿ ಜನರನ್ನು ಕಾಡುವ ಒಂದು ದೊಡ್ಡ ಸಮಸ್ಯೆ ಏನೆಂದರೆ ಹೃದಯ ಘಾತ ಹಾಗೂ ಕ್ಯಾನ್ಸರ್ ಈ ಎರಡು ರೋಗಗಳು ಮಾನವರನ್ನು ಅತಿ ಹೆಚ್ಚಾಗಿ ಬಾಧಿಸುತ್ತಿದೆ ಹೃದಯಕ್ಕೆ ಸಂಬಂಧಿಸಿದ ರೋಗಗಳು ಜೀವನದ ನೆಮ್ಮದಿಗಳನ್ನು ಹಾಳುಮಾಡುತ್ತಿದೆ.
ಹೃದಯಾಘಾತ ಕ್ಯಾನ್ಸರ್ ಹಾಗೂ ಇನ್ನಿತರ ರೋಗಗಳು ಎಲ್ಲದಕ್ಕೂ ಕಾರಣವಾಗುವುದೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಈ ಕೊಲೆಸ್ಟ್ರಾಲ್ ಅನ್ನುವಂತದ್ದು ದೇಹದ ಅಧಿಕ ಬೊಜ್ಜು ಹಾಗೂ ಆಹಾರ ಸೇವನೆಯಿಂದ ಹೆಚ್ಚುತ್ತದೆ ಈ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರದಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಈ ಲೇಖನದಲ್ಲಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ವಿಧಾನಗಳು ಹಾಗೂ ಯಾವ ರೀತಿ ಕಡಿಮೆ ಮಾಡಬಹುದು ಅನ್ನುವಂತಹ ಮಾಹಿತಿಗಳನ್ನು ನೋಡೋಣ ಮಾಹಿತಿಗಾಗಿ ಪೂರ್ಣ ಲೇಖನವನ್ನು ಸಂಪೂರ್ಣವಾಗಿ ಓದಿ.
ಕೊಲೆಸ್ಟ್ರಾಲ್ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಂತೆ ಮಾನವನ ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಹೆಚ್ಚುತ್ತಿದೆ ಉದಾಹರಣೆ ಹೊರಗಿನಿಂದ ತಿನ್ನುವ ತಿಂಡಿಗಳು ಹಾಗೂ ಹೊರಗಡೆಯ ಆಹಾರಗಳು ಹಾಗೂ ರಾಸಾಯನಿಕ ಮಿಶ್ರಿತ ಕೆಲವು ಪದಾರ್ಥಗಳು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಸೇವನೆ ಮಾಡುತ್ತೇವೆ.
ನಮಗಿದು ಹಾನಿಕಾರಕ ಪದಾರ್ಥಗಳು ಆಹಾರಗಳು ಎಂದು ಗೊತ್ತಿದ್ದರೂ ನಾವು ಅದನ್ನ ಅತಿ ಹೆಚ್ಚಾಗಿ ಸೇವನೆ ಮಾಡುತ್ತೇವೆ ಈ ರೀತಿ ಆಹಾರಗಳನ್ನು ನಾವು ಸೇವನೆ ಮಾಡುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ತಾನಾಗಿಯೇ ಹೆಚ್ಚಾಗುತ್ತದೆ.
ದೇಹದಲ್ಲಿನ ಈ ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ.
ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದ ಪಾರ್ಶವಾಯು, ಹೃದ್ರೋಗ ಹಾಗೂ ಇನ್ನಿತರೆ ಅಪಾಯವನ್ನು ಉಂಟುಮಾಡುವ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಡಾಕ್ಟರ್ ಸಲಹೆ ಪ್ರಕಾರ ಶೇಕಡಾ 15 ರಿಂದ 20 ರಷ್ಟು ನಗರ ಪ್ರದೇಶದಲ್ಲಿ ವಾಸಿಸುವವರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದೆ.
ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನಾವು ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಕೆಲವೊಂದು ವ್ಯತ್ಯಾಸಗಳನ್ನು ಮಾಡಬೇಕಾಗುತ್ತದೆ ಹಾಗೂ ಕೊಬ್ಬಿನ ಅಂಶ ಇರುವ ಪದಾರ್ಥಗಳನ್ನು ಅತಿಯಾಗಿ ಸೇವಿಸಬಾರದು.
ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಏನು ಮಾಡಬೇಕು ಹಾಗೂ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಕಡಿಮೆಯಾಗುತ್ತದೆ.
