
ಪುರಿ ಜಗನ್ನಾಥ ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್ಧಾಮ ಕ್ಷೇತ್ರಗಳಲ್ಲೊಂದು. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದಲ್ಲಿ ಇಂದಿಗೂ ನಡೆಯುವ ಅಚ್ಚರಿ ಸಂಗತಿಗಳು ವೈಜ್ಞಾನಿಕ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿದೆ.
ಶ್ರೀ ಕೃಷ್ಣನು ದೇಹವನ್ನು ತೊರೆದಾಗ,ಅವರ ಅಂತಿಮ ಸಂಸ್ಕಾರ ಮಾಡಲಾಯಿತು,ಅವರ ಇಡೀ ದೇಹವು ಪಂಚಭೂತಗಳಲ್ಲಿ ಬೆರೆತುಹೋಯಿತು, ಆದರೆ ಅವರ ಹೃದಯವು ಸಾಮಾನ್ಯ ಮನುಷ್ಯನಂತೆ ಬಡಿಯುತ್ತಿತ್ತಂತೆ ಮತ್ತು ಅವರ ಹೃದಯವು ಸಂಪೂರ್ಣವಾಗಿ ಸುರಕ್ಷಿತವಾಗಿತ್ತಂತೆ ಮತ್ತು ಇಂದಿಗೂ ಸುರಕ್ಷಿತವಾಗಿದೆ, ಜಗನ್ನಾಥನು ಮರದ ವಿಗ್ರಹದೊಳಗೆ ನೆಲೆಸಿದ್ದಾನೆ ಮತ್ತು ಅದೇ ರೀತಿಯಲ್ಲಿ ಅವರ ಹೃದಯವು ಬಡಿತವನ್ನು ಕೇಳಿಬರುತ್ತದೆ..ಈ ವಿಷಯ ಕೆಲವರಿಗೆ ಮಾತ್ರ ತಿಳಿದಿದ.
ಇಂತಹ ವಿಶೇಷ ದೇವಾಲಯ ವಾದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದೆ.
ಇನ್ನು ರತ್ನಬಂಡಾರವನ್ನ ಸರ್ಪಗಳು ಸಂರಕ್ಷಣೆ ಮಾಡುತ್ತಿದೆ ಎಂದು ಹೇಳಲಾಗುತ್ತದೆ ಆದರೆ ದೇವಸ್ಥಾನದ ಸಮಿತಿ ಸದಸ್ಯರು ಹೇಳುವ ಪ್ರಕಾರ ಆ ರೀತಿಯ ಇಲ್ಲ ಎಂದು ಹೇಳುತ್ತಿದ್ದಾರೆ.
ಮಧ್ಯಾಹ್ನ 1:28ರ ಶುಭ ಲಗ್ನದಲ್ಲಿ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ. ಬಳಿಕ ಅಲ್ಲಿದ್ದ ವಿಶೇಷ ಬಾಕ್ಸ್ಗಳನ್ನು ದೇಗುಲಕ್ಕೆ ತರಲಾಯಿತು. ಅದರ ಪೂಜ್ಯ ಭಂಡಾರವನ್ನು ಪುನಃ ತೆರೆಯಲು ದೇವಾಲಯವನ್ನು ಪ್ರವೇಶಿಸಿದ 11 ಜನರಲ್ಲಿ ಒರಿಸ್ಸಾದ ಮಾಜಿ ಎಚ್ಸಿ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಾಲಯದ ಆಡಳಿತ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ರಾಜನ ಪ್ರತಿನಿಧಿ ಸೇರಿದ್ದಾರೆ.
ಈ ಹಿಂದೆ 1978ರಲ್ಲಿ ಆಗಿನ ಒಡಿಶಾದ ಗವರ್ನರ್ ಬಿ.ಡಿ.ಶರ್ಮಾ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ಕೊನೆಯದಾಗಿ ರತ್ನ ಭಂಡಾರದ ಬಾಗಿಲು ತೆರೆದಿದ್ದರು ಅದಾದ ನಂತರ ಮತ್ತೆ ರತ್ನ ಬಂಡಾರವನ್ನ ಓಪನ್ ಮಾಡಿರಲಿಲ್ಲ .
2018ರಲ್ಲಿ 16 ಜನರ ಗುಂಪು ರತ್ನ ಭಂಡಾರವನ್ನು ಪರಿಶೀಲಿಸಲು ಪ್ರಯತ್ನಿಸಿತು. ಆದರೆ ಭಿತರ ಭಂಡಾರದ ಕೀಗಳ ಕೊರತೆಯಿಂದಾಗಿ ಆ ಪ್ರಯತ್ನ ವಿಫಲವಾಯಿತು.
