ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳ ನಿರ್ಮಾಣವನ್ನು ಯುಗಯುಗಗಳಿಂದ ಮಾಡಿಕೊಂಡು ಬಂದಿದ್ದಾರೆ ರಾಮಾಯಣ ಮಹಾಭಾರತ ಕಾಲದಲ್ಲಿಯೂ ವಿಗ್ರಹಗಳ ಕೆತ್ತನೆ ಹಾಗೂ ದೇವಸ್ಥಾನಗಳ ನಿರ್ಮಾಣ ನಡೆಯುತ್ತಿತ್ತು ಹಾಗೆ ಇವತ್ತಿಗೂ ಕೂಡ ದೇಶದ ಹಲವು ಭಾಗಗಳಲ್ಲಿ ಶ್ರೀರಾಮಚಂದ್ರನು ಪ್ರತಿಷ್ಠಾಪಿಸಿ ಪೂಜಿಸಿದಂತಹ ಅನೇಕ ದೇವರ ವಿಗ್ರಹಗಳು ಹಾಗೂ ಶಿವಲಿಂಗಗಳು ದೇವಾಲಯಗಳು ನಮಗೆ ನೋಡಲು ಸಿಗುತ್ತದೆ
ಹಾಗೆ ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದಲ್ಲಿ ಇದ್ದಾಗ ಅನೇಕ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದರು ಹಾಗೂ ಅಲ್ಲಿ ತಾವೇ ಪೂಜಿಸಿ ಆ ದೇವಸ್ಥಾನದ ಹಾಗೂ ಆ ದೇವರ ಮಹತ್ವವನ್ನು ಲೋಕಕ್ಕೆ ತಿಳಿಸಿದ್ದರು.
ಹೌದು ಸ್ನೇಹಿತರೆ, ಭಾರತದಲ್ಲಿ ಪುರಾಣಪ್ರಸಿದ್ಧವಾದಂತಹ ದೇವಾಲಯಗಳು ಸಾಕಷ್ಟು ಇವೆ ಸನಾತನ ಹಿಂದೂ ಧರ್ಮದಲ್ಲಿ ದೇವಾಲಯ ಎಂದರೆ ಅಲ್ಲಿ ಸಾಕ್ಷಾತ್ ಭಗವಂತ ನೆಲೆಸಿರುತ್ತಾನೆ ನಂಬಿದಂತಹ ದೇವರು ಆ ದೇವಾಲಯದಲ್ಲಿ ವಾಸಿಸುತ್ತಾನೆ ಬಂದ ಭಕ್ತರ ಎಲ್ಲಾ ಕಷ್ಟಗಳನ್ನ ದೂರ ಮಾಡಿ ಸುಖ ಶಾಂತಿಯ ನೆಮ್ಮದಿಯ ಜೀವನವನ್ನು ನೀಡುತ್ತಾನೆ ಎನ್ನುವಂತಹ ನಂಬಿಕೆ ಇವತ್ತಿಗೂ ಕೂಡ ಆಳವಾಗಿ ನಿಂತಿದೆ.
ಅದೇ ರೀತಿ ಪುರಾಣಪ್ರಸಿದ್ಧವಾದ ಅಂತಹ ಹಾಗೂ ಮಹಾಭಾರತ ರಾಮಾಯಣ ಕಾಲಕ್ಕೂ ಸಂಬಂಧ ಇರುವಂತಹ ಒಂದು ವಿಶೇಷವಾದ ದೇವಾಲಯದ ಬಗ್ಗೆ ಇವತ್ತಿನ ಕ್ಷೇತ್ರ ಪರಿಚಯದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಲೇಖನವು ನಿಮಗೆ ಇಷ್ಟವಾದರೆ ದಯವಿಟ್ಟು ಈ ಮಾಹಿತಿಯನ್ನು ಹಂಚಿಕೊಳ್ಳಿ.