ಚಿಯಾ ಬೀಜಗಳು
ಸ್ನೇಹಿತರೆ ಚಿಯಾ ಬೀಜಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು ಚಿಯಾಬೀಜ ತನ್ನಲ್ಲಿ ಅನೇಕ ಆರೋಗ್ಯ ಗುಣಗಳನ್ನು ಹೊಂದಿದೆ ಚಿಯಾಬೀಜ ನೀರಿನಲ್ಲಿ ನೆನೆಸಿ ಕೊಡುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಇದರಲ ಒಮೆಗಾ-3 ಫೈಬರ್ ಮತ್ತು ಇನ್ನಿತರೆ ರೋಗನಿರೋಧಕ ಶಕ್ತಿಗಳನ್ನು ಹೊಂದಿದೆ.
ಚಿಯಾ ಬೀಜಗಳು ಫೈಬರ್ ನೀರುಗಳನ್ನು ಹೀರಿಕೊಳ್ಳುತ್ತದೆ ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೀರಿಕೊಂಡು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆದಷ್ಟು ಸಹಾಯ ಮಾಡುತ್ತದೆ.
ಪ್ರತಿದಿನ ರಾತ್ರಿ ಒಂದು ಚಮಚ ಚಿಯಾಬೀಜ ಹಾಗೂ ಅದಕ್ಕೆ ನೀರನ್ನು ಹಾಕಿ ಇಡಬೇಕು ಬೆಳ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದನ್ನು ಹಾಗೆಯೇ ಕುಡಿಯಬೇಕು.
ಫೈಬರ್ ಅಂಶ ಇರುವ ಆಹಾರವನ್ನು ಸೇವಿಸಿ
ಹೌದು ಸ್ನೇಹಿತರೆ ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಹೆಚ್ಚು ನಾರಣ ಅಂಶ ಇರುವ ಆಹಾರಗಳನ್ನು ಸೇವಿಸೇವಿಸಬೇಕು ಈ ನಾರನಾಂಶದಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಆದಷ್ಟು ಸಹಾಯವಾಗುತ್ತದೆ.
ಉದಾಹರಣೆ ಹಣ್ಣು ಉತ್ತಮ ತರಕಾರಿಗಳು ದ್ವಿದಳ ಧಾನ್ಯ ಹಾಗೂ ಮಶ್ರೂಮ್.
ಬೀಜ ಧಾನ್ಯಗಳು
ಬಾದಾಮಿ ಅಗಸೆ ಬೀಜ ಮತ್ತು ಇನ್ನಿತರೆ ಬೀಜಗಳು ದೇಹದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಗಳು ದೂರವಾಗುತ್ತದೆ ಪ್ರತಿದಿನ ಬೀಜಗಳನ್ನು ಸೇವಿಸುವುದರಿಂದ ಕೊಬ್ಬಿನ ಅಂಶಗಳು ಕಮ್ಮಿ ಆಗುತ್ತದೆ ನಿಜ ಆದರೆ ಅತಿಯಾಗಿ ಸೇವಿಸಬೇಡಿ.
ವ್ಯಾಯಾಮ
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಾವು ಆಫೀಸ್ ಹಾಗೂ ಇನ್ನಿತರ ಸುಲಭದಾಯಕ ಕೆಲಸಗಳನ್ನು ಮಾಡುವುದರಿಂದ ದೇಹ ಅತಿಯಾಗಿ ಶ್ರಮಿಸುವುದಿಲ್ಲ ಇದರಿಂದ ದೇಹದಲ್ಲಿ ಬೊಜ್ಜಿನ ಅಂಶಗಳು ಹೆಚ್ಚಾಗುತ್ತದೆ ಹಾಗಾಗಿ ಈ ಬೊಜ್ಜುನ ಅಂಶಗಳಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ.
ಮಾನವನ ದೇಹದಿಂದ ಬೆವರು ಹೊರಗೆ ಹೋಗಲೇಬೇಕು ಅದು ಅಧಿಕವಾಗಿ ಅಲ್ಲ ಸಾಧಾರಣ ಮಟ್ಟಿಗೆ ದೇಹಕ್ಕೆ ಆಯಾಸವಾಗಿ ಬೆವರು ಹೊರಗೆ ಹೋಗಬೇಕು ಇದು ಈಗಿನ ಕಾಲದಲ್ಲಿ ಅತಿಯಾಗಿ ಹೋಗದ ಕಾರಣ ಅನೇಕ ಸಮಸ್ಯೆಗಳು ಕಾಡುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ದಿನನಿತ್ಯವು ದೇಹದಣಿಸಬೇಕು ಉದಾಹರಣೆ ವ್ಯಯಮ ಯೋಗ ಸೈಕಲಿಂಗ್ ವಾಕಿಂಗ್ ಅಥವಾ ಇನ್ನು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಕೆಲವು ಕೆಲಸಗಳು ದಿನದಲ್ಲಿ 30 ನಿಮಿಷವಾದರೂ ಈ ದೈಹಿಕ ಚಟುವಟಿಕೆಗಳನ್ನು ನಾವು ಮಾಡಿದರೆ ಕೊಲೆಸ್ಟ್ರಾಲ್ ಮಟ್ಟವನ್ನು ಆದಷ್ಟು ಕಡಿಮೆ ಮಾಡಬಹುದು ದೇಹದಣಿದಷ್ಟು ಕೆಲವು ಆರೋಗ್ಯ ಸಮಸ್ಯೆಗಳು ನಮ್ಮಿಂದ ದೂರ ಉಳಿಯುತ್ತದೆ.
ಹಸಿರು ತರಕಾರಿಗಳನ್ನು ಸೇವನೆ ಮಾಡಿ.
ಒಂದು ಅಧ್ಯಯನದ ಪ್ರಕಾರ ತರಕಾರಿ ಹಾಗೂ ಹಸಿರು ತರಕಾರಿಗಳನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ದೈಹಿಕ ಲಾಭಗಳು ಸಿಗುತ್ತದೆ ಹಸಿರು ತರಕಾರಿಗಳಲ್ಲಿ ಲೂಟಿನ್ ಮತ್ತು ಇನ್ನಿತರೆ ಅಂಶಗಳನ್ನು ಈ ಹಸಿರು ತರಕಾರಿಗಳು ಹೊಂದಿರುತ್ತವೆ, ಪಾಲಕ್ ನುಗ್ಗೆ ಸೊಪ್ಪು ಹಾಗೂ ಇನ್ನಿತರೆ ಹಸಿರು ಸೊಪ್ಪುಗಳು ಹಸಿರು ತರಕಾರಿಗಳು ಕೊಲೆಸ್ಟ್ರಾಲ್ ಮಟ್ಟವನ್ನು ಆದಷ್ಟು ಕಡಿಮೆ ಮಾಡಲು ಸಹಕರಿಸುತ್ತದೆ.
ಅವಕಾಡೂ ಅಥವಾ ಬಟರ್ ಫ್ರೂಟ್.
ಬಟರ್ ಫ್ರೂಟ್ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ ಈ ಹಣ್ಣು ರುಚಿಯಾಗಿ ಇರೋದಿಲ್ಲ ಆದರೆ ಈ ಹಣ್ಣನ್ನು ಜ್ಯೂಸ್ ಅಥವಾ ಮಿಲ್ಕ್ ಶೇಕ್ ಮಾಡಿ ಕುಡಿದರೆ ಇದರ ರುಚಿ ಐಸ್ ಕ್ರೀಮ್ ಕೂಡ ಇಲ್ಲ ಅಷ್ಟೊಂದು ರುಚಿಕರವಾಗಿ ಈ ಹಣ್ಣಿನ ಜ್ಯೂಸ್ ಹಾಗೂ ಮಿಲ್ಕ್ ಶೇಕ್ ಇರುತ್ತದೆ ಹಾಗೆ ಇದು ಬರಿ ರುಚಿಗೆ ಮಾತ್ರವಲ್ಲದೆ ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಕೂಡ ತೊಡೆದು ಹಾಕುತ್ತದೆ ಬಟರ್ ಫ್ರೂಟ್ ನಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನ ಅಂಶವನ್ನು ಹೊಂದಿರುವ ಏಕೈಕ ಹಣ್ಣು ಅಂದರೆ ಅದು ಬಟರ್ ಫ್ರೂಟ್ ಈ ಹಣ್ಣು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ಅಪಾಯವನ್ನು ಕಡಿಮೆ ಮಾಡುತ್ತದೆ.
ನಿಂಬೆ ಕಿತ್ತಳೆ ಮುಸುಂಬಿ ಹಣ್ಣುಗಳು
ನಿಂಬೆಹಣ್ಣಿನ ಮಹತ್ವ ನಮಗೆಲ್ಲರಿಗೂ ಸಹಜವಾಗಿ ತಿಳಿದಿದೆ ಹಾಗೆ ಲಿಂಬಿ ಹಣ್ಣಿನಲ್ಲಿ ಅನೇಕ ಗುಣಗಳು ಇರುವುದರಿಂದ ಕೆಲವು ರೋಗಗಳನ್ನು ನಿಂಬೆಹಣ್ಣು ದೂರ ಮಾಡುತ್ತದೆ ಹಾಗೂ ನಿಂಬೆರಸ ವಿಶೇಷವಾಗಿ ಕಿತ್ತಳೆ ಮುಸುಂಬಿ ಹಾಗೂ ನಿಂಬೆ ಈ ಎಲ್ಲಾ ಹಣ್ಣುಗಳು ಸೇವನೆ ಮಾಡುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ದೂರಮಾಡುತ್ತದೆ ಹಾಗೂ ದೈಹಿಕವಾಗಿ ಕೆಲವು ಸತ್ಯ ಹಾಗೂ ಚೈತನ್ಯವನ್ನು ತುಂಬುತ್ತದೆ.