ನಮಸ್ತೆ ಸ್ನೇಹಿತರೆ ಈಗಿನ ಕಾಲದಲ್ಲಿ ಶಿಕ್ಷಣವನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ ಈ ಸಮಸ್ಯೆ ಯಾಕೆಂದರೆ ಆರ್ಥಿಕವಾಗಿ ಕಾಡುತ್ತಿರುವ ಕೆಲವು ಸಮಸ್ಯೆಗಳು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ತುಂಬಾ ಕನಸುಗಳನ್ನು ಕಟ್ಟಿರುತ್ತಾರೆ ಆದರೆ ಆರ್ಥಿಕ ಪರಿಸ್ಥಿತಿ ಅವರ ಕನಸುಗಳ ಜೊತೆ ಆಟವಾಡುತ್ತದೆ ಆದರೆ ಈಗಿನ ಸ್ಥಿತಿಯಲ್ಲಿ ಕೆಲವು ಸಂಸ್ಥೆಗಳು ಹಾಗೂ ಸರಕಾರಗಳು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡುತ್ತಿದೆ.
ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ಸಾಕಷ್ಟು ರೀತಿಯಲ್ಲಿ ಸಹಾಯವಾಗಲಿದೆ ಹಾಗೆ ವಿದ್ಯಾರ್ಥಿಗಳ ಪೀಸ್ ಹಾಗೂ ಇನ್ನಿತರೆ ಪಠ್ಯಪುಸ್ತಕಗಳಿಗಾಗಿ ಸಹಾಯವಾಗುತ್ತದೆ ಆದರೆ ಇವತ್ತು ನಾವು ನಿಮಗೆ ಎರಡು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಹಾಗೂ ಸಂಪೂರ್ಣವಾಗಿ ಓದಿ ನಿಮಗೆ ಇಷ್ಟವಾದರೆ ನೀವು ಈ ಮಾಹಿತಿಯನ್ನು ಶೇರ್ ಮಾಡಿ.
ಈ ದಿನ ನಿತ್ಯ ಧ್ವನಿ ನಿಮಗೆ ಎರಡು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೀಡಲಿದೆ ಹೌದು ಸ್ನೇಹಿತರೆ, ವಿದ್ಯಾರ್ಥಿ ವೇತನ ಯಾಕೆ ಹಾಗೂ ಯಾರಿಗೆ ಬೇಕು ಅನ್ನೋದು ಸ್ಪಷ್ಟವಾಗಿ ನಾವು ಹೇಳಿದ್ದೇವೆ ಅದೇ ರೀತಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಿದ ಮೇಲೆ ಇದು ನಮಗೆ ಹೇಗೆ ಸಿಗುತ್ತದೆ ಹಾಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು? ಅರ್ಹತೆಗಳೇನು ಅನ್ನೋದನ್ನ ನೋಡೋಣ.
ಮೊದಲ ವಿದ್ಯಾರ್ಥಿ ವೇತನ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ 2024- 25 ವೃತ್ತಿಪರ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಅದಕ್ಕೆ ಬಿರ್ಲಾ ಸಂಸ್ಥೆ ಈ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ ಈ ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ.
ಅದಿತಿ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದ ಅರ್ಹತೆಗಳು ಕಳೆದ ಕೆಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಆದಿತ್ಯ ಬಿರ್ಲ ಸಂಸ್ಥೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಇದರಿಂದ ಅನೇಕ ವಿದ್ಯಾರ್ಥಿಗಳು ಅವರ ಕನಸಿನ ವಿದ್ಯಾಭ್ಯಾಸವನ್ನು ಪಡೆದು ವೃತ್ತಿಯನ್ನು ಮಾಡುತ್ತಿದ್ದಾರೆ.
ಅದಿತಿ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದ ಅರ್ಹತೆಗಳು,
ಮಾನ್ಯತೆ ಪಡೆದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ನಾಲ್ಕು ವರ್ಷದ ವೃತ್ತಿಪರ ಪದಗಳಲ್ಲಿ ವಿದ್ಯಾರ್ಥಿ ಓದುತ್ತಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇಕಡ 60ರಷ್ಟು ಅಂಕಗಳನ್ನು ಗಳಿಸಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷವನ್ನು ಮೀರಬಾರದು.
ದೇಶದ ಎಲ್ಲಾ ರಾಜ್ಯಗಳಿಂದ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮಕ್ಕಳಿಗೆ ಈ ಸ್ಕಾಲರ್ಶಿಪ್ ನೀಡಲಾಗುವುದಿಲ್ಲ.
ಈ ಸ್ಕಾಲರ್ ಶಿಪ್ ನಲ್ಲಿ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗಿದೆ.
ಈ ವಿದ್ಯಾರ್ಥಿ ವೇತನದ ಪ್ರಯೋಜನಗಳು ಹಾಗೂ ಮೊತ್ತ.
ವೃತ್ತಿಪರ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 60,000 ದಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಒಂದು ಪಾಸ್ಪೋರ್ಟ್ ಗಾತ್ರದ ಭಾವಚಿತ್ರ.
