
ಹುಬ್ಬಳ್ಳಿ – ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಮಾನ್ಯ ಗೃಹ ಸಚಿವರಾದ ಜಿ ಪರಮೇಶ್ವರ್ ಅವರು, ಇದು ಲವ್ ಜಿಹಾದ್ ಅಲ್ಲ ಲವ್ ಕೇಸ್ ಇಬ್ಬರು ಪ್ರೀತಿಸುತ್ತಿದ್ದರು ಪ್ರೀತಿಯಿಂದ ದೂರ ಆಗಿದ್ದಕ್ಕೆ ಹತ್ಯೆ ನಡೆದಿದೆ ಎಂದು ಗೃಹ ಸಚಿವರು ಹೇಳಿಕೆಯನ್ನು ಕೊಟ್ಟಿದ್ದಾರೆ…!!
ಗೃಹ ಸಚಿವರ ಈ ಹೇಳಿಕೆಗೆ ಆಕ್ರೋಶಗೊಂಡ ನೇಹಾ ತಂದೆ ನನ್ನ ಮಗಳು ತಪ್ಪು ಮಾಡಿಲ್ಲ ಹಾಗೂ ಲವ್ ಕೂಡ ಮಾಡಿಲ್ಲ,
ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ಆರೋಪಿ ಫಯಾಜ್ ಲವ್ ಮಾಡು ಎಂದು ಪೀಡಿಸುತ್ತಿದ್ದ ನನ್ನ ಮಗಳು ಪ್ರೀತಿಯನ್ನು ನಿರಾಕರಿಸಿದಳು ಇದೇ ಕಾರಣಕ್ಕೆ ನಿನ್ನೆ ಚಾಕು ಇರಿದು ಹತ್ಯೆ ಮಾಡಿದ್ದಾನೆ ಆದರೆ ಇದು ಒಬ್ಬ ಮಾಡಿರುವಂಥದ್ದು ಅಲ್ಲ ಇನ್ನು ನಾಲ್ಕು ಜನ ಇದ್ದಾರೆ ಇದು ಲವ್ ಜಿಹಾದ್,
ನನ್ನ ಮಗಳ ಮೇಲೆ ಇಲ್ಲದ ಆರೋಪ ಮಾಡಬೇಡಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಅನ್ಯಾಯ ಆದಾಗ ಈ ರೀತಿ ಹೇಳುತ್ತೀರಾ ಅಂದರೆ ಇಂಥ ಗೃಹ ಸಚಿವರು ನಮಗೆ ಬೇಕಾ ಎಂದು ಹೇಳಿದ್ದಾರೆ…!
ಗ್ರಹ ಸಚಿವರ ಈ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗ್ತಾ ಇದೆ…!!
ಹಾಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಇದು ವೈಯಕ್ತಿಕ ಕಾರಣಕ್ಕೆ ಆಗಿರುವಂತಹ ಮರ್ಡರ್ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ರೋಶಗೊಂಡ ನೇಹಾ ತಂದೆ ಏನು ವೈಯಕ್ತಿಕ ಕಾರಣಗಳಿಗೋಸ್ಕರ ಆಗಿದೆ ಏನು ವೈಯಕ್ತಿಕ ಅವರೇನು ನಮ್ಮ ಸಂಬಂಧಿಯ ಇಲ್ಲ ಅವರ ಮಧ್ಯೆ ಏನಾದರೂ ಅಂಡರ್ಸ್ಟ್ಯಾಂಡಿಂಗ್ ಇತ್ತ ಆತರ ಇದ್ದಿದ್ರೆ ಆಕೆ ಹತ್ಯೆ ಯಾಕೆ ಆಯ್ತು ಯಾಕೆ ಈ ರೀತಿ ಹೇಳಿಕೆಗಳನ್ನು ಕೊಟ್ಟು ನನ್ನ ಮನೆತನದ ಮರ್ಯಾದೆಯನ್ನು ತೆಗೆಯುತ್ತಿದ್ದೀರಾ ನಾನು ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶವನ್ನ ಹೊರ ಹಾಕಿದ್ದಾರೆ