
ವಾರಣಾಸಿ : ವಾರಣಾಸಿ ಎಂದರೆ ಕಾಶಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸನಾತನ ಹಿಂದೂ ಧರ್ಮದ ಅದೆಷ್ಟೋ ಪುರಾಣಗಳಲ್ಲಿ ಕಾಶಿಪುರ ಮಹತ್ವ ಹಾಗೂ ಉಲ್ಲೇಖಗಳಿವೆ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಪುಣ್ಯಪ್ರಾಪ್ತಿ ಮೋಕ್ಷ ಮಾರ್ಗ ಎನ್ನುವಂತ ಉಲ್ಲೇಖಗಳು ಕೂಡ ಇವೆ.
ಒಂದು ಕಾಲದಲ್ಲಿ ಕಾಶಿ ವಿಶ್ವನಾಥನ ದರುಶನ ಮಾಡಲು ಗಲ್ಲಿ ಗಲ್ಲಿಗಳಲ್ಲಿ ನಡೆದು ಮಂದಿರವನ್ನ ಹುಡುಕಿ ದರುಶನ ಮಾಡುವ ಒಂದು ಸ್ಥಿತಿ ಇದ್ದಿದ್ದು ಆದರೆ 2014ರ ನಂತರ ಕಾಸಿ ಕ್ಷೇತ್ರದ ಅದ್ಭುತವಾಗಿ ಬದಲಾಗಿದೆ.
ಕಾಶಿ ಕ್ಷೇತ್ರಕ್ಕೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಎಲ್ಲಿಲ್ಲದ ನಂಟು 2014ರಲ್ಲಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ದೊಡ್ಡ ಮಟ್ಟದಲ್ಲಿ ಗೆಲುವನ್ನು ಸಾಧಿಸಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ.
ನರೇಂದ್ರ ಮೋದಿಯವರು ವಾರಣಾಸಿಯ ಸಂಸದರಾದ ನಂತರ ಕಾಸಿ ಕ್ಷೇತ್ರ ತುಂಬಾ ಬದಲಾವಣೆ ಕಂಡಿದೆ ಕಾಸಿ ಕಾರಿಡಾರ್ ಅನ್ನುವಂತಹ ಯೋಜನೆ ಮುಖಾಂತರ ಗಂಗೆಯಲ್ಲಿ ನಿಂತರೆ ಕಾಸಿ ವಿಶ್ವನಾಥ ಕಾಣುವ ಹಾಗೆ ಅದ್ಭುತ ಅಭಿವೃದ್ಧಿಯನ್ನು ಮಾಡುತ್ತಾರೆ ಹಾಗೆ ಗಂಗೆಯನ್ನ ಸ್ವಚ್ಛಗೊಳಿಸುತ್ತಾರೆ ನರೇಂದ್ರ ಮೋದಿಯವರ ಅವರ ಅನೇಕ ಯೋಜನೆಗಳು ಕಾಸಿ ಕ್ಷೇತ್ರದ ಇಂದಿನ ಬದಲಾವಣೆಗೆ ಕಾರಣವಾಗಿದೆ.
2014ರಲ್ಲಿ ಹಾಗೂ 2019ರಲ್ಲಿ ನರೇಂದ್ರ ಮೋದಿಯವರು ಈ ಕ್ಷೇತ್ರದಲ್ಲಿ ಅದ್ಭುತ ಗೆಲುವನ್ನ ಸಾಧಿಸಿದ್ದರು ಇದೀಗ ನಮೋ ಮೂರನೆಯ ಬಾರಿ ವಾರಣಾಸಿಯಲ್ಲಿ ಸ್ಪರ್ಧಿಸಲಿದ್ದಾರೆ.
ನಾಳೆ ಮೇ 14ರಂದು ನರೇಂದ್ರ ಮೋದಿಯವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಶಿ, ವಿಶ್ವನಾಥನಿಗೆ ಪೂಜಿ ಸಲ್ಲಿಸಿ ನಂತರ ಕಾಶಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ನಮೋ ರಸ್ತೆ ಉದ್ದಕ್ಕೂ ಜನ ಸಾಗರ ನಮೋ ಮೇಲೆ ಹೂವಿನ ಮಳೆ ಸುರಿಸಿದ ಕಾಶಿಯ ಜನರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾತ್ ಕೊಟ್ಟರು