
ಮುಂಬೈ – ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆಯ ಮೂಲಕ “ಐಸ್ಕ್ರೀಮ್ ಮ್ಯಾನ್” ಎಂದು ಖ್ಯಾತಿ ಗಳಿಸಿದ್ದ ಮಂಗಳೂರು ಮೂಲದ ರಘುನಂದನ್ ಕಾಮತ್ ಅವರು ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ…!
ಅವರಿಗೆ 75 ವರ್ಷ ವಯಸ್ಸಾಗಿತ್ತು…!!
ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು…!
ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ, ಇವರು ಪತ್ನಿ, ಪುತ್ರರನ್ನು ಅಗಲಿದ್ದಾರೆ…!!
ಯಾರು ಈ ರಘುನಂದನ್ ಕಾಮತ್…?
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ಹಣ್ಣಿನ ವೈಶಿಷ್ಟ್ಯತೆಗಳನ್ನು ಸರಿಯಾಗಿ ತಿಳಿದುಕೊಂಡಿದ್ದರು…!
ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್ನಲ್ಲಿ ಕೆಲಸ ಪ್ರಾರಂಭಿಸಿದ್ದರು…!!
ನಂತರ 1984ರಲ್ಲಿ ನ್ಯಾಚುರಲ್ ಐಸ್ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯಿಂದ ಪ್ರಾರಂಭಿಸಿದರು…!
ಗ್ರಾಹಕರನ್ನು ತಮ್ಮೆಡೆಗೆ ಸೆಳೆಯಲು ಪಾವ್ ಬಜ್ಜಿ ಜೊತೆ ಐಸ್ಕ್ರೀಂ ನೀಡಲು ಆರಂಭಿಸಿದರು…!!
ಇದಾದ ಕೆಲವೇ ದಿನಗಳಲ್ಲಿ ಇವರ ಐಸ್ಕ್ರೀಂನ ಜನಪ್ರಿಯತೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಐಸ್ಕ್ರೀಂ ರಾರಾಜಿಸತೊಡಗಿತು…!
ಇದಾದ ಮೊದಲ ವಾರದಲ್ಲಿಯೇ ಮುಂಬೈನ ಜುಹೂ ಮಳಿಗೆ ಒಂದೇ ವರ್ಷದಲ್ಲಿ 5 ಲಕ್ಷ ರೂಪಾಯಿ ವಹಿವಾಟು ದಾಖಲಿಸಿತ್ತು…!!
ರಘುನಂದನ್ ಕಾಮತ್ ಅವರ ನ್ಯಾಚುರಲ್ ಐಸ್ಕ್ರೀಂ ಪ್ರಸ್ತುತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರೂಪಾಯಿಗೂ ಅಧಿಕ ವಹಿವಾಟನ್ನು ನಡೆಸುತ್ತಿದೆ…!
ಇವರ ಐಸ್ಕ್ರೀಮ್ ಕಂಪನಿ ದೇಶದ ಟಾಪ್ 10 ಕಂಪನಿಗಳಲ್ಲಿ ಒಂದಾಗಿದೆ…!!