ಉತ್ತರ ಕನ್ನಡ ಜಿಲ್ಲೆ ಸುಂದರ ಪ್ರಕೃತಿಯ ನಡುವೆ ಇರುವಂತಹ ಈ ಜಿಲ್ಲೆ ಸಾಕ್ಷಾತ್ ಪ್ರಕೃತಿ ಮಾತೆಯೇ ಹಸಿರು ಹೊದಿಕೆಯನ್ನು ಹೊದಿಸಿದಂತೆ ಕಂಗೊಳಿಸುತ್ತದೆ ಈ ಜಿಲ್ಲೆಯಲ್ಲಿ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ ಇಂದಿಗೂ ಕೂಡ ಭಕ್ತರ ಎಲ್ಲಾ ಕೋರಿಕೆಗಳನ್ನು ಈಡೇರಿಸುವಂತಹ ಪ್ರಸಿದ್ಧ ದೇವಾಲಯಗಳು ಕೂಡ ಇದೇ ಜಿಲ್ಲೆಯಲ್ಲಿ ಇವೆ ಇವತ್ತು ನಾವು ಒಂದು ವಿಶೇಷವಾದಂತಹ ದೇವಾಲಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಬೆಡಸಗಾಂವ ಗ್ರಾಮದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಗ್ಗೆ ಈ ದೇವಾಲಯ ತನ್ನದೇ ಆದಂತಹ ಮಹತ್ವ ಹಾಗೂ ಇತಿಹಾಸವನ್ನು ಹೊಂದಿದೆ ರಾಮಾಯಣ ಮಹಾಭಾರತ ಕಾಲಕ್ಕೂ ಸಂಬಂಧವನ್ನು ಹೊಂದಿದೆ.
ಕಷ್ಟ ಎಂದು ಬಂದ ಭಕ್ತರ ಎಲ್ಲಾ ಕಷ್ಟವನ್ನು ಪರಿಹರಿಸಿ ಅವರಿಗೆ ನೆಮ್ಮದಿಯನ್ನು ನೀಡುವ ದೇವಾಲಯವಾಗಿದೆ ಇದು ಹಾಗೆ ಈ ದೇವಾಲಯದಲ್ಲಿ ಮಕ್ಕಳು ಆಗದೇ ಇದ್ದವರು ಹರಿಕೆಯನ್ನು ಕಟ್ಟಿಕೊಂಡರೆ ಅವರಿಗೆ ಸಂತಾನ ಭಾಗ್ಯವನ್ನು ಇಲ್ಲಿ ನೆಲೆ ನಿಂತಿರುವ ಶಿವನು ಕರುಣಿಸುತ್ತಾನೆ ಈ ದೇವಾಲಯದ ನೈರುತ್ಯ ದಿಕ್ಕಿನಲ್ಲಿ ಇರುವ ಕಲ್ಯಾಣಿಯಲ್ಲಿ ಸ್ನಾನವನ್ನು ಮಾಡಿದರೆ ಖನ್ನತೆಯಿಂದ ಬಳಲುತ್ತಿರುವವರು ಹೊರಗಡೆ ಬರುತ್ತಾರೆ ಹಾಗೂ ಅವರ ಮಾನಸಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಂಬಲಾಗಿದೆ .
ಈ ದೇವಾಲಯದ ಸ್ಥಳ ಪುರಾಣ
ಶ್ರೀ ರಾಮಲಿಂಗೇಶ್ವರ ದೇವಾಲಯದ ಸ್ಥಳ ಪುರಾಣ ನೋಡುವುದಾದರೆ ಹಿಂದೆ ತ್ರತಾಯುಗದಲ್ಲಿ ಶ್ರೀರಾಮಚಂದ್ರನು ಹಾಗೂ ಸೀತಾಮಾತೆ ಲಕ್ಷ್ಮಣ ವನವಾಸಕ್ಕೆ ಬಂದಾಗ ಈ ಭಾಗದಲ್ಲಿ ಕುಡಿಯಲು ನೀರು ಅವರಿಗೆ ಸಿಗೋದಿಲ್ಲ ಆಗ ಅವರು ನೀರನ್ನು ಸುತ್ತಲೂ ಹುಡುಕುತ್ತಾರೆ ನೀರು ಸಿಗದ ಕಾರಣ ಅವರು ಈ ದೇವಾಲಯದ ನೈರುತ್ಯ ದಿಕ್ಕಿನಲ್ಲಿ ಇರುವ ಕರಿಬಂಡೆಯ ಕಲ್ಲಿಗೆ ಶ್ರೀರಾಮನು ಬಾಣವನ್ನು ಬಿಡುತ್ತಾನೆ ಆಗ ಆ ಕರಿಬಂಡೆಯ ಕಲ್ಲಿನಿಂದ ನೀರು ಚಿಮ್ಮುತ್ತದೆ ನಂತರ ಅದೇ ನೀರನ್ನು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ಅಭಿಷೇಕವನ್ನು ಮಾಡಿದ ಎಂದು ನಂಬಲಾಗಿದೆ.
