
ಬಿಸಿಲಿನಿಂದ ಕಂಗಾಲಾದ ಬೆಂಗಳೂರಿನ ಜನರಿಗೆ ವರ್ಣದೇವನ ಕೃಪೆಯಾಗಿದೆ.
ರಾಜ್ಯ ಅಷ್ಟೇ ಅಲ್ಲ ದೇಶಾದ್ಯಂತ ಬಿಸಿಲಿನಿಂದ ಜನರು ಕಂಗಾಲಾಗಿ ಹೋಗಿದ್ದಾರೆ ದಿನೇ ದಿನೇ ಹೆಚ್ಚಾಗುತ್ತಿರುವ ಸೂರ್ಯನ ಶಾಖಕ್ಕೆ ಮನುಷ್ಯರು ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳು ಕೂಡ ಕಂಗಾಲಾಗಿ ಹೋಗಿದ್ದಾವೆ..!
ಈ ಬೇಸಿಗೆ ಮುಗಿಯುವುದು ಇನ್ನು ತಿಂಗಳು ಇದೆ ಕೊಳ ಕೆರೆ ನದಿ ಎಲ್ಲೂ ಕೂಡ ಬತ್ತಿ ಹೋಗುತ್ತಿದೆ ನೀರಿನ ಆಹಾಕಾರ ಉಂಟಾಗಿದೆ ಅಂತರ್ಜಲ ಮಟ್ಟವು ಕೂಡ ಕುಸಿದು ಹೋಗಿದೆ, ಒಂದು ಕಡೆ ವರುಣದೇವ ಯಾವಾಗಪ್ಪ ನಿನ್ನ ಕೃಪೆ ಎಂದು ಕಾಯುತ್ತಿದ್ದ ಬೆಂಗಳೂರಿನ ಜನರಿಗೆ ಇಂದು ವರುಣದೇವ ಖುಷಿ ಕೊಟ್ಟಿದ್ದಾನೆ.
ಹೌದು ಬೆಂಗಳೂರಿನಲ್ಲಿ ಇಂದು ಸಾಧಾರಣ ಮಳೆಯಾಗಿದ್ದು ಜನರ ಮುಖದಲ್ಲಿ ಖುಷಿ ತಂದಿದೆ..!
ಇನ್ನು ಎರಡು ದಿನ ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಹಾಗೂ ಮೇ 6 ಕ್ಕೆ ಗುಡುಗು ಸಹಿತ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ..!