ರತ್ನಬಂಡಾರದ ರಹಸ್ಯ ಕೋಣೆಯ ಮೂಲ ಬೀಗದ ಕೈ ಇಲ್ಲದ ಕಾರಣ ಪುರಿ ಜಿಲ್ಲಾಡಳಿತದ ಬಳಿಯಿದ್ದ ನಕಲಿ ಕೀ ಬಳಸಿ ಖಜಾನೆ ತೆರೆಯಲಾಗಿದೆ. ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ವೈದ್ಯಕೀಯ ತಂಡ ಮತ್ತು ಉರಗ ತಜ್ಞರ ತಂಡದ ಸದಸ್ಯರು ಸಹ ಸ್ಥಳದಲ್ಲಿ ಇದ್ದಿದ್ದರು.
ರತ್ನ ಭಂಡಾರದ ಬಾಗಿಲು ತೆಗೆಯುತ್ತಿದ್ದಂತೆ ಸ್ಥಳದಲ್ಲಿದ್ದ ಎಸ್ಪಿ ಪಿನಾಕ್ ಮಿರ್ಶಾ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲೇ ಎಸ್ಪಿಗೆ ಚಿಕಿತ್ಸೆ ನೀಡಿದ ನಂತರ ಅವರನ್ನು ರಕ್ಷಣಾ ಸಿಬ್ಬಂದಿಗಳು ಹೊರಗಡೆ ಕರೆತಂದಿದ್ದಾರೆ. ನಂತರ ಚೇತರಿಸಿಕೊಂಡ ಎಸ್ಪಿ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ದೇವಾಲಯದ ಬಳಿ ನೂರಾರು ಬಾವಲಿಗಳು ಹಾರುತ್ತಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ದೇವಾಲಯದ 4 ದ್ವಾರಗಳಲ್ಲಿ ಬಾವಲಿಗಳಿವೆ. ಆದರೆ, ಇಷ್ಟು ಬಾವಲಿಗಳು ಹಾರುವುದನ್ನು ಇದುವರೆಗೆ ನೋಡಿರದ ಭಕ್ತರು ಭಂಡಾರ ತೆರೆದಾಗ ನೂರಾರು ಬಾವಲಿಗಳು ಹಾರುತ್ತಿರುವುದನ್ನು ಕಂಡು ಬೆರಗಾಗಿದ್ದಾರೆ. ದೇವಾಲಯದ 22 ಮೆಟ್ಟಿಲುಗಳ ಮೇಲೆ ಇಷ್ಟೊಂದು ಬಾವಲಿಗಳು ಹಾರುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಭಕ್ತರು. ಒಂದೆಡೆ ಆಭರಣಗಳನ್ನು ತೆರೆದು ತಪಾಸಣೆ ನಡೆಸಿದರೆ, ಇನ್ನೊಂದೆಡೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನೂರಾರು ಬಾವಲಿಗಳು ಹಾರಾಡುತ್ತಿವೆ.
ಇನ್ನು ರಥ ಬಂಡಾರದ ಒಳಗಿರುವ ವಜ್ರ ಹಾಗೂ ಚಿನ್ನಾಭರಣಗಳು ಜಗನ್ನಾಥ ಮತ್ತು ಪುರಿಯ ರಾಜರಿಗೆ ದಾನವಾಗಿ ಮತ್ತು ಉಡುಗೊರೆಯಾಗಿ ಬಂದ ಅಪರೂಪದ ಆಭರಣಗಳು ರತ್ನ ಭಂಡಾರದ ಹೊರ ಮತ್ತು ಒಳ ಕೋಣೆಗಳಲ್ಲಿವೆ. ಹಾಗೂ ಆಭರಣಗಳು ಸೇರಿ ಅನೇಕ ಬೆಲೆಬಾಳುವ ವಸ್ತುಗಳು ಇದೆ ಎಂದು ಹೇಳಲಾಗುತ್ತಿದೆ.
ಇದೀಗ ಬರೋಬ್ಬರಿ 46 ವರ್ಷಗಳ ಬಳಿಕ ರತ್ನ ಭಂಡಾರವನ್ನು ಮತ್ತೊಮ್ಮೆ ತೆರೆಯಲಾಗಿದೆ. ರತ್ನಭಂಡಾರದ ಬಾಗಿಲು ಓಪನ್ ಮಾಡಿದ ಬಳಿಕ ಶಿಫ್ಟಿಂಗ್ ಸ್ಟ್ರಾಂಗ್ ರೂಮ್ಗೆ ರತ್ನಭಂಡಾರ ರವಾನೆ ಮಾಡಲಾಗಿದೆ. ಬೆಲೆಬಾಳುವ ರತ್ನ ಭಂಡಾರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.