ಹಾಗೆ ಇನ್ನೊಂದು ದಂತಕತೆಯ ಪ್ರಕಾರ
ಮಹಾಭಾರತದ ಕಥೆಗಳ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ ಮಹಾಭಾರತದಲ್ಲಿಯು ಕೂಡ ಪಾಂಡವರು ವನವಶಕ್ಕೆ ಹೋಗುತ್ತಾರೆ. ಪಾಂಡವರು ವನವಾಸಕ್ಕೆ ಈ ಪ್ರದೇಶಕ್ಕೆ ಬಂದಾಗ ಇಲ್ಲಿರುವ ಶಿವನ ಮಹಿಮೆಯನ್ನು ಅರಿತು ಅವರು ಈ ದೇವಾಲಯವನ್ನು ಒಂದು ರಾತ್ರಿ ಕಳೆಯುವುದರ ಒಳಗೆ ನಿರ್ಮಾಣ ಮಾಡಿದ್ದರು ಆನಂತರ ಬೆಳಿಗ್ಗೆ ಕೋಳಿ ಕೂಗಿದ ಸದ್ದನ್ನು ಕೇಳಿ ಅವರು ಇಲ್ಲಿಂದ ಹೋದರು ಎನ್ನುವಂತಹ ಒಂದು ನಂಬಿಕೆ ಇದೆ.
ಅದಾದ ನಂತರ ಬಿಜಳರ ಕಾಲದಲ್ಲಿ ಈ ದೇವಾಲಯ ಹಾಗೂ ಈ ದೇವಾಲಯ ಇರುವ ಬೆಡಸಗಾಂವ ಗ್ರಾಮ ಉಪರಾಜಧಾನಿ ಆಗಿತ್ತು ಹಾಗೂ ವ್ಯಾಪಾರಿ ಕೇಂದ್ರವಾಗಿತ್ತು ಅದಾದ ನಂತರ ಕದಂಬರ ಕಾಲದಲ್ಲಿಯೂ ಕೂಡ ಇದು ವ್ಯಾಪಾರ ಕೇಂದ್ರವಾಗಿ ಮೆರೆದಿತ್ತು ಇದಕ್ಕೆ ಸಾಕ್ಷಿ ಎನ್ನುವಂತೆ ಇವತ್ತಿಗೂ ಕೂಡ ಇಲ್ಲಿ ಅನೇಕ ಶಾಸನಗಳು ನೋಡಲು ಸಿಗುತ್ತದೆ.
ಅದಾದ ನಂತರ ಅನೇಕ ರಾಜರು ಈ ಭಾಗದಲ್ಲಿ ಅನೇಕ ದೇವಾಲಯಗಳನ್ನು ಕೂಡ ನಿರ್ಮಾಣ ಮಾಡಿದರೆ ಎಂದು ಸ್ಥಳೀಯರು ಹೇಳುತ್ತಾರೆ ಇದೇ ದೇವಾಲಯದ ಪಕ್ಕದಲ್ಲಿ ಎರಡು ಶಿವನ ದೇವಾಲಯಗಳು ಹಾಗೂ ಆಂಜನೇಯ ಸ್ವಾಮಿ ದೇವಾಲಯ ಬೆಟ್ಟದ ಮೇಲ್ಗಡೆ ಶ್ರೀ ವೀರಭದ್ರ ಸ್ವಾಮಿ ದೇವಾಲಯ ಕೂಡ ಇವೆ.