- ಹಿಂದಿನ ವರ್ಷದ ಅಂಕಪಟ್ಟಿ.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಗುರುತಿನ ಪುರಾವೆ ಆಧಾರ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್.
- ಆರಿಸಲಿಸುವ ವಿದ್ಯಾರ್ಥಿಯ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯ ಪ್ರವೇಶಪುರವೇ.
- ವಿದ್ಯಾರ್ಥಿಯ ಐಡಿ ಕಾರ್ಡ್.
- ಶುಲ್ಕ ರಸಿದಿ.
- ಅರಿಸಲಿಸುವ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30-10-2024
ಇಲ್ಲಿ ನೀಡಿದ ಎಲ್ಲಾ ಮಾಹಿತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆಗಳಲ್ಲಿ ವ್ಯತ್ಯಾಸಗಳಾದಾಗ ಅದನ್ನು ಗಮನಿಸಿ ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಸ್ನೇಹಿತರೆ ಇದಿಷ್ಟು ಆದಿತ್ಯ ಬಿರ್ಲಾ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಈಗ ಮುಂದಿನ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.
ಕೋಲ್ಗೇಟ್ : ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸುವುದು ಹಾಗೂ ಈ ವಿದ್ಯಾರ್ಥಿ ವೇತನವನ್ನು ಪಡೆಯುವುದು ಹೇಗೆ ಅನ್ನೋದನ್ನ ನೋಡೋಣ.
ಕೋಲ್ಲೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ವತಿಯಿಂದ ಕೋಲೇಟ್ ಕೀಪ್ ಇಂಡಿಯಾ ಸ್ಟೈಲಿಂಗ್ ಸ್ಕಾಲರ್‌ಶಿಪ್ ಆರ್ಥಿಕವಾಗಿ ಸಂಕಟದಲ್ಲಿರುವ ವಿದ್ಯಾರ್ಥಿಗಳಿಗಾಗಿ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಈ ವಿದ್ಯಾರ್ಥಿ ವೇತನವನ್ನು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಹಾಗೂ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಈ ವಿದ್ಯಾರ್ಥಿ ವೇತನದ ಮೊತ್ತ 75,000 ಟ್ರೂಗಳನ್ನು ಒಂದೇ ಬಾರಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.
ವಿದ್ಯಾರ್ಥಿ BDS, ಅಥವಾ MDS ಕೋರ್ಸ್ ಅನ್ನು ಓದುತ್ತಿರಬೇಕು.
ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಶೇಕಡ 65 ರಷ್ಟು ಅಂಕಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಸೆಮಿಸ್ಟರ್ನಲ್ಲಿ ಕನಿಷ್ಠ ಶೇಕಡ 60ರಷ್ಟು ಅಂಕಗಳನ್ನು ಗಳಿಸಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಖಾಸಗಿ ಅಥವಾ ಸರಕಾರಿ ಸಂಸ್ಥೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ದಾಖಲಾಗಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಮೀರಬಾರದು.
ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಇತ್ತೀಚಿನ ಒಂದು ಫೋಟೋ.
- ಆದಾಯ ಪ್ರಮಾಣ ಪತ್ರ.
- ಕಾಲೇಜು ಪ್ರವೇಶಪುರವೇ.
- ಶುಲ್ಕದ ರಶೀದಿ.
- ಬ್ಯಾಂಕ್ ಖಾತೆಯ ಮಾಹಿತಿ.
- ಹಿಂದಿನ ವಿದ್ಯಾಭ್ಯಾಸದ ಅಂಕಪಟ್ಟಿ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31-10-2024
ಸ್ನೇಹಿತರೆ ಇದಿಷ್ಟು ಕೋಲ್ಗೇಟ್ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಬೇಕಾದ ಎಲ್ಲ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಗೂ ಓದಿಕೊಂಡು ಅರ್ಜಿಯನ್ನು ಸಲ್ಲಿಸಿ. ನೀವು ಸಲ್ಲಿಸಿದ ದಾಖಲೆಗಳು ತಪ್ಪಾದಲ್ಲಿ ಗಮನಿಸಿ ನೀವು ಗಮನಿಸದೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯು ತಿರಸ್ಕಾರ ಗೊಳ್ಳುತ್ತದೆ ನೀವು ಸಲ್ಲಿಸಿದ ಅರ್ಜಿ ವ್ಯರ್ಥವಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸುವಾಗ ಗಮನಿಸಿ ಅರ್ಜಿಯನ್ನು ಸಲ್ಲಿಸಿ.
ಸ್ನೇಹಿತರೆ ನಿತ್ಯ ಧ್ವನಿ ಒದಗಿಸುತ್ತಿರುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾದರೆ ನೀವು ಈ ಮಾಹಿತಿಗಳನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ಹಂಚಿಕೊಳ್ಳಿ ಈ ಮಾಹಿತಿಗಳು ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯವಾಗಬಹುದು.
ನಿತ್ಯ ದ್ವನಿ ಸತ್ಯ ಹಾಗೂ ನೈಜ್ಯ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.