
ಬೆಳ್ತಂಗಡಿ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಹಾಗೂ ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ…!
ಅವರಿಗೆ 79 ವರ್ಷ ವಯಸ್ಸಾಗಿತ್ತು…!!
ಕೆಲದಿನಗಳಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿಸಲಾಗಿತ್ತು…!
ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ…!!
ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ…!
ವಸಂತ ಬಂಗೇರ ಜೀವನದ ಕಿರು ಪರಿಚಯ
ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15 ರಂದು ಜನನ…!
1983 – 2018 ರ ವರೆಗೆ ಸೋಲು ಗೆಲುವಿನ ಪಯಣ
1983ರಲ್ಲಿ ಬಿ ಎಸ್ ಯಡಿಯೂರಪ್ಪನವರ ಜೊತೆ ವಿಧಾನಸಭೆಗೆ ಪ್ರವೇಶಿಸಿ ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲದ ಬಾವುಟವನ್ನು ಹಾರಿಸಿದ್ದ ನಾಯಕ…!
1985ರಲ್ಲೂ ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದರು…! ವಿಶೇಷವೆಂದರೆ ಈ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿತ್ತು…!! ಅವರಲ್ಲಿ ಒಬ್ಬರು ಬೆಳ್ತಂಗಡಿಯ ವಸಂತ ಬಂಗೇರರಾದರೆ, ಇನ್ನೊಬ್ಬರು ಶಿಕಾರಿಪುರದ ಬಿಎಸ್ ಯಡಿಯೂರಪ್ಪ…!
1989 ರಲ್ಲಿ ಬಿಜೆಪಿಗೆ ಗುಡ್ ಬೈ, ಪಕ್ಷೇತರರಾಗಿ ಸ್ಪರ್ಧಿಸಿ ಸೋಲು…!!
1994ರಲ್ಲಿ ಜನತಾದಳಕ್ಕೆ ಸೇರ್ಪಡೆ, ತನ್ನ ಸ್ವಂತ ತಮ್ಮ ಬಿಜೆಪಿ ಅಭ್ಯರ್ಥಿ ಪ್ರಭಾಕರ್ ಬಂಗೇರ ವಿರುದ್ಧ ಜಯ…!
2008 ರಲ್ಲಿ ಕಾಂಗ್ರೆಸ್ ಸೇರ್ಪಡೆ
2008 ಮತ್ತು 2013 ರ ಚುನಾವಣೆಯಲ್ಲಿ ಗೆಲುವು…!!
2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ವಿರುದ್ಧ ಸೋಲು…!
2023 ರಲ್ಲಿ ಪಕ್ಷ ಟಿಕೆಟ್ ನೀಡಿರಲಿಲ್ಲ…!!
ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನ ನೇರ ನಿಷ್ಠುರವಾಗಿಯೇ ಬದುಕಿದವರು ವಸಂತ ಬಂಗೇರ, ಐದು ಬಾರಿ ಶಾಸಕರಾಗಿದ್ದರೂ ಎಂದೂ ಮಂತ್ರಿಗಿರಿಗೆ ಲಾಬಿ ನಡೆಸಿದವರಲ್ಲ…!
ಅಂತಹ ಮೇರು, ಹಿರಿಯ ನಾಯಕ ವಸಂತ ಬಂಗೇರ ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ…!!
ಅವರು ಪತ್ನಿ ಮಕ್ಕಳು, ಮಾಜಿ ಶಾಸಕ ಕೆ ಪ್ರಭಾಕರ್ ಬಂಗೇರ ಸೇರಿದಂತೆ ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ…!