ಹಾಗೆ ಅವದೂತರಾದಂತಹ ಶ್ರೀ ಸದ್ಗುರು ಕಲ್ಲೇಶ್ವರ ಸ್ವಾಮೀಜಿಯವರು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸಿದರು ಹಾಗೆ ಶಿವಲಿಂಗ ಹಾಗೂ ನಂದಿ ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಿದ್ದಾರೆ ಕಲ್ಲೇಶ್ವರ ಮಹಾಸ್ವಾಮಿಯವರು ಜನಿಸಿದ್ದು ಸೊರಬ ತಾಲೂಕಿನ ಕೊಡಕಣಿ ಗ್ರಾಮದಲ್ಲಿ, 1975ನೇ ಇಸ್ವಿಯಲ್ಲಿ ಈ ಕ್ಷೇತ್ರಕ್ಕೆ ಬಂದು ಇಲ್ಲಿ ತಪಸ್ಸನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಹಾಗೆ 1942ನೇ ಇಸವಿಯಲ್ಲಿ ದೇವಾಲಯದ ಆವರಣದಲ್ಲಿ ನಿಧಿಗಳ ಶೋಧಕಾಗಿ ಕಳ್ಳರ ಗುಂಪೊಂದು ಬರುತ್ತದೆ ಆ ಸಂದರ್ಭದಲ್ಲಿ ಬಂಗಾರಿ, ಬಸವಣಿ ಪಾಟೀಲ್ ಎಂಬುವರು ಕಳ್ಳರನ್ನು ಓಡಿಸುತ್ತಾರೆ ಆ ಸಂದರ್ಭದಲ್ಲಿ ಅವರ ಗುಂಡಿಗೆ ಒಬ್ಬ ಕಳ್ಳನು ಸಾಯುತ್ತಾನೆ ಅದಾದ ನಂತರ ಅವರನ್ನು ಜೈಲಿಗೆ ಹಾಕುತ್ತಾರೆ ಆದರೆ ಜೈಲಿನಲ್ಲಿ ಬಂಗಾರಿ ಪಾಟೀಲ್ ಅವರಿಗೆ ಶಿಕ್ಷೆ ಆಗುತ್ತದೆ ಆ ಸಂದರ್ಭದಲ್ಲಿ ಬಂಗಾರಿ ಬಸವಣಿ ಪಾಟೀಲ್ ಅವರು ಜೈಲಿನಲ್ಲಿ ಒಂದು ಹರಿಕೆಯನ್ನು ಕಟ್ಟಿಕೊಳ್ಳುತ್ತಾರೆ ನನಗೆ ಬಿಡುಗಡೆ ಆದರೆ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವವನ್ನು ಮಾಡುತ್ತೇನೆ ಎಂದು ಹರಿಕೆಯನ್ನು ಕಟ್ಟಿಕೊಳ್ಳುತ್ತಾರೆ ಅದಾದ ಸ್ವಲ್ಪ ದಿನದಲ್ಲಿಯೇ ಅವರು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬರುತ್ತಾರೆ ಅವರ ನೆನಪಿಗಾಗಿ ಗ್ರಾಮಸ್ಥರು ಎಂದಿಗೂ ಕೂಡ ದೇವಾಲಯದಲ್ಲಿ ಪ್ರತಿ ವರ್ಷವೂ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಸ್ನೇಹಿತರೆ ಆದರೆ ಈ ದೇವಾಲಯಗಳು ಯಾವುದೇ ಅಭಿವೃದ್ಧಿಯನ್ನು ಕಾಣಲಿಲ್ಲ ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ದೇವಾಲಯವನ್ನು ದ್ವಂಸ ಮಾಡಲು ಮೊಘಲರಾದರು ಅಕ್ರಮಣ ಮಾಡುತ್ತಾರೆ ಆ ಸಂದರ್ಭದಲ್ಲಿ ಸ್ಥಳೀಯರು ದೇವಾಲಯಗಳನ್ನು ರಕ್ಷಿಸಿಕೊಳ್ಳಲು ಕೆಂಪು ಕಲ್ಲುಗಳಿಂದ ದೇವಾಲಯವನ್ನು ಮುಚ್ಚುತ್ತಾರೆ ಅದಾದ ನಂತರ ದೇವಾಲಯವನ್ನು ಸಂರಕ್ಷಣೆ ಮಾಡುತ್ತಾರೆ ಎಂದು ಹೇಳುತ್ತಾರೆ ಆದರೆ ಹಿಂದೆ ಮುಚ್ಚಿದ ಕೆಂಪು ಕಲ್ಲು ಇವತ್ತಿಗೂ ಕೂಡ ಹಾಗೆ ಇದೆ,
ಈ ಕೆಂಪು ಕಲ್ಲುಗಳನ್ನ ತೆರವು ಮಾಡಿ ಈ ದೇವಾಲಯಗಳನ್ನು ಸಂರಕ್ಷಿಸಬೇಕಾಗಿದೆ ಹಾಗೂ ದೇವಾಲಯಗಳ ಗತ ವೈಭವಗಳು ಮತ್ತೆ ಮರುಕಳಿಸಬೇಕಾಗಿದೆ ಬೆಟ್ಟದ ಮೇಲೆ ಇರುವ ವೀರಭದ್ರ ಸ್ವಾಮಿ ದೇವಾಲಯ ಹಾಗೂ ಎರಡು ಶಿವನ ದೇವಾಲಯ ಹಾಗೂ ಆಂಜನೇಯ ಸ್ವಾಮಿ ದೇವಾಲಯ ಇವೆಲ್ಲವೂ ಕೂಡ ತನ್ನದೇ ಆದಂತಹ ಇತಿಹಾಸ ಹಾಗೂ ಮಹತ್ವವನ್ನು ಹೊಂದಿದೆ,
ಇವತ್ತು ಸಮಾಜದ ಕರ್ತವ್ಯ ಏನು ಅಂದರೆ ಅಧ್ಯಾತ್ಮ ಹಾಗೂ ಧಾರ್ಮಿಕ ಪುರಾಣ ಪ್ರಸಿದ್ಧವಾದ ಅಂತಹ ದೇವಾಲಯಗಳನ್ನು ಸಂರಕ್ಷಿಸಬೇಕಾಗಿದೆ ಈ ದೇವಾಲಯವನ್ನು ಅಭಿವೃದ್ಧಿ ಮಾಡಲು ದೊಡ್ಡ ಮೊತ್ತದ ಧನದ ಸಹಾಯವು ಕೂಡ ಬೇಕಾಗುತ್ತದೆ ಇದುವರೆಗೆ ಈ ಊರಿನ ಗ್ರಾಮಸ್ಥರು ಒಂದು ಕಮಿಟಿಯನ್ನ ರಚನೆ ಮಾಡಿಕೊಂಡು ಕೆಲವು ಧಾನಿಗಳಿಂದ ಹಣವನ್ನು ಸಂಗ್ರಹಿಸಿ ದೇವಾಲಯದಲ್ಲಿ ಸಣ್ಣ ಸಣ್ಣ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಹಾಗೆ ಕೆಂಪುಕಲ್ಲಿನಿಂದ ಮುಚ್ಚಿರುವ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬೇಕೆಂದು ಈ ಗ್ರಾಮಸ್ಥರ ಒಂದು ಆಸೆ ಹಾಗೂ ಇದು ಅವರ ಆಸೆ ಅನ್ನೋದಕ್ಕಿಂತ ಸನಾತನ ಹಿಂದೂ ಧರ್ಮದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಬಹುದು ಹಾಗಾಗಿ ಈ ದೇವಾಲಯಗಳ ಅಭಿವೃದ್ಧಿಗಾಗಿ ಇನ್ನು ಸಾಕಷ್ಟು ಹಣ ಬೇಕಾಗುತ್ತದೆ ಸಮಾಜದ ಎಲ್ಲ ಬಂಧುಗಳು ಈ ದೇವಸ್ಥಾನದ ಅಭಿವೃದ್ಧಿಯ ಜೊತೆ ಕೈಜೋಡಿಸಬೇಕು ಎಂದು ಈ ಗ್ರಾಮಸ್ಥರು ಹಾಗೂ ಕಮಿಟಿಯ ಸದಸ್ಯರು ಅಧ್ಯಕ್ಷರು ಕಾರ್ಯದರ್ಶಿಗಳು ಕೇಳಿಕೊಳ್ಳುತ್ತಿದ್ದಾರೆ.
ಹಾಗೆ ಈ ದೇವಾಲಯದ ಮಹತ್ವವು ಕೂಡ ಬಹಳಷ್ಟು ಇದೆ ಉದಾಹರಣೆ ನಾವು ಮೊದಲೇ ಹೇಳಿದ ಹಾಗೆ ಇಲ್ಲಿ ಹರಿಕೆಗಳನ್ನ ಕಟ್ಟಿಕೊಂಡರೆ ಭಕ್ತರ ಎಲ್ಲ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಹಾಗೆ ಈ ದೇವಾಲಯಕ್ಕೆ ಮಹಾರಾಷ್ಟ್ರ ಗೋವಾ ಹಾಗೂ ದೇಶದ ಬೇರೆಬೇರೆ ಭಾಗಗಳಿಂದ ಭಕ್ತಾದಿಗಳು ಇಂದಿಗೂ ಕೂಡ ಬಂದು ಕಟ್ಟಿಕೊಂಡ ಹರಿಕೆಯನ್ನು ತೀರಿಸಿ ಹೋಗುತ್ತಾರೆ.
ಈ ದೇವಾಲಯದ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಮಾಡುವ ಜವಾಬ್ದಾರಿ ಹಿಂದು ಸಮಾಜದಾಗಿದೆ ಎಲ್ಲರೂ ಸೇರಿ ಈ ದೇವಾಲಯದ ಜನೋದ್ಧಾರವನ್ನು ಮಾಡಬೇಕಾಗಿದೆ ಹಾಗೂ ಈ ದೇವಾಲಯದ ಪಕ್ಕದಲ್ಲಿ ಇರುವ ಇನ್ನೂ ಎರಡು ಶಿವನ ದೇವಾಲಯ ಹಾಗೂ ಬೆಟ್ಟದ ಮೇಲೆ ಇರುವ ವೀರಭದ್ರ ಸ್ವಾಮಿ ದೇವಾಲಯವು ಕೂಡ ಅಭಿವೃದ್ಧಿ ಆಗಬೇಕಾಗಿದೆ ಹಾಗಾಗಿ ದೇವಸ್ಥಾನದ ಅಭಿವೃದ್ಧಿಯ ಕಾರ್ಯಗಳ ಜೊತೆ ಕೈಜೋಡಿಸಲು ಬಯಸುವವರು ದೇವಸ್ಥಾನಕ್ಕೆ ದೆನಿಗೆ ನೀಡುವವರು ದೇವಾಲಯದ ಬ್ಯಾಂಕ್ ಖಾತೆಗೆ ಅಥವಾ ಯುಪಿಐ ಸ್ಕ್ಯಾನರ್ ಐಡಿಗೆ ದೇಣಿಗೆಯನ್ನು ನೀಡಬಹುದು.
ದೇವಸ್ಥಾನಕ್ಕೆ ದೇಣಿಗೆ ನೀಡುವ ಭಕ್ತಾಧಿಗಳು
Bank name : VIKAS GRAMEENA BANK
Account number: 00000890077457332
IFSC CODE: KVGB0009404
SHRI RAMALINGESHWAR DEVASTANA SEVA SAMITHI
ಈ ದೇವಾಲಯಕ್ಕೆ ತಲುಪುವ ಮಾರ್ಗ
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ್ ತಾಲೂಕು ಬೆಡಸಗಾಂವ ಗ್ರಾಮದಲ್ಲಿದೆ ಶಿರಸಿ ಇಂದ 35 ಕಿಲೋಮಿಟರ್ ದೂರದಲ್ಲಿದೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಹಾಗೂ ದೇವಸ್ಥಾನಕ್ಕೆ ಇನ್ನು ಹೆಚ್ಚಿಗೆ ದೈನಗೆ ಬಂದು ಆದಷ್ಟು ಬೇಗ ದೇವಸ್ಥಾನಗಳು ಜೀರ್ಣೋದ್ಧಾರ ಮಾಡಲು ಬಯಸಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಖಾತೆ ಗಳಲ್ಲಿ ಹಂಚಿಕೊಳ್ಳಿ.
ಹಿಂದೂ ದೇವಾಲಯಗಳ ಸಂರಕ್ಷಣೆ ಹಿಂದುಗಳ ಆದ್ಯ ಕರ್ತವ್